ಕ್ರೈಂ ಸುದ್ದಿ
ಬಂಡೆ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ | ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

Published on
CHITRADURGA NEWS 03 JANUARY 2024
ಚಿತ್ರದುರ್ಗ: ಬಂಡೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಬಳಿ ಟ್ರ್ಯಾಕ್ಟರ್‍ನ ಟೈಯರ್ ಬ್ಲಾಸ್ಟ್ ಆಗಿ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಮಕ್ಕಳ ಕಳ್ಳತನ ಪ್ರಕರಣದ್ದು ಬೇರೆ ಕಥೆ | ಪೊಲೀಸರ ಬಳಿ ಮಕ್ಕಳು ಹೇಳಿದ್ದೇ ಬೇರೆ
ಚಳ್ಳಕೆರೆ ತಾಲೂಕು ರೇಣುಕಾಪುರದ ಶಂಕರನಾಗ(38) ಮೃತ ವ್ಯಕ್ತಿ. ಆಂಧ್ರಪ್ರದೇಶ ಮೂಲದ ಇಬ್ಬರು ಗಾಯಾಳುಗಳನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಳುಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪಿಎಸ್‍ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Continue Reading
Related Topics:accident, Bande, Challakere, Chitradurga, Chitradurga news, Kannada News, Taluku Police, Tire Blast, Tractor, ಅಪಘಾತ, ಕನ್ನಡ ಸುದ್ದಿ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಟೈಯರ್ ಬ್ಲಾಸ್ಟ್, ಟ್ರ್ಯಾಕ್ಟರ್, ತಳುಕು ಪೊಲೀಸ್, ಬಂಡೆ

Click to comment