
CHITRADURGA NEWS | 01 OCTOBER 2025
ಚಿತ್ರದುರ್ಗ: ಇಂದಿನ ಸಾಮಾಜಿಕ ಮಾಧ್ಯಮಗಳಿಂದ ಮಹಿಳೆಯರು ಅಸುರಕ್ಷಿತ ಮನೋಭಾವ ಕಾಣುತ್ತಿದ್ದಾರೆ ಎಂದು ಬೆಂಗಳೂರಿನ ಮನೋವೈದ್ಯೆ ಡಾ.ಸೌಜನ್ಯ ವಸಿಷ್ಠ ಹೇಳಿದರು.
ಮುರುಘಾ ಮಠದ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಹಿಳಾ ಸಬಲೀಕರಣ ಕುರಿತು ಮಾತನಾಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಸೆಪ್ಟಂಬರ್ 29 | ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
ಮಹಿಳೆಯರು ಸ್ವತಂತ್ರವಾಗಿ ಅಲೋಚನೆ ಮಾಡಿ ಧೈರ್ಯ ಮತ್ತು ಸ್ವತಂತ್ರವಾಗಿ ಅಭಿವ್ಯಕ್ತ ಮಾಡುವುದನ್ನು ಕಲಿಯಬೇಕು. ಅಭದ್ರತೆ ಯೋಚನೆಯಿಂದ ಹೊರಬನ್ನಿ. ಪ್ರಪಂಚ ಬಹಳ ವಿಶಾಲವಾಗಿದೆ, ಪ್ರತಿಯೊಬ್ಬರಿಂದ ಕಲಿಯುವ ಅನೇಕ ವಿಷಯಗಳು ಇರುತ್ತವೆ. ಮೊಬೈಲ್ ಗೀಳಿನಿಂದ ಹೊರಗೆ ಬನ್ನಿ ಎಂದು ಕರೆ ನೀಡಿದರು.
ಚಿತ್ರದುರ್ಗ ಧೈರ್ಯದ ಸಂಕೇತ ನಮ್ಮ ಓನಕೆ ಒಬವ್ವ. ಅಧುನಿಕ ಸಂದರ್ಭದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಮುನ್ನಡಿ ಬರೆದಿದ್ದಾರೆ. ಮಹಿಳೆಯರು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಬೇಕು. ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ. ಮಹಿಳೆಯರು ಅಧುನಿಕ ಸಂಕೋಲೆಗಳನ್ನು ಧೈರ್ಯವಾಗಿ ಎದುರಿಸಿ ನಮ್ಮ ಜೀವನದ ಭದ್ರತೆಯನ್ನು ಪಡೆದುಕೊಳ್ಳುವುದಾಗಿದೆ ಎಂದರು.
ಇದನ್ನೂ ಓದಿ:ಮುರುಘಾ ಮಠದಲ್ಲಿ ಕೃಷಿ ಮತ್ತು ಕೈಗಾರಿಕೆ ಮೇಳ | ಡಾ.ಅಶೋಕ್ ದಳವಾಯಿ ಉದ್ಘಾಟನೆ
ತಿಂಥಣಿ ಕನಕಗುರು ಪೀಠದ ಶ್ರೀಸಿದ್ಧರಮಾನಂದಪುರಿ ಸ್ವಾಮೀಜಿ ಮಾತನಾಡಿ, ಶೂನ್ಯಪೀಠದ ಪರಂಪರೆಯ ಅಧಿಕೃತ ಮಠ ಶ್ರೀ ಮುರುಘಾಮಠ. 12ನೇ ಶತಮಾನದಲ್ಲಿ ಬಸವಣ್ಣನವರ ಹೋರಾಟಕ್ಕೆ ಬೆನ್ನೆಲುಬಾಗಿ ಗಂಗಾಬಿಕೆ, ನೀಲಾಂಬಿಕೆ ಮತ್ತು ಅಕ್ಕ ನಾಗಮ್ಮ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.
ಭಾರತದ ಹೆಮ್ಮೆಯ ಸಂಸ್ಕೃತಿ ಅದಿವಾಸಿ ಸಂಸ್ಕೃತಿ. ನಮ್ಮದು ಮಾತೃ ಪ್ರಧಾನ ಸಂಸ್ಕೃತಿಯಾಗಿದೆ. ಹಿಂದೆ ದಬ್ಬಾಳಿಕೆ, ಸ್ತ್ರೀ ಅಸಮಾನತೆ, ಜಾತಿ ಅಸಮಾನತೆಯನ್ನು ನಿವಾರಿಸಲು ಬಸವಣ್ಣನವರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಿ ಎಂಬ ಸಂದೇಶವನ್ನು ನೀಡಿದರು ಎಂದರು.
ಇದನ್ನೂ ಓದಿ: ಟೇಕ್ವೋಂಡಾ ಸ್ಪರ್ಧೆ | SJM ಪದವಿ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ವಚನದರ್ಶನ ಮುಖಾಂತರ ಭಗವಂತನ ದರ್ಶನ ಕಾಣಬೇಕಾಗಿದೆ. ನಮ್ಮ ಸಂಸ್ಕೃತಿ ಶರಣ ಸಂಸ್ಕೃತಿ. ಆದ್ದರಿಂದ ಮಕ್ಕಳನ್ನು ಕುಟುಂಬದ ನಡುವೆ ಬೆಳೆಸಿ ಸಂಸ್ಕಾರವನ್ನು ಕಲಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನ ಸಂಬಂಧಗಳು ಹಾಳಾಗುತ್ತಿವೆ. ಪರಸ್ಪರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಿದರು.
ಅಖಿಲ ಭಾರತ ಶರಣ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, 12 ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರ ಅಸ್ತಿತ್ವ ಚಿಂತನೆ ಮತ್ತು ಜಾಗೃತಿಯನ್ನು ಮಾಡಿದರು. ಶರಣೆ ಅಕ್ಕಮಹಾದೇವಿ ಕನ್ನಡ ನಾಡಿನ ಸ್ತ್ರೀ ಕುಲದ ಅದರ್ಶ ಮಹಿಳೆ. ಅಯ್ದಕಿ ಲಕ್ಕಮ್ಮ ವಿಶಿಷ್ಟ ಕಾಯಕ ಸಿದ್ದಾಂತವನ್ನು ಪ್ರತಿಪಾದನೆ ಮಾಡಿದ ಶರಣೆಯಾಗಿದ್ದಾರೆ. 12ನೇ ಶತಮಾನದಲ್ಲಿ ಶರಣ ಶರಣೆಯರು ಪ್ರಾಮಾಣಿಕತೆ, ನಡೆ ನುಡಿಗಳ ಸ್ವಾಭಿಮಾನವಾಗಿ ಬದುಕಿದವರು. ಅರ್ಥಿಕ ಸಂಹಿತೆ, ನೀತಿ ಸಂಹಿತೆ ಮತ್ತು ನೈತಿಕ ಮೌಲ್ಯಗಳನ್ನು ಏಕಕಾಲದಲ್ಲಿ 33 ಶರಣೆಯರು ವೈಚಾರಿಕ ಚಿಂತನೆಗಳ ಮೂಲಕ ಸ್ತ್ರೀ ಸ್ವತಂತ್ರ ಭದ್ರವಾದ ಬುನಾದಿಯನ್ನು ಹಾಕಿದವರು. ಇಂತಹ ಶರಣೆಯರ ಜೀವನದ ಅದರ್ಶ ಮೌಲ್ಯಗಳನ್ನು ಇಂದಿನ ಮಹಿಳೆಯರು ಪಾಲಿಸಬೇಕಿದೆ ಎಂದರು.
ಇದನ್ನೂ ಓದಿ: PHC ಗಳಲ್ಲಿ ವೈದ್ಯರು ಕಡ್ಡಾಯ ಹಾಜರಾತಿಗೆ ಸೂಚನೆ | ಜಿಪಂ ಸಿಇಒ ಆದೇಶ
ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಬಸವ ತತ್ವದ ವೈಚಾರಿಕ ತಳಹಾದಿಯ ಮೇಲೆ ಸಮಾಜದ ಪರಿವರ್ತನೆಗೆ ಶರಣ ಸಂಸ್ಕೃತಿಯು ಉತ್ಸವ ಆರಂಭದಿಂದಲೂ ಸಾಮಾಜಿಕ ಬದ್ಧತೆ, ಜನಜಾಗೃತಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿಯಲ್ಲಿ ಶ್ರೀಮಠ ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸುತ್ತಾ ಬಂದಿದೆ ಎಂದು ಹೇಳಿದರು.
ಶಿವಮೊಗ್ಗ ಬಸವತತ್ವ ಪೀಠದ ಶ್ರೀ ಬಸವ ಮರಳುಸಿದ್ದ ಸ್ವಾಮೀಜಿ, ಹಾಲಸ್ವಾಮಿ ವಿರಕ್ತ ಮಠದ ಡಾ. ಬಸವ ಜಯಚಂದ್ರ ಸ್ವಾಮಿಗಳು, ಹಾವೇರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಯಶೋಧ ವಂಟಗೋಡಿ, ಹಿಂದುಳಿದ ವರ್ಗಕಲ್ಯಾಣ ಇಲಾಖೆಯ ಪುಷ್ಪಾಲತ, ಕಲ್ಬುರ್ಗಿ ನೀಲಾಂಬಿಕೆ ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಚಟ್ನಳ್ಳಿ, ರೆಡ್ಕ್ರಾಸ್ ಸಂಸ್ಥೆಯ ಗಾಯಿತ್ರಿ ಶಿವರಾಂ. ಚಿಂತಕರಾದ ಪಾಲನೇತ್ರ ಉಪಸ್ಥಿತರಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಬರಪೀಡಿತ ಎಂದು ಘೋಷಿಸಿ | ಪ್ರತಿಭಟನೆ
ಕಾರ್ಯಕ್ರಮದಲ್ಲಿ ಎಸ್ಜೆಎಂ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಚಿತ್ರದುರ್ಗ ಲಿಂಗಾಯತ ಮಹಾಸಭಾ ಮಹಿಳಾ ವೇದಿಕೆಯವರು ನೃತ್ಯ ಪ್ರದರ್ಶನ ನೀಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
