CHITRADURGA NEWS | 11 NOVEMBER 2025
ಹೊಸದುರ್ಗ: ಕಾಯಕ ಮಾಡಿದರೆ ಯಶಸ್ಸು ಲಭಿಸಲು ಸಾಧ್ಯ, ಕೇಡು ಬಯಸಿದರೆ ನೆಮ್ಮದಿ ಕಳೆದುಕೊಂಡು ಪರದ ಚಿಂತೆ ಮಾಡಿ ತಮ್ಮ ಬದುಕಿನ ಚಿಂತೆಯನ್ನು ಕಳೆದುಕೊಳ್ಳುವ ಬದಲು ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಪಾಲಿಸಿದರೆ ಪ್ರಗತಿ ಸಾಧ್ಯ ಎಂದು ಹೊಸದುರ್ಗದ ಕುಂಚಗಿರಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಬುರುಜನಹಟ್ಟಿ ಪರಶುರಾಮ್ ಇನ್ನಿಲ್ಲ
ಹೊಸದುರ್ಗದ ಶ್ರೀ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ 23ನೇ ವರ್ಷದ 11ನೇ ತಿಂಗಳ ಸುಜ್ಞಾನ-ಸಂಗಮ ಹಾಗೂ ಕನಕ ಜಯಂತಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ.
ರಾಗ, ದ್ವೇಷ ಮರೆತು ಪರಸ್ಪರ ಪ್ರೀತಿ, ಗೌರವಿಸಿದರೆ ಸ್ಥಿರ ಸುಂದರ ಮನಸುಗಳ ಸಮಾಜವನ್ನು ನಿರ್ಮಿಸಿ ಪ್ರೀತಿ ಮಮತೆಯನ್ನು ಬೆಳೆಸಬೇಕಿದೆ. ಆದರೆ ಕಲಿಯುಗದಲ್ಲಿ ಕೇವಲ ಗಳಿಕೆ ಆದ್ಯತೆ ಕೊಟ್ಟು ಸಂಬಂಧದ ಮಹತ್ವವನ್ನು ಮರೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ.
ಜಾತಿ ಜಾತಿಗಳ ಮಧ್ಯೆ ಕಲಹಗಳು ಉಂಟಾಗಲು ಜಾತಿಯ ಶ್ರೇಷ್ಠ ಮನೋಭಾವ ಕಾರಣ. ಮಾನವ ಶ್ರೇಷ್ಠನೆ ವರೆತು ಯಾವುದೇ ಜಾತಿ ಶ್ರೇಷ್ಠವಲ್ಲ. ಯಾವ ಜಾತಿ ಕನಿಷ್ಠವೂ ಅಲ್ಲ, ಯೋಜಿಸುವವರ ಮನೋಸ್ಥಿತಿ ಸರಿಯಾದರೆ ಎಲ್ಲರೂ ಶ್ರೇಷ್ಟರಾಗಿ ಕಾಣುತ್ತಾರೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಎಲ್ಲವೂ ನಮ್ಮವರೆಂದು ಹಪ್ಪಿಕೊಂಡಾಗ ಸಮಾಜದಲ್ಲಿ ಸೌಹಾರ್ದತೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಕಲಿಯುಗದಲ್ಲಿ ಶಿಕ್ಷಣ ಪಡೆದ ಜನರಿಂದನೇ ಜಾತಿಯ ವೈಭವೀಕರಣ ನಡೆಯುತ್ತಿರುವುದು ಸಮಾಜಕ್ಕೆ ತುಂಬಾ ಅಪಾಯಕಾರಿ. ಬೆಳವಣಿಗೆ ಮನೆಗಳನ್ನು ಬಾಡಿಗೆ ಕೊಡುವುದರಲ್ಲೂ ಜಾತಿ ಬಂದಿರುವುದು ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಿರುವುದರ ಸಂಕೇತ.
ಎಲ್ಲರನ್ನೂ ಪ್ರೀತಿಸಿ, ಎಲ್ಲರೂ ನಮ್ಮವರೆಂದು ಭಾವಿಸಿ, ಪರಸ್ಪರ ಗೌರವಿಸಿದರೆ ಸಮಾಜದಲ್ಲಿ ಸಹಬಾಳ್ವೆಯ ವಾತಾವರಣ ನಿರ್ಮಿಸಲು ಮಠಾಧೀಶರು, ರಾಜಕಾರಣಿಗಳು, ಪ್ರಜ್ಞಾವಂತರು ಯೋಚಿಸಬೇಕಿದೆ ಎಂದರು.
ಶಿಕ್ಷಕರಾದ ತಿಪ್ಪೇಸ್ವಾಮಿ, ಬಿ.ಜಿ.ಅರುಣ್ ಮಾತನಾಡಿದರು. ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಬಿ.ಕೆ.ನಾಗರಾಜಪ್ಪ ಉಪನ್ಯಾಸ ನೀಡಿದರು.
ಇದನ್ನೂ ಓದಿ: ಮಕ್ಕಳ ಜೊತೆ ಹಾಸ್ಟೆಲ್ ಊಟ ಮಾಡಿದ ಜಿಪಂ ಸಿಇಒ ಡಾ.ಆಕಾಶ್
ಮಾಚೇನಹಳ್ಳಿ, ಚಿತ್ರದುರ್ಗ ಯೋಜನಾ ವರದಿ ನಿರ್ದೇಶಕ ಎಂ.ಶ್ರೀನಿವಾಸ್, ಹಾಪ್ ಕಾಮ್ಸ್ ಅಧ್ಯಕ್ಷ ತಣಿಗೆಕಲ್ಲು ಟಿ.ಎಸ್.ಶಂಕರಮೂರ್ತಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕುಂಚಿಟಿಗ ಸಮಾಜ ಹೊಸದುರ್ಗ ಸಂಘಟನೆಗಳ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
