CHITRADURGA NEWS | 25 JUNE 2026
ಚಿತ್ರದುರ್ಗ: ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಮೂರು ವರ್ಷ ಹಾಗೂ ಐದು ವರ್ಷದ ಕಾನೂನು ಪದವಿ ಪಡೆದವರಿಗೆ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಹತ್ಯೆ ದಿವಸ್
ಈ ವೇಳೆ ಸಂಸದ ಗೋವಿಂದ ಕಾರಜೋಳ ಭಾಗವಹಿಸಿ ಮಾತನಾಡಿ, ಜುಲೈನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿ ಮುಂದಿನ ಅಧಿವೇಶನದಲ್ಲಿ ಜಾರಿಗೆ ಬಂದರೆ ಮಹಿಳೆ-ಪುರುಷರು 50:50 ಅನುಪಾತದಲ್ಲಿರುತ್ತಾರೆ. ಇದರಿಂದ ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹಾಗೂ ಸಮಕಾಲೀನರು ಕಂಡಿದ್ದ ಕನಸು ನನಸಾಗಲಿದೆ ಎಂದು ಸಂಸದ ಹೇಳಿದರು.
ಲೋಕಸಭೆಯಲ್ಲಿ ಈಗ 87 ಮಹಿಳೆಯರಿದ್ದಾರೆ. ಆಡಳಿತದಲ್ಲಿ ಅರ್ಧ ಭಾಗ ಮಹಿಳೆಯರಿರಬೇಕೆಂಬುದು ಪ್ರಧಾನಿ ನರೇಂದ್ರಮೋದಿರವರ ಕನಸು. 5 ಕೋಟಿ 53 ಲಕ್ಷಪ್ರಕರಣಗಳು ದೇಶದಲ್ಲಿ ಇನ್ನು ಇತ್ಯರ್ಥವಾಗಿಲ್ಲ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸತ್ಯ ಮತ್ತು ಧರ್ಮದ ಪರವಾಗಿ ನಿಲ್ಲಿ.
ವಕೀಲಿ ವೃತ್ತಿ ಎಂದರೆ ಕೋಟು ಧರಿಸಿ ನ್ಯಾಯಾಲಯದಲ್ಲಿ ವಾದ-ವಿವಾದ ಮಂಡಿಸುವುದಲ್ಲ. ದೇಶದ ಐಕ್ಯತೆ, ಏಕತೆ, ಬಲಿಷ್ಟತೆಗೆ ಕಂಕಣ ಬದ್ದರಾಗಿ ಎಂದು ಕಾನೂನು ಪದವಿ ಪಡೆದವರಿಗೆ ಕರೆ ನೀಡಿದರು.
ಇದನ್ನೂ ಓದಿ: ಜೂನ್ 28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ | ಜಾಗೃತಿ ಜಾಥಾಕ್ಕೆ ಚಾಲನೆ
ಸುಧೀರ್ಘ ಅಧ್ಯಯನ, ನಿರಂತರ ಪರಿಶ್ರಮ, ಬದ್ದತೆಯಿದ್ದರೆ ಪದವಿ ಪಡೆಯಬಹುದು. ಕಾನೂನು ಎಂದರೆ ಕೇವಲ ಕೋರ್ಟ್ಗೆ ಹೋಗುವುದಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆಯೂ ನಿಮ್ಮ ಮೇಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಪಶು, ಪಕ್ಷಿ, ಪ್ರಾಣಿಗಳಿಗೂ ಬದುಕುವ ಹಕ್ಕು ನೀಡಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರು ಬದುಕಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಕೆಳವರ್ಗ, ಬಡವರು, ಶೋಷಿತರು ವಕೀಲರುಗಳಿದ್ದಾರೆಂದರೆ ಅದಕ್ಕೆ ಸರಸ್ವತಿ ಕಾನೂನು ಕಾಲೇಜು ಕಾರಣ. ವಕೀಲರುಗಳ ಸಂಖ್ಯೆ ಹೆಚ್ಚಾದಂತೆ ವ್ಯಾಜ್ಯಗಳ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದರಿಂದ ಧಾರವಾಡ, ಕಲ್ಬುರ್ಗಿಯಲ್ಲಿ ನ್ಯಾಯ ಪೀಠ ಸ್ಥಾಪಿಸಲಾಗಿದೆ. ಇದರಿಂದ ವಕೀಲರಿಗೆ ಮಹತ್ವ ಬಂದಿದೆ. ಕಾನೂನು ಕ್ಷೇತ್ರ ದೊಡ್ಡ ಕ್ರಾಂತಿಗೆ ಸಾಕ್ಷಿಯಾಗಿದೆ. ದಶಕಗಳಿಂದ ಬದಲಾಗದ ಕಾನೂನನ್ನು ದೇಶದ ಪ್ರಧಾನಿ ನರೇಂದ್ರಮೋದಿ ಬದಲಾವಣೆ ಮಾಡಿದ್ದಾರೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮೂಲಕ ಸುಪ್ರೀಂಕೋರ್ಟ್ನ್ನು ಕನ್ನಡಕ್ಕೆ ತರ್ಜುಮೆ ಮಾಡಬಹುದು. ಇದರಿಂದ ಬಡ ಕಕ್ಷಿದಾರನಿಗೂ ತೀರ್ಪಿನ ಸಾರಾಂಶ ಅರ್ಥವಾಗುತ್ತದೆ. ದೇಶದ ಪ್ರತಿಯೊಬ್ಬ ಬಡವನಿಗೂ ಕಾನೂನು ರಕ್ಷಾ ಕವಚವಾಗಬೇಕು. ಪದವಿ ಪಡೆದಿರುವ ನೀವುಗಳು ಮುಂದೆ ನ್ಯಾಯವಾದಿಗಳಾದಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಿ ಎಂದು ಸಂಸದರು ಕಿವಿಮಾತು ಹೇಳಿದರು.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ವಿರುದ್ಧ ರೈತರ ಪ್ರತಿಭಟನೆ
ಸರಸ್ವತಿ ಕಾನೂನು ಕಾಲೇಜಿನ ಕಾರ್ಯದರ್ಶಿ ಡಿ.ಕೆ.ಶೀಲಾ ಮಾತನಾಡಿ, ಕಾನೂನು ಪಡೆದವರು ವಕೀಲ ವೃತ್ತಿಯಲ್ಲಿ ಯಶಸ್ಸಾಗಬೇಕಾದರೆ ನಿರಂತರ ಪರಿಶ್ರಮ, ಸಮಯಪ್ರಜ್ಞೆ, ಬದ್ದತೆಯಿರಬೇಕು. ವೃತ್ತಿಯಲ್ಲಿ ಸಾಕಷ್ಟು ಅಡ್ವಾಂಟೇಜ್ಗಳಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಅನೇಕರು ವಕೀಲರುಗಳಿದ್ದಾರೆ.
ತಂದೆ-ತಾಯಿಗಳ ಕನಸು ನನಸು ಮಾಡಿ. ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಎಲ್ಲವನ್ನು ನಿಭಾಯಿಸಿಕೊಂಡು ಮುಂದೆ ಸಾಗಿ. ನಿರ್ಲಕ್ಷೆ ಮಾಡಬೇಡಿ ಎಂದು ಕಾನೂನು ಪದವಿ ಪಡೆದವರಿಗೆ ಮಾರ್ಗದರ್ಶನ ನೀಡಿದರು.
ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಎಸ್.ಸುಧಾದೇವಿ ಮಾತನಾಡಿದ. ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 25 | ಹತ್ತಿ ರೇಟ್ ಎಷ್ಟಿದೆ?
ಹೆಚ್ಚು ಅಂಕ ಪಡೆದ ಹಾಗೂ ಪಠ್ಯೇತರ ವಿಷಯಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕಾನೂನು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸರಸ್ವತಿ ಕಾನೂನು ಕಾಲೇಜಿನ ಉಪಾಧ್ಯಕ್ಷರಾದ ಫಾತ್ಯರಾಜನ್, ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಅನ್ವರ್ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
