ಮುಖ್ಯ ಸುದ್ದಿ
Application; ಮೀನುಗಾರಿಕೆ ಇಲಾಖೆ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Published on
CHITRADURGA NEWS | 30 AUGUST 2024
ಚಿತ್ರದುರ್ಗ: ಮೀನು(fish)ಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಜಿಲ್ಲಾವಲಯ ಮತ್ತು ರಾಜ್ಯವಲಯ ಯೋಜನೆಯಡಿ ಫಲಾನಭವಿ ಆಧಾರಿತ ಯೋಜನೆಗಳಾದ ಬಾವಿ ಮತ್ತು ಹೊಂಡಗಳಿಗೆ ಉಚಿತ ಮೀನುಮರಿ ಸರಬರಾಜು, ಮೀನುಮರಿ ಖರೀದಿಗೆ ಸಹಾಯ, ಮೀನು ಮಾರಾಟಕ್ಕೆ ದ್ವಿಚಕ್ರ ವಾಹನ ಖರೀದಿಗೆ ಸಹಾಯ, ಮೀನುಗಾರಿಕೆ ಸಲಕರಣೆ ಕಿಟ್ಟು ಪಡೆಯಲು ಸಹಾಯ ಇತ್ಯಾದಿ ಯೋಜನೆಗಳಲ್ಲಿ ಪ್ರಯೋಜನ ಪಡೆಯಲು ಆಸಕ್ತರಿಂದ ಅರ್ಜಿ(Application) ಆಹ್ವಾನಿಸಲಾಗಿದೆ.
ಕ್ಲಿಕ್ ಮಾಡಿ ಓದಿ: City council election: ‘ಕೈ’ ಬಲಪಡಿಸಿದ ಜೆಡಿಎಸ್ | ಚಳ್ಳಕೆರೆ ನಗರಸಭೆ ಕಾಂಗ್ರೆಸ್ ತಕ್ಕೆಗೆ

ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕುಮಟ್ಟದ ಕಚೇರಿಗೆ, ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 30 ಅರ್ಜಿ ಸಲ್ಲಿಸಲು ಕಡೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
Continue Reading
Related Topics:Application, Chitradurga, Chitradurga news, Department of Fisheries, Different plan, Kannada Latest News, ಅರ್ಜಿ, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಮೀನುಗಾರಿಕೆ ಇಲಾಖೆ, ವಿವಿಧ ಯೋಜನೆ

Click to comment