
CHITRADURGA NEWS | 22 MARCH 2026
ಬಹಳ ಹಿಂದಿನ ಕಾಲದಿಂದಲೂ ಅನಾರೋಗ್ಯ ಸಮಸ್ಯೆ ಇದ್ದಾಗ ನಮ್ಮ ಹಿರಿಯರು ಹೊಕ್ಕುಳಿಗೆ ಎಣ್ಣೆ ಹಚ್ಚುತ್ತಿದ್ದರು. ಆಯುರ್ವೇದದ ಪ್ರಕಾರ, ಹೊಕ್ಕುಳವು ದೇಹದ ಕೇಂದ್ರಬಿಂದುವಾಗಿದೆ. ಇದು ದೇಹದ ಅಂಗಗಳಿಗೆ ಸಂಪರ್ಕ ಹೊಂದಿದೆ. ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಆಯುರ್ವೇದ ಸಹ ಹೇಳುತ್ತದೆ. ಮಲಗುವ ಮುನ್ನ ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆಯಂತೆ. ಅದರಲ್ಲೂ ಇತ್ತೀಚೆಗೆ ಹೆಚ್ಚಿನ ಜನರನ್ನು ಕಾಡುವಂತಹ ಕೊಲೆಸ್ಟ್ರಾಲ್ ಸಮಸ್ಯೆ ಸಹ ಹೊಕ್ಕಳಿಗೆ ಈ ಎಣ್ಣೆ ಹಚ್ಚುವುದರಿಂದ ನಿಯಂತ್ರಣಕ್ಕೆ ಬರುತ್ತದೆಯಂತೆ. ಹಾಗಾದ್ರೆ ಆ ಎಣ್ಣೆ ಯಾವುದೆಂಬುದನ್ನು ತಿಳಿದುಕೊಳ್ಳೋಣ. ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಆಲಿವ್ ಎಣ್ಣೆ
ಮಲಗುವ ಮುನ್ನ ನಿಮ್ಮ ಹೊಕ್ಕುಳಿಗೆ ಆಲಿವ್ ಎಣ್ಣೆಯನ್ನು ಹಚ್ಚುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಆಲಿವ್ ಎಣ್ಣೆಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಹೃದಯವನ್ನು ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆಯಂತೆ. ಆದರೆ ನಿಮಗೆ ಹೃದಯ ಸಮಸ್ಯೆಗಳಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು.
ಕೊಲೆಸ್ಟ್ರಾಲ್: ಮಲಗುವ ಮುನ್ನ ನಿಮ್ಮ ಹೊಕ್ಕುಳಿಗೆ ಎರಡು ಹನಿ ಆಲಿವ್ ಎಣ್ಣೆಯನ್ನು ಹಚ್ಚುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಹಾಗೂ ಪ್ರತಿದಿನ ಹೊಕ್ಕುಳಿಗೆ ಎಣ್ಣೆ ಹಚ್ಚುವುದರಿಂದ ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆ ಬರದಂತೆ ತಡೆಯುತ್ತದೆ. ಆದರೆ, ನಿಮಗೆ ಈಗಾಗಲೇ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿ. ನಿಮ್ಮ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಿ.
ಹೊಕ್ಕುಳಿಗೆ ಆಲಿವ್ ಎಣ್ಣೆ ಹಾಕುವುದರಿಂದಾಗುವ ಇತರ ಪ್ರಯೋಜಗಳು
ಕೂದಲು ಮತ್ತು ಚರ್ಮದ ಆರೋಗ್ಯ : ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಇದ್ದು ಇದು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ತೇವಗೊಳಿಸುವುದು, ವಿನ್ಯಾಸವನ್ನು ಸುಧಾರಿಸುವುದು, ಶುಷ್ಕತೆಯನ್ನು ಕಡಿಮೆ ಮಾಡುವುದು ಮತ್ತು ಮುಖ ಮತ್ತು ದೇಹಕ್ಕೆ ನೈಸರ್ಗಿಕ ಹೊಳಪನ್ನು ಉತ್ತೇಜಿಸುವುದು. ಅಲ್ಲದೇ ಇದು ತುಟಿಗಳ ಬಿರುಕು, ಹಿಮ್ಮಡಿಗಳು ಬಿರುಕು ಬಿಡುವುದು ತಡೆಯುತ್ತದೆ. ಹಾಗೇ ಇದು ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡಬಹುದು.
ಜೀರ್ಣಕ್ರಿಯೆ : ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಲಿವ್ ಎಣ್ಣೆಯಿಂದ ಹೊಟ್ಟೆಗೆ ಸಾಮಾನ್ಯ ಮಸಾಜ್ ಮಾಡುವುದರಿಂದ ವಯಸ್ಸಾದವರಲ್ಲಿ ಮಲಬದ್ಧತೆಯನ್ನು ನಿವಾರಿಸಬಹುದು ಎಂದು ಅಧ್ಯಯನವು ತೋರಿಸಿದೆ.
ಸಂತಾನೋತ್ಪತ್ತಿ ಆರೋಗ್ಯ : ಇದು ಹಾರ್ಮೋನುಗಳ ಸಮತೋಲನವನ್ನು ಬೆಂಬಲಿಸುತ್ತದೆ. ಮುಟ್ಟಿನ ಸೆಳೆತವನ್ನು ಕಡಿಮೆ ಮಾಡುತ್ತದೆ ಮತ್ತು ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ನೋವು ನಿವಾರಣೆ : ದೇಹದ ಸಾಮಾನ್ಯ ನೋವು ಮತ್ತು ಕೀಲುಗಳ ಬಿಗಿತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ಕಣ್ಣಿನ ಆರೋಗ್ಯ : ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
