CHITRADURGA NEWS | 02 JULY 2026
ಚಿತ್ರದುರ್ಗ: ಜಿಲ್ಲೆಯ ಆರು ತಾಲೂಕುಗಳ ಬಿಆರ್ಸಿ ಕೇಂದ್ರದ ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ಖಾಲಿ ಇರುವ ಥೆರಪಿಸ್ಟ್ ಹಾಗೂ ಆಯಾ/ಸಹಾಯಕಿ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ವಚನಕಾರರು ತಮ್ಮ ಸ್ವ-ಅನುಭವದ ಮೂಲಕ ವಚನಗಳನ್ನು ರಚಿಸಿದರು | AC ಡಾ.ಕಾಂತರಾಜ್
ಥೆರಪಿಸ್ಟ್ ಹುದ್ದೆಗೆ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT) ಅಥವಾ ಡಿಪ್ಲೊಮಾ ಇನ್ ಫಿಸಿಯೋಥೆರಪಿ (DPT) / ಬಿಒಟಿ (Bachelor of Occupational Therapy) ಅಥವಾ ಬಿ.ಎಸ್ಸಿ ಆಕ್ಯುಪೇಷನಲ್ ಥೆರಪಿ / ಬ್ಯಾಚುಲರ್ ಆಫ್ ಆಡಿಯಾಲಜಿ ಅಂಡ್ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ (BASLP) ಪದವಿ ಹೊಂದಿರಬೇಕು.
ಸಂಬಂಧಿತ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿರುವುದು ಕಡ್ಡಾಯ, ಮಾಸಿಕ ವೇತನ ರೂ. 12,000 ವೇತನ ನೀಡಲಾಗುವುದು. ಆಯಾ / ಸಹಾಯಕಿ ಹುದ್ದೆಗೆ ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು.
ಸೇವಾ ಅನುಭವ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಸ್ಥಳೀಯ ಮಹಿಳಾ ಅಭ್ಯರ್ಥಿ ಆಗಿರಬೇಕು. ಮಾಸಿಕ ವೇತನ ರೂ. 6,000 ವೇತನ ನೀಡಲಾಗುವುದು.
ಇದನ್ನೂ ಓದಿ: ಅಗ್ನಿ ಸುರಕ್ಷತಾ ಪ್ರಾತ್ಯಕ್ಷತೆ ಹಾಗೂ ಅಣಕು ಪ್ರದರ್ಶನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ಜುಲೈ 17 ರ ಸಂಜೆ 5 ಗಂಟೆಯೊಳಗೆ ಚಿತ್ರದುರ್ಗದ ಉಪನಿರ್ದೇಶಕರ (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ ಇಲ್ಲಿಗೆ ಮುದ್ದಾಂ (ಖುದ್ದಾಗಿ) ಸಲ್ಲಿಸಬೇಕಾಗಿ ಕೋರಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
