CHITRADURGA NEWS | 13 JANUARY 2026
12ನೇ ಶತಮಾನದ ಶರಣ ಚಳವಳಿಯಲ್ಲಿ ಭಕ್ತಿ ಮಾರ್ಗಕಿಂತ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ ಮಹಾನ್ ಶಿವಶರಣ ಶ್ರೀ ಸಿದ್ಧರಾಮೇಶ್ವರರು. ಇಂದು ಅವರ 853ನೇ ಜಯಂತಿಯ ಶುಭ ಸಂದರ್ಭದಲ್ಲಿ, ಅವರ ಲೋಕಕಲ್ಯಾಣದ ಚಿಂತನೆಗಳು ಇಂದಿನ ಸಮಾಜಕ್ಕೆ ಹೇಗೆ ದಾರಿದೀಪವಾಗಿವೆ ಎಂಬುದರ ವಿಶೇಷ ನೋಟ ಇಲ್ಲಿದೆ.
ಜೀವನದಹಿನ್ನೆಲೆ:
ಸಿದ್ಧರಾಮೇಶ್ವರರು ಇಂದಿನ ಮಹಾರಾಷ್ಟ್ರದ ಸೊಲ್ಲಾಪುರ(ಸೊನ್ನಲಿಗೆ) ಜಿಲ್ಲೆಯ ಮುಧಗಿ ಎಂಬಲ್ಲಿ ಜನಿಸಿದರು. ತಂದೆ ಮೌದ್ಗಲ್ಯ ಮುನಿ, ತಾಯಿ ಸುಜ್ಞಾನಾದೇವಿ. ಇವರು ಬಾಲ್ಯದಿಂದಲೇ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಮಲ್ಲಿಕಾರ್ಜುನ ಪರಮ ಭಕ್ತರಾದ ಇವರು, ಜನಸೇವೆಯೇ ಜನಾರ್ಧನನ ಸೇವೆ ಎಂದು ನಂಬಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | 13 ಜನವರಿ | ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರ್ಕೇಟ್ ರೇಟ್
ಕೆರೆಕಟ್ಟಿಸಿದಕಾಯಕಯೋಗಿ:
ಸಿದ್ಧರಾಮೇಶ್ವರರು ಕೇವಲ ಮಠಾಧೀಶರಾಗಿ ಉಳಿಯಲಿಲ್ಲ. ಜನರ ಬಾಯಾರಿಕೆ ನೀಗಿಸುವುದು ದೇವರ ಪೂಜೆಗಿಂತ ಮಿಗಿಲು ಎಂದು ನಂಬಿದ್ದ ಅವರು, ಅಂದು ಸೋನ್ನಲಿಗೆ ಕರೆಯುತ್ತಿದ್ದ, ಇಂದಿನ ಸೋಲ್ಲಾಪುರದಲ್ಲಿ ಬೃಹತ್ ಕೆರೆಗಳನ್ನು ನಿರ್ಮಿಸಿದರು. ಆಧುನಿಕ ಇಂಜಿನಿಯರಿಂಗ್ ವ್ಯವಸ್ಥೆ ಇಲ್ಲದ ಕಾಲದಲ್ಲಿಯೇ, ಜಲ ಸಂರಕ್ಷಣೆಯ ಕೆಲಸ ಮಾಡಿದ ಇವರನ್ನು ‘ಜಲಋಷಿ’ ಎಂದು ಕರೆಯಲಾಗುತ್ತದೆ. ಇವರು ನಿರ್ಮಿಸಿದ ಕೆರೆಗಳು ಇಂದಿಗೂ ಲಕ್ಷಾಂತರ ಜನರ ಜೀವನಾಡಿಯಾಗಿವೆ.
ಮುನುಕುಲಕ್ಕೆನೀಡಿದಜೀವನತತ್ವಗಳು:
ಸಿದ್ಧರಾಮೇಶ್ವರರ ತತ್ವಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಅವು ಇಡೀ ಮನುಕುಲದ ಏಳಿಗೆಗಾಗಿ ಇದ್ದವು. ‘ಕಾಯಕವೇ ಕೈಲಾಸ’ ಪ್ರತಿಯೊಬ್ಬರೂ ದುಡಿದು ಉಣ್ಣಬೇಕು, ಪರಾವಲಂಬಿಯಾಗಬಾರದು ಎಂಬುದು ಅವರ ಕಟ್ಟುನಿಟ್ಟಿನ ನಿಲುವಾಗಿತ್ತು. ಅಹಿಂಸೆ ಮತ್ತು ದಯೆಯ ತತ್ವ ನಂಬಿದ್ದ ಅವರು, ಪ್ರಾಣಿ ಬಲಿಯಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ದಯೆಯೇ ಧರ್ಮದ ಮೂಲವೆಂದು ಜನರಿಗೆ ತಿಳಿ ಹೇಳಿದರು. ಸಾಮಾಜಿಕ ‘ಸಮಾನತೆ’ ಜಾತಿ-ಪದ್ಧತಿಯ ದಲಿತರು ಮತ್ತು ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು.
ಅನುಭವಮಂಟಪಮತ್ತುವಚನಕ್ರಾಂತಿ:
ಬಸವಣ್ಣನವರ ಕರೆಯ ಮೇರೆಗೆ ಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದ ಸಿದ್ಧರಾಮೇಶ್ವರರು, ಅಲ್ಲಿನ ವೈಚಾರಿಕ ಕ್ರಾಂತಿಯಿAದ ಪ್ರಭಾವಿತರಾಗಿ ಶೂದ್ರ ಮತ್ತು ಶೋಷಿತ ಸಮುದಾಯಗಳಿಗೆ ಸಾಮಾಜಿಕ ಗೌರವ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಿದ್ಧರಾಮೇಶ್ವರರು ಸಾವಿರರು ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳ ಅಂಕಿತನಾಮ ‘ಕಪಿಲಸಿದ್ಧ ಮಲ್ಲಿಕಾರ್ಜುನ’. ‘ಯೋಗವೆಂಬುವುದು ಜಪವಲ್ಲ, ಯೋಗವೆಂಬುದು ಅನ್ಯರ ಹಿತಕ್ಕಾಗಿ ದುಡಿಯುವುದು’ ಎಂದು ಹೇಳುವ ಮೂಲಕ ಸಿದ್ಧರಾಮೇಶ್ವರರು ಯೋಗಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಇದನ್ನೂ ಓದಿ: ಗಣಿತ ಗಣಕ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆ ನಂಬರ್ ಒನ್
ಸ್ವಾರ್ಥಕ್ಕಾಗಿ ಮಾಡುವ ಸಾಧನೆಗಿಂತ, ಸಮಾಜದ ಒಳಿತಿಗಾಗಿ ಮಾಡುವ ಕಾಯಕವೇ ಶ್ರೇಷ್ಠ ಯೋಗ ಎಂದು ಪ್ರತಿಪಾದಿಸಿದ್ದಾರೆ. ಕರ್ಮಯೋಗ ಮತ್ತು ಕಾಯಕದ ಮಹತ್ವ ತಿಳಿಸುವ ಮೂಲಕ ಆಧ್ಯಾತ್ಮವನ್ನು ಆಕಾಶದಿಂದ ಭೂಮಿಗೆ ಇಳಿಸಿದರು. ಜನಸೇವೆಯ ಮೂಲಕವೇ ಮುಕ್ತಿ ಪಡೆಯಬಹುದು ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅವರು ಮಂಡಿಸಿದರು.
ದಾಸೋಹ ತತ್ವ, ಸತ್ಯ, ಸಮಾಜ ಸುಧಾರಣೆಯ ಕಳಕಳಿ, ಸರಳತೆ ಮತ್ತು ವೈಚಾರಿಕತೆ, ಸೇವೆ ಮತ್ತು ಶ್ರಮದ ಮಹತ್ವವನ್ನು ಅವರು ಬೋದಿಸಿದರು. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಮೇಲು-ಕೀಳು ಮತ್ತು ಮೂಢನಂಬಿಕೆಗಳ ವಿರುದ್ಧ ಕ್ರಾಂತಿ ಎಬ್ಬಿಸಿದರು. ‘ಲೋಕದ ಹಿತವೇ ನನ್ನ ಹಿತ, ಎಂದು ನಂಬಿದ್ದ ಸಿದ್ಧರಾಮೇಶ್ವರರ ವಚನಗಳು ಅಸಮಾನತೆ,ಅಹಂಕಾರ ಮತ್ತು ಅಂಧಶ್ರದ್ಧೆಗಳಿಗೆ ವಿರುದ್ಧವಾಗಿ ಅವರು ನೀಡಿದ ಸಂದೇಶಗಳು ಇಂದಿನ ಪೀಳಿಗೆಯಿಗೂ ದಾರಿ ದೀಪವಾಗಿವೆ.
853ನೇಜಯಂತಿಯಸಂದೇಶ:
ಇಂದಿನ ಸ್ಪರ್ಧಾತ್ಮಕ ಮತ್ತು ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಸಿದ್ಧರಾಮೇಶ್ವರರ ‘ಪರಹಿತ’ ಚಿಂತನೆ ಅತ್ಯಂತ ಅವಶ್ಯಕವಾಗಿದೆ. ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಕೆರೆಗಳನ್ನು ರಕ್ಷಿಸಿ ನೀರನ್ನು ಉಳಿಸುವ ಅವರ ಸಂದೇಶವನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಸುವ ನಿಜವಾದ ಗೌರವವಾಗಿದೆ.
ಇದನ್ನೂ ಓದಿ: ಜಾಗತಿಕ ಲಿಂಗಾಯತ ಮಹಾಸಭಾದ 2026ರ ಕ್ಯಾಲೆಂಡರ್ ಬಿಡುಗಡೆ
ಸಿದ್ಧರಾಮೇಶ್ವರರ ಜಯಂತಿಯು ಕೇವಲ ಸಂಭ್ರಮದ ಆಚರಣೆಯಾಗದೆ, ಅವರ ಆದರ್ಶಗಳನ್ನು ಪ್ರತಿಯಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ದಿನವಾಗಿರಲಿ.
ಲೇಖನ: ಮುದ್ದುಕಿರಣ ಎಂ

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
