
CHITRADURGA NEWS | 21 NOVEMBER 2025
ಹೊಳಲ್ಕೆರೆ: ಮುಂದಿನ ಭವಿಷ್ಯ ಚೆನ್ನಾಗಿರಬೇಕೆಂದರೆ ಐದಾರು ವರ್ಷಗಳ ಕಾಲ ಕಷ್ಟಪಟ್ಟು ಅಡಿಕೆ ಗಿಡಗಳನ್ನು ಬೆಳೆಯಿರಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ರೈತರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಜಿಲ್ಲಾ ಖಜಾನೆಯಿಂದ ಅಧಿಕಾರಿಗಳಿಗೆ HRMS-2, ಖಜಾನೆ-2 ತಂತ್ರಾಂಶ ಕುರಿತು ಕಾರ್ಯಾಗಾರ

ಭರಮಸಾಗರ ಹೋಬಳಿ ಎಮ್ಮೆಹಟ್ಟಿ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ನೂತನ 4 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ರೈತರ ಅಡಿಕೆ ತೋಟಗಳು ಒಣಗಬಾರದೆಂದು ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದೇನೆ. ಅಜ್ಜಂಪುರ ಬಳಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಲಾಗಿದೆ. ಶಾಲಾ-ಕಾಲೇಜು, ರಸ್ತೆ, ಚೌಡೇಶ್ವರಿ ದೇವಸ್ಥಾನ ಗೋಪುರಕ್ಕೆ ಹತ್ತು ಲಕ್ಷ ರೂ.ಗಳನ್ನು ನೀಡಿದ್ದೇನೆ. ಮೂರು ತಿಂಗಳಲ್ಲಿ ನೀವು ಕೇಳಿದ್ದಕ್ಕಿಂತ ಹೆಚ್ಚು ಕೆಲಸ ಮಾಡಿದ್ದೇನೆ.
ಚುನಾವಣೆಯಲ್ಲಿ ಓಟು ಹಾಕುವುದು ಮುಖ್ಯವಲ್ಲ. ಮಾನವೀಯತೆಯಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನಕ್ಕೆ ಉಪಯೋಗವಾಗಬೇಕೆನ್ನುವ ಆಲೋಚನೆಯಿಟ್ಟುಕೊಂಡಿರುವ ಎಂಎಲ್‍ಎ ನಾನು ಎಂದು ಹೇಳಿದರು.
ತೋಪು ಜಾತ್ರೆಯಲ್ಲಿ ಎರಡು ಸಾವಿರ ಮನೆಗಳಿಗೆ ನೀರು ಸರಬರಾಜು ಮಾಡಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದೇನೆ. ಗುಡಿಸಲುಗಳಿರುವ ಗ್ರಾಮದಲ್ಲಿ ಏನು ತೊಂದರೆಯಾಗಬಾರದೆಂದು ಅಗ್ನಿಶಾಮಕ ವಾಹನ, ಅಂಬುಲೆನ್ಸ್‍ಗಳು ತರಿಸಿದ್ದೆ. ಬಾಂಬೆ, ಪೂನಾದಿಂದ ಮೊಬೈಲ್ ಟಾಯ್ಲೆಟ್‍ಗಳ ವ್ಯವಸ್ಥೆ ಕೂಡ ಕಲ್ಪಿಸಿದ್ದೆ.
ಇದನ್ನೂ ಓದಿ: ರೈತ ಸಂಘದಿಂದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ದೇವೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ, ಭರಮಸಾಗರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶೈಲೇಶ್, ಕೃಷ್ಣಮೂರ್ತಿ, ಡಿ.ಎಸ್.ಪ್ರವೀಣ್‍ಕುಮಾರ್, ಕಲ್ಲೇಶ್, ಹಿರೇಬೆನ್ನೂರು ನಾಗರಾಜ್, ಶಿವಣ್ಣ, ಚಂದ್ರಶೇಖರ್, ಉಪ ತಹಶೀಲ್ದಾರ್ ವನಜಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಂಗಪ್ಪ, ರಾಮಪ್ಪ, ರಾಜಣ್ಣ, ಹನುಮಂತಪ್ಪ, ತಿಪ್ಪಣ್ಣ, ವನಜಾಕ್ಷಮ್ಮ, ಕರಿಬಸಪ್ಪ, ರುದ್ರಪ್ಪ, ಪಾಂಡುರಂಗಪ್ಪ, ರುದ್ರೇಶ್ ಗ್ರಾಮಸ್ಥರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
