
CHITRADURGA NEWS | 13 NOVEMBER 2025
ಚಿತ್ರದುರ್ಗ: ಪ್ರತಿಯೊಬ್ಬ ನಾಗರೀಕನಿಗೂ ನಮ್ಮ ಇತಿಹಾಸದ ಪ್ರಜ್ಞೆ ತುಂಬಾ ಮುಖ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಹೇಳಿದರು.
ಇದನ್ನೂ ಓದಿ: B.Ed ಪ್ರವೇಶಾತಿ | ದಾಖಲೆ ಪರಿಶೀಲಿಸಲು ನ.15 ಕೊನೆ ದಿನ
ನಗರದ ತರಳಬಾಳು ಆಂಗ್ಲಮಾಧ್ಯಮಶಾಲೆಯಲ್ಲಿ ಗುರುವಾರ ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕವು ಸುಪ್ರಸಿದ್ಧ ಶಿಲ್ಪಕಲೆಯನ್ನು ಹೊಂದಿದ್ದು, ಚಿತ್ರದುರ್ಗ ಕೋಟೆ, ಹಂಪಿಯ ಸ್ಮಾರಕಗಳ ನಿರ್ಮಾಣದಲ್ಲಿ ಜಲಪೂರಣ, ರಾಜ್ಯವು ವಿಭಿನ್ನ ಉಡುಪು, ವಿಭಿನ್ನ ಭಾಷಾಶೈಲಿ, ಆಹಾರ ಪದ್ಧತಿಯಲ್ಲಿ ವಿಭಿನ್ನತೆಯನ್ನು ವಿವರಿಸಿದರು.
ಸಮಾಜ ವಿಜ್ಞಾನ ಪರಿವೀಕ್ಷಕ ಹಾಗೂ ನೋಡಲ್ ಅಧಿಕಾರಿ ಕೆ.ಜೆ.ಪ್ರಶಾಂತ್ ಮಾತನಾಡಿ, ನಮ್ಮ ಇತಿಹಾಸ ನಮ್ಮ ಹೆಮ್ಮೆ, ನಮ್ಮ ರಾಜ್ಯ ಇತಿಹಾಸ ಪ್ರಸಿದ್ಧ ವಾಸ್ತುಶಿಲ್ಪ ಶೈಲಿಗಳನ್ನು ವಿವರಿಸಿ, ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ, ಆಸಕ್ತಿ ಈಗಿನಿಂದಲೇ ರೂಢಿಸಿಕೊಳ್ಳವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಇದನ್ನೂ ಓದಿ: ಟೇಕ್ವಾಂಡೋ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಶಾಲೆಗೆ ಬಂಗಾರದ ಪದಕ | ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಜಿಲ್ಲೆಯಿಂದ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿಜೇತರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ನಿತ್ಯಾನಂದ, ರಂಗಾನಾಯ್ಕ್, ಡಯಟ್ ಉಪನ್ಯಾಸಕ ಬಸವರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್, ಚಿತ್ರಕಲಾ ಶಿಕ್ಷಕ ದಾದಾಪೀರ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

