CHITRADURGA NEWS | 01 JULY 2026
ಚಿತ್ರದುರ್ಗ: ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡ ಮಾದಾರ ಚನ್ನಯ್ಯ ಶ್ರೀಗಳು ಖುದ್ದು ಕಾರು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 01 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
ಈಶಾ ಫೌಂಡೇಶನ್‍ನ ಸಂಸ್ಥಾಪಕರಾದ ಜಗ್ಗಿ ವಾಸುದೇವ ಸದ್ಗುರು ಶ್ರೀಗಳು ಉಪನ್ಯಾಸ ಕಾರ್ಯಕ್ರಮ ನಿಮಿತ್ತ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದ್ದು, ಕಾರ್ಯಕ್ರಮ ಮುಗಿದ ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಕೊಪ್ಪಳಕ್ಕೆ ತೆರಳಬೇಕಿದ್ದು ಹೆಲಿಪ್ಯಾಡ್‍ಗೆ ತೆರಳಲು ಸದ್ಗುರು ಶ್ರೀಗಳು ಸಿದ್ದರಾಗಿದ್ದರು.
ಈ ವೇಳೆ ಇನ್ನೋವಾ ಕಾರು ಹತ್ತಿ ಕೂತ ಸದ್ಗುರು ಶ್ರೀಗಳನ್ನು ಖುದ್ದು ಹೆಲಿಪ್ಯಾಡ್‍ಗೆ ಬಿಡಲು ಬಸವ ಮಾದಾರ ಚನ್ನಯ್ಯ ಶ್ರೀಗಳು ಹೊರಟಿದ್ದು ವಿಶೇಷವಾಗಿತ್ತು.
ಇನ್ನೋವಾ ಕಾರು ಚಾಲಕನ ಜಾಗದಲ್ಲಿ ಕೂತು, ಸ್ಟೇರಿಂಗ್ ಹಿಡಿದು, ಖುದ್ದು ತಾವೆ ಕಾರು ಚಲಾಯಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಡ್ರೈವಿಂಗ್ ಮಾಡಿ ಹೆಲಿಪ್ಯಾಡ್‍ನವರೆಗೆ ಕಾರು ಚಲಾಯಿಸಿ ಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದು, ಹೆಲಿಪ್ಯಾಡ್‍ನವರೆಗೆ ಡ್ರೈವಿಂಗ್ ಮಾಡಿ ಸದ್ಗುರು ಶ್ರೀಗಳನ್ನ ಬೀಳ್ಕೊಟ್ಟು ಬಂದ್ದರು.
ಇದನ್ನೂ ಓದಿ: SIR | ಜಿಲ್ಲೆಯಾದ್ಯಂತ 32,797 ಗಣತಿ ನಮೂನೆಗಳ ವಿತರಣೆ | ಡಿಸಿ
ಮುರುಘಾ ಮಠದ ಹೆಲಿಪ್ಯಾಡ್‍ಗೆ ಬಂದಿಳಿದ ಸದ್ಗುರು ಶ್ರೀಗಳಿಗೆ ಮಾದಾರ ಚನ್ನಯ್ಯ ಶ್ರೀಗಳಿಂದ ಮಾದಾರ ಗುರುಪೀಠದಲ್ಲಿ ಅದ್ದೂರಿ ಸ್ವಾಗತ ಮಾಡಿದರೆ, ಮಾದಾರ ಚನ್ನಯ್ಯ ಶ್ರೀಮಠದ ಕೈತೋಟವನ್ನು ಸದ್ಗುರು ಶ್ರೀಗಳು ವೀಕ್ಷಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
