
CHITRADURGA NEWS | 17 July 2026
ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)ಉದ್ಯೋಗ ಕ್ಷೇತ್ರದಲ್ಲಿ ಅನುಕೂಲಕರ ಬದಲಾವಣೆಗಳು ಸಂಭವಿಸಿ, ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಕೈಗೊಂಡ ಪ್ರಯಾಣಗಳು ಲಾಭದಾಯಕವಾಗಿದ್ದು, ಹೊಸ ಕಾರ್ಯಗಳಿಗೆ ಚಾಲನೆ ನೀಡುವಿರಿ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ನೀಲಿ
ವೃಷಭ: (ಇ, ಓ, ಎ, ಒ, ವಾ, ವಿ, ವು, ವೆ, ವೊ) ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ವಸ್ತುಗಳು ಅಥವಾ ಗೃಹೋಪಯೋಗಿ ಸಾಮಗ್ರಿಗಳನ್ನು ಖರೀದಿಸುವ ಅವಕಾಶ ದೊರೆಯುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಒಳಿತು. ಸಹೋದರ-ಸಹೋದರಿಯರಿಂದ ನಿರೀಕ್ಷಿತ ಬೆಂಬಲ ಲಭಿಸುತ್ತದೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಕೆಂಪು
ಮಿಥುನ: (ಕಾ, ಕೀ, ಕೂ, ಘ, ಛ, ಕೆ, ಕೊ, ಹ) ಕೆಲಸದ ಒತ್ತಡ ಹೆಚ್ಚಿದ್ದರೂ ದೃಢಸಂಕಲ್ಪದಿಂದ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ವ್ಯವಹಾರದಲ್ಲಿ ಪಾಲುದಾರರೊಂದಿಗೆ ಮಾತನಾಡುವಾಗ ಆತುರ ಬೇಡ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಿ, ದೇವರ ದರ್ಶನ ಪಡೆಯುವಿರಿ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಹಸಿರು
ಕರ್ಕ: (ದಾ, ದೇ, ದು, ದೇ, ದೋ, ಹೂ, ಹೆ, ಹೋ)ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚುತ್ತದೆ. ಅನಿರೀಕ್ಷಿತವಾಗಿ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಔತಣ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ಅದೃಷ್ಟದ ದಿಕ್ಕು:ಆಗ್ನೇಯ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ಬೂದು
ಸಿಂಹ: (ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ)ಸಮಾಜದಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ. ಇವು ಮುಂದಿನ ದಿನಗಳಲ್ಲಿ ನಿಮ್ಮ ವ್ಯವಹಾರ ಅಭಿವೃದ್ಧಿಗೆ ಸಹಕಾರಿಯಾಗಲಿವೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ಕೋಪವನ್ನು ನಿಯಂತ್ರಿಸಿಕೊಂಡರೆ ಸಂಬಂಧಗಳು ಉತ್ತಮವಾಗಿರುತ್ತವೆ. ಅದೃಷ್ಟದ ದಿಕ್ಕು:ಆಗ್ನೇಯ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ಹಳದಿ
ಕನ್ಯಾ: (ಪಾ, ಪೀ, ಪೂ, ಷ, ಣ , ಪೆ , ಪೊ) ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ವರ್ಗಾವಣೆ ಅಥವಾ ಪದೋನ್ನತಿಯ ಸೂಚನೆಗಳು ಕಂಡುಬರುತ್ತವೆ. ಆರ್ಥಿಕ ತೊಂದರೆಗಳು ಬಹುತೇಕ ನಿವಾರಣೆಯಾಗುತ್ತವೆ ಹಾಗೂ ಆದಾಯ ಸ್ಥಿರವಾಗಿರುತ್ತದೆ. ಕುಟುಂಬದಲ್ಲಿ ಶಾಂತ ವಾತಾವರಣವಿದ್ದು, ಆರೋಗ್ಯ ಸಹಕಾರಿಯಾಗಿರುತ್ತದೆ.ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ನೇರಳೆ
ತುಲಾ: (ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ)ಕೈಗೊಂಡ ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗುವ ಸಾಧ್ಯತೆ ಇದೆ. ಆದ್ದರಿಂದ ಸಹನೆಯಿಂದ ವರ್ತಿಸುವುದು ಅಗತ್ಯ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬೇಕು. ಪ್ರಮುಖ ವಿಷಯಗಳಲ್ಲಿ ಕುಟುಂಬದ ಹಿರಿಯರ ಸಲಹೆ ಪಡೆಯುವುದರಿಂದ ಶುಭಫಲ ದೊರೆಯುತ್ತದೆ. ಅದೃಷ್ಟದ ದಿಕ್ಕು:ಆಗ್ನೇಯ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ನೇರಳೆ
ವೃಶ್ಚಿಕ: (ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ) ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಳೆಯ ಸ್ನೇಹಿತರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವುದರಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ಆರೋಗ್ಯ ಸ್ಥಿರವಾಗಿರುತ್ತದೆ. ಹೊಸ ಹೂಡಿಕೆಗಳಿಗೆ ಅನುಕೂಲಕರ ದಿನವಾಗಿದೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ಹಳದಿ
ಧನು: (ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ)ವೃತ್ತಿ ಮತ್ತು ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಹಾಗೂ ಆಕಸ್ಮಿಕ ಲಾಭಗಳು ದೊರೆಯುತ್ತವೆ. ಬಂಧುಗಳಿಂದ ಶುಭಸುದ್ದಿ ಕೇಳುವಿರಿ. ಮನೆಯಲ್ಲಿ ಸಂತೋಷ ಹಾಗೂ ಉತ್ಸಾಹಭರಿತ ವಾತಾವರಣ ನೆಲೆಸುತ್ತದೆ. ಪ್ರಯಾಣಗಳು ಅನುಕೂಲಕರವಾಗಿರುತ್ತವೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಕೆಂಪು
ಮಕರ: (ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ)ಅನಗತ್ಯ ವಿವಾದಗಳು ಮತ್ತು ಇತರರ ವಿಷಯಗಳಿಂದ ದೂರವಿರುವುದು ಉತ್ತಮ. ಕಾರ್ಯಾಲಯದಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಖರ್ಚಿನ ವಿಷಯದಲ್ಲಿ ಬಜೆಟ್‌ಗೆ ಅನುಗುಣವಾಗಿ ನಡೆದುಕೊಳ್ಳುವುದು ಅತ್ಯಗತ್ಯ. ಅದೃಷ್ಟದ ದಿಕ್ಕು:ವಾಯುವ್ಯ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಕೆಂಪು
ಕುಂಭ: (ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ) ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗಬಹುದು. ದೀರ್ಘಕಾಲದ ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯಲ್ಲಿ ಹಾಗೂ ಹೊರಗಡೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ದೇವರ ದರ್ಶನ ಪಡೆಯುವಿರಿ. ವೃತ್ತಿ ಮತ್ತು ವ್ಯವಹಾರಗಳು ಅಷ್ಟಾಗಿ ಅನುಕೂಲಕರವಾಗಿರುವುದಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು.ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಹಳದಿ
ಮೀನ: (ದೀ, ದೂ, ಥ, ಝ, ದೆ, ದೊ, ಚಾ, ಚೀ)ಪ್ರಯಾಣಗಳಲ್ಲಿ ಹೊಸ ಸ್ನೇಹಿತರ ಪರಿಚಯವಾಗುತ್ತದೆ. ಆತ್ಮೀಯರೊಂದಿಗೆ ಶುಭಕಾರ್ಯಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ಆಕಸ್ಮಿಕ ಧನಲಾಭದ ಸೂಚನೆಗಳಿವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವರು. ವೃತ್ತಿ ಮತ್ತು ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿನ ಲಾಭ ದೊರೆಯುತ್ತದೆ. ದೈವಚಿಂತನೆ ಹೆಚ್ಚಾಗುತ್ತದೆ. ಅದೃಷ್ಟದ ದಿಕ್ಕು:ಈಶಾನ್ಯ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ಕಂದು
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

