CHITRADURGA NEWS | 31 MARCH 2026
ಚಿತ್ರದುರ್ಗ: ಮಾ.28 ರಂದು ಸಂಜೆ ಸುಮಾರು 6.55 ಗಂಟೆಗೆ ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಣಿವೆ ಮಾರಮ್ಮ ನಗರ ಮುಂಭಾಗದ ಕುರಿ ತಿಮ್ಮಪ್ಪ ಬಡಾವಣೆ ಮುಂದೆ ಚಿತ್ರದುರ್ಗದಿಂದ ಬೆಂಗಳೂರು ಕಡೆಗೆ ಹೋಗುವ ಹಳೇ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್-48 ರಸ್ತೆಯನ್ನು ದಾಟುತಿದ್ದ ಸುಮಾರು 50-55 ವಯಸ್ಸಿನ ಅಪರಿಚಿತ ಮಹಿಳೆಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಕುರಿತು ಪೊಲೀಸ್ ವೃತ್ತ ನಿರೀಕ್ಷಕರು, ಬಡಾವಣೆ ವೃತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜನಗಣತಿ | ಆನ್‍ಲೈನ್ ಮೂಲಕ ಸ್ವಯಂ ದಾಖಲಿಸಲು ಅವಕಾಶ
ಅಪರಿಚಿತ ಮಹಿಳೆ ಸುಮಾರು 5.2 ಅಡಿ ಎತ್ತರ, ಮೃತ ಶವದ ಮೈ ಮೇಲಿನ ಬಟ್ಟಗಳು ನೀಲಿ ಬಣ್ಣದ ತುಂಬು ತೋಳಿನ ಟೀ-ಷರ್ಟ್, ಕೆಂಪು ಬಣ್ಣದ ಲಂಗ, ಕೆಂಪು ಬಣ್ಣದ ಒಳಚಡ್ಡಿ ಧರಿಸಿರುತ್ತಾಳೆ.
ಮೃತ ಅಪರಿಚಿತ ಮಹಿಳೆ ವಾರಸುದಾರರು ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ದೂರವಾಣಿ ಸಂಖ್ಯೆ 9480803130, ಪೊಲೀಸ್ ಉಪನಿರೀಕ್ಷಕರ ದೂರವಾಣಿ ಸಂಖ್ಯೆ 9480803164, ಕಂಟ್ರೋಲ್ ರೂಂ, ದೂರವಾಣಿ ಸಂಖ್ಯೆ 08194-222781 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
