CHITRADURGA NEWS | 29 OCTOBER 2025
ಚಿತ್ರದುರ್ಗ: 42 ಕೆರೆಗಳನ್ನು ತುಂಬಿಸುವ ಭರಮಸಾಗರ ಏತ ನೀರಾವರಿ ಯೋಜನೆ ಕಾರ್ಯಗತವಾದ ನಂತರ ಈ ಭಾಗದ ರೈತರು ಸಂತೃಪ್ತರಾಗಿದ್ದಾರೆ. ಕೃಷಿಯಲ್ಲಿ ಸಂತೋಷವನ್ನು ಕಾಣುತ್ತಿದ್ದಾರೆ. ಇದು ಕ್ಷೇತ್ರದ ಶಾಸಕನಾದ ನನಗೆ ಸಂತೋಷ ತಂದಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: 100 ಮೀ ಹರ್ಡಲ್ಸ್ ನಲ್ಲಿ ಗೂಳಯ್ಯನಹಟ್ಟಿಯ ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಪ್ರಥಮ | ರಾಜ್ಯಮಟ್ಟಕ್ಕೆ ಆಯ್ಕೆ
ಭರಮಸಾಗರ ಗೊಲ್ಲರಟ್ಟಿ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿ ಮತ್ತು ದುರ್ಗಮ್ಮ ದೇವಸ್ಥಾನದ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆ ಸಫಲಗೊಳಿಸಲು 600 ಕೋಟಿ ಹಣವನ್ನು ಬಿಡುಗಡೆ ಮಾಡಿತು. ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳರ ದೂರದೃಷ್ಟಿಯ ಫಲವಾಗಿ ಈ ಯೋಜನೆ ಸಾರ್ಥಕ್ಯ ಕಂಡಿದೆ ಎಂದರು.
ರೈತರ ಬೇಡಿಕೆಗಳು ಬಹಳ ಕಡಿಮೆ. ಅವರು ಅವಲಂಭಿಸಿರುವ ಕೃಷಿಗೆ ನೀರು ಮತ್ತು ಗುಣಮಟ್ಟದ ವಿದ್ಯುತ್ ಅಷ್ಟನ್ನು ಮಾತ್ರ ಅವರು ಕೇಳುತ್ತಾರೆ. ಅವುಗಳನ್ನು ಒದಗಿಸಲು ಇಡೀ ಕ್ಷೇತ್ರದಾದ್ಯಂತ ನಾನು ಕೆಲಸ ಮಾಡುತ್ತಿರುವೆ. ಅಜ್ಜಪ್ಪನಹಳ್ಳಿಯ ವಿದ್ಯುತ್ ಕೇಂದ್ರ ತನ್ನ ಕಾಮಗಾರಿ ಮುಗಿಸಿದ ನಂತರ ಭರಮಸಾಗರ, ಸಿರಿಗೆರೆ, ವಿಜಾಪುರ, ಕೋಡಿರಂಗವ್ವನಹಳ್ಳಿ ಮುಂತಾದ ಕಡೆಗಳ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 29 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಈ ಹಂಗಾಮಿನಲ್ಲಿ ಅಡಿಕೆ ಬೆಲೆ ಕ್ವಿಂಟಾಲಿಗೆ 70 ಸಾವಿರ ರೂ. ದಾಟಿದೆ. ಇದು ರೈತರೆಲ್ಲರ ಸಂತೋಷಕ್ಕೆ ಕಾರಣವಾಗಿದೆ. ಅಡಿಕೆ ಬೆಳೆಯುವ ರೈತರು ಈಗ ಕಾರುಗಳಲ್ಲಿ ಓಡಾಡುವಂತಾಗಿರುವುದು ಅಭಿವೃದ್ಧಿಯ ಪ್ರತೀಕವಾಗಿದೆ. ಇಂತಹ ಅಭಿವೃದ್ಧಿಯಿಂದ ಅವರ ಆರ್ಥಿಕ ಚೈತನ್ಯ ಉತ್ತಮಗೊಂಡಿದೆ ಎಂದರು.
ಕೃಷಿಗೆ ನಮ್ಮ ರೈತರು ಒತ್ತು ನೀಡುತ್ತಿರುವಂತೆಯೇ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಬೇಕು. ಕ್ಷೇತ್ರದಾದ್ಯಂತ ಕೃಷಿಗೆ ನೀಡಿದಷ್ಟೇ ಗಮನವನ್ನು ಶಿಕ್ಷಣಕ್ಕೂ ನೀಡಿರುವೆ. ಫಲವಾಗಿ ಭರಮಸಾಗರ, ಕೊಳಹಾಳ್, ಎಮ್ಮೆಹಟ್ಟಿ, ಹೊಳಲ್ಕೆರೆ ಮುಂತಾದ ಕಡೆ ಉತ್ತಮ ಶಾಲಾ ಸೌಲಭ್ಯಗಳು ದೊರೆಯುತ್ತಿವೆ. ರೈತರ ಮಕ್ಕಳು ಶಿಕ್ಷಣದ ಕಡೆಗೆ ಗಮನ ನೀಡಿ ಅವರು ಆ ರಂಗದಲ್ಲಿಯೂ ಮನ್ನಡೆ ಸಾಧಿಸಬೇಕು ಎಂದರು.
ಜನಪ್ರತಿನಿಧಿಯಾದ ನನಗೆ ಅಧಿಕಾರ ನೀಡಿರುವವರು ಮತದಾರರು. ಅವರ ಕಷ್ಟಸುಖಗಳನ್ನು ಅರ್ಥ ಮಾಡಿಕೊಂಡು ನಾನು ಕೆಲಸ ಮಾಡುತ್ತಿರುವುದರಿಂದ ಜನರು ನನ್ನೊಂದಿಗೆ ನಿಂತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿನ ಕೆಲಸಗಳನ್ನು ಮಾಡುತ್ತಿರುವಂತೆಯೇ ಮಹಿಳೆಯರ ಸಮಸ್ಯೆಗಳನ್ನು ಅರಿತು ಅವರ ಬೇಡಿಕೆಗಳನ್ನು ಸಹ ಈಡೇರಿಸಿದ್ದೇನೆ. ಹೆಣ್ಣಹಮಕ್ಕಳ ಸಮಸ್ಯೆ, ರೈತರ ಸಮಸ್ಯೆ, ಓದುವ ಮಕ್ಕಳ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿರುವೆ ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | 28ಅಕ್ಟೋಬರ್ | ಯಾವ ಅಡಿಕೆಗೆ ಎಷ್ಟು ರೇಟ್
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಓಬವ್ವನಾಗತಿಹಳ್ಳಿ ಮಂಜುನಾಥ್, ಮಂಡಲ ಮಾಜಿ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿದರು.
ಭರಮಸಾಗರ ಮಂಡಲ ಅಧ್ಯಕ್ಷ ಎನ್.ಟಿ. ಬಸವರಾಜ್, ನಾಗೇಂದ್ರಣ್ಣ, ತಿಮ್ಮಣ್ಣ, ನಾಗೇಂದ್ರಪ್ಪ, ಜಯಣ್ಣ, ಮಂಜಣ್ಣ, ಈರಣ್ಣ, ಮಳ್ಳಪಣ್ಣ, ದಾನಪ್ಪ, ರಾಜಣ್ಣ, ತಿಪ್ಪೇಶ್, ಅಂಜಿ, ಚಂದ್ರಶೇಖರ್ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
