
CHITRADURGA NEWS | 31 OCTOBER 2025
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎಂ.ಮಂಜುನಾಥಪ್ಪ ಕೋಗುಂಡೆ, ಉಪಾಧ್ಯಕ್ಷರಾಗಿ ಕೆ.ಆರ್.ರವಿ ಸಿಂಗಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: 26 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ

ಕಳೆದ ಅ.13ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್.ಎನ್.ಹನುಮಂತಪ್ಪ ಕೋಡಿರಂಗವ್ವನಹಳ್ಳಿ, ಜಿ.ಆರ್.ಧನಂಜಯ ಯಳಗೋಡು, ಟಿ.ಸಣ್ಣತಿಮ್ಮಪ್ಪ ವಡ್ಡರಸಿದ್ದವ್ವನಹಳ್ಳಿ, ಎನ್.ಕಲ್ಲೇಶ್ ಭರಮಸಾಗರ, ಹೆಚ್.ನಿರಂಜನಮೂರ್ತಿ ಅನ್ನೇಹಾಳ್, ಎಸ್..ಹೆಚ್.ತಿಪ್ಪೇಸ್ವಾಮಿ ಸಿರಿಗೆರೆ, ಎಂ.ಎಸ್.ಪ್ರಸನ್ನ ಸಿರಿಗೆರೆ, ದೇವರಾಜ್.ಬಿ.ಎನ್ ಕೊಡಗವಳ್ಳಿ, ನಾಗರಾಜ್.ಜಿ.ಎಸ್ ಹಿರೇಕಬ್ಬಿಗೆರೆ, ಕೆ.ಜಿ.ಕವಿತ ಬಸವಕುಮಾರ್ ಸಿರಿಗೆರೆ, ಶಾಂತಕುಮಾರಿ.ಬಿ.ಎಸ್ಚಿಕ್ಕಬೆನ್ನೂರು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿ ಎಸ್.ಮಹಮ್ಮದ್ಯೂನಸ್ ಫರ್ವಿಜ್ ಘೋಷಣೆ ಮಾಡಿದರು.
ಜಿಲ್ಲಾ ಬ್ಯಾಂಕ್ನ ನಾಮ ನಿರ್ದೇಶಕರಾದ ಎಂ.ನಿಶಾನಿ ಜಯಣ್ಣ ಬುರುಜನಹಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ.
ಇದನ್ನೂ ಓದಿ: ಸರ್ದಾರ್ ವಲ್ಲಭಬಾಯಿ ಪಟೇಲ್ | ನ.12 ರಂದು ಏಕತೆಯ ಸಂದೇಶ ಸಾರಲು ಪಾದಯಾತ್ರೆ | ಸಂಸದ ಗೋವಿಂದ ಕಾರಜೋಳ
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಿ.ಎನ್.ಉಮಾಶಂಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
