
CHITRADURGA NEWS | 31 DECEMBER 2025
ಹೊಸದುರ್ಗ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸಣ್ಣಕ್ಕಿ ಬಾಗೂರಿನ ಚನ್ನಕೇಶವ ಸ್ವಾಮಿ ವೈಕುಂಠ ಏಕಾದಶಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಇದನ್ನೂ ಓದಿ: ಸಿರಿಧಾನ್ಯ ಪಾಕ ಸ್ಪರ್ಧೆ | ಯಾವ್ಯಾವ ಸಿಹಿ, ಖಾರ ತಿನಿಸುಗಳನ್ನು ಪ್ರದರ್ಶಿಸಿದರು | ಇಲ್ಲಿದೆ ಮಾಹಿತಿ…

ಬೆಳಿಗ್ಗೆ ಗಂಗಾಪೂಜೆಯೊಂದಿಗೆ ಆರಂಭಗೊಂಡ ಪೂಜಾ ಕಾರ್ಯಕ್ರಮ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ತೋಮಾಲಸೇವೆ, ಮಹಾಭಿಷೇಕ ಅಲಂಕಾರ, ವಿಷ್ಣು ಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಅರ್ಚನೆ ಮಹಾಮಂಗಳಾರತಿ ವೈಕುಂಠದ್ವಾರದರ್ಶನ ಸೇವೆ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು.
ಅರ್ಚಕರಾದ ಬಿ. ಕೆ.ಶ್ರೀನಿವಾಸನ್, ಹರೀಶ್, ಅರ್ಚಕರ ಶ್ರೀವತ್ಸ ಭಟ್ಟರು,ನಾಡಿಗ್ ಮೂರ್ತಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಶಾಸ್ತ್ರೋಸ್ತ್ರವಾಗಿ ನಡೆದವು.
ದೇಗುಲದ ಮಹಾ ದ್ವಾರಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪ್ರಾಂಗಣ, ವೃಂದಾವನ ವಸಂತವಾಟಿಕೆ. ಕೈಸಾಲಿ, ಯಾಗಲಾಸಿ, ತುಲಾ ಭಾರ ಸ್ತಂಭ ಆಕರ್ಷಣೀಯವಾಗಿತ್ತು. ತಿರುಪತಿಯಲ್ಲಿ ನಡೆಯುವಂತೆ ಏಕಾದಶಿ ಪೂಜಾ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ದೇವರದರ್ಶನ ಪಡೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ದರ್ಶನಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ತಿರುಪತಿ ಮಾದರಿಯ ಲಡ್ಡು ಪ್ರಸಾದ ವಿತರಿಸಲಾಯಿತು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಅಂತಿಮ | ಬಿಜೆಪಿಯಿಂದ ಯಾರು ? | ಆಗ್ನೇಯ ಪದವೀದರರ ಕ್ಷೇತ್ರದ ಫೈಟ್
ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ, ಭಗೀರಥ ಮಠದ ಶ್ರೀಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಕನಕ ಗುರು ಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ ವೖಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನ ಮಾಡಿದರು.
ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ವೖಕುಂಠ ಏಕಾದಶಿ ದಿನ ಎಲ್ಲೆಡೆಯೂ ವಿಷ್ಣುವಿನ ಆರಾಧನೆ ದರ್ಶನ ಜರುಗಲಿದೆ. ಎಲ್ಲರ ಬದುಕು ಹಸನಾಗಲಿ ಎಂದು ಭಕ್ತರಿಗೆ ವೈಕುಂಠ ಏಕಾದಶಿ ಶುಭಾಶಯ ಕೋರಿದರು.
ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, ವೈಕುಂಠ ಏಕಾದಶಿಯ ಧಾರ್ಮಿಕ ಆಚರಣೆಗಳಲ್ಲಿ ಎಲ್ಲರು ಶ್ರದ್ಧಾ ಭಕ್ತಿಯಿಂದ ಭಾವೖಕ್ಯತೆಯಿಂದ ಭಾಗಿಯಾಗುವ ಕಾರ್ಯಕ್ರಮ ವಾಗಿದೆ. ಭಕ್ತರು ಸಂಸ್ಕಾರ, ಸಂಸ್ಕೃತಿ, ಧಾರ್ಮಿಕತೆ ರೂಢಿಸಿಕೊಳ್ಳಬೇಕಿದ್ದು ಧಾರ್ಮಿಕ ಕಾರ್ಯಕ್ರಮಗಳು ಎಲ್ಲರಲ್ಲಿ ಶಾಂತಿ ನೆಮ್ಮದಿ ಮೂಡಿಸಲಿ ಎಂದರು.
ಇದನ್ನೂ ಓದಿ: ಮೀನ ರಾಶಿ | ವರ್ಷ ಭವಿಷ್ಯ – 2026
ಭಗೀರಥ ಮಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಭಾರತೀಯ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚು ಮಹತ್ವವಿದೆ ಎಂಬುದನ್ನು ವೖಕುಂಠ ಏಕಾದಶಿ ಧಾರ್ಮಿಕ ಕಾರ್ಯಕ್ರಮವೆ ಸಾಕ್ಷಿಯಾಗಿದೆ, ಎಲ್ಲ ಭಕ್ತರಿಗೆ ಆರೋಗ್ಯ ಸುಖ ಶಾಂತಿ ಲಭಿಸಲಿ ಎಂದರು.
ಪ್ರಧಾನ ಅರ್ಚಕ ಶ್ರೀನಿವಾಸನ್ ಮಾತನಾಡಿ, ಬಾಗೂರು ಚನ್ನಕೇಶವ ದೇವಾಲಯ ಅವರಣದಲ್ಲಿ ವಿಷ್ಣು ತನ್ನ ತೊಡೆಯ ಮೇಲೆ ಲಕ್ಷ್ಮೀ ದೇವಿ ಕೂರಿಸಿಕೊಂಡು ಗರುಡ ವಾಹನದ ಮೇಲೆ ಉತ್ತರ ದಿಕ್ಕಿಗೆ ಅಭಿಮುಖವಾಗಿರುವ ವೈಕುಂಠ ನಾರಾಯಣಸ್ವಾಮಿಯ ವಿಗ್ರಹ ಇರುವುದರಿಂದ ವೖಕುಂಠ ಏಕಾದಶಿ ವಿಶೇಷ ಪಡೆದಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ | ಚಿತ್ರದುರ್ಗದಲ್ಲಿ ಜನವರಿ 30 ರಂದು ಉದ್ಯೋಗ ಮೇಳ
ರಾಜಸ್ವ ನಿರೀಕ್ಷ ಕ ಎಂ. ಹೆಚ್. ಹರೀಶ್, ಆಡಳಿತಾಧಿಕಾರಿ ಭಾಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಬಾಗೂರು ಗ್ರಾಮಸ್ಥರು ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
