
CHITRADURGA NEWS | 01 OCTOBER 2025
ಹೊಳಲ್ಕೆರೆ : ವಾಲ್ಮೀಕಿ ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಶಾಸಕ ಡಾ.ಎಂ.ಚಂದ್ರಪ್ಪ ಸೂಚಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಬರಪೀಡಿತ ಎಂದು ಘೋಷಿಸಿ | ಪ್ರತಿಭಟನೆ

ಮಹಾತ್ಮಗಾಂಧಿ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎರಡು ದಿನಗಳ ಕಾಲ ದಸರಾ ಹಬ್ಬವಿರುವುದರಿಂದ ಜನ ಎಲ್ಲರೂ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಹಾಗಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸೋಣ.
ಡಿಸೆಂಬರ್ ತಿಂಗಳಿನಲ್ಲಿ ಬೇಕಾದರೆ ವಾಲ್ಮೀಕಿ ಜಯಂತಿಯನ್ನು ದೊಡ್ಡ ಸಮ್ಮೇಳನ ರೀತಿಯಲ್ಲಿ ಆಚರಿಸೋಣ. ಅದಕ್ಕೆ ಸಚಿವ ಸತೀಶ್‍ಜಾರಕಿಹೊಳಿ ಹಾಗೂ ಗುರುಗಳನ್ನು ಕರೆಸೋಣ ಎಂದು ವಾಲ್ಮೀಕಿ ಸಮಾಜದ ಮುಖಂಡರುಗಳಿಗೆ ತಿಳಿಸಿದರು.
ಇದನ್ನೂ ಓದಿ: PHC ಗಳಲ್ಲಿ ವೈದ್ಯರು ಕಡ್ಡಾಯ ಹಾಜರಾತಿಗೆ ಸೂಚನೆ | ಜಿಪಂ ಸಿಇಒ ಆದೇಶ
ಬಹುದೊಡ್ಡ ಸಮಾಜ ನಿಮ್ಮದು, ವಾಲ್ಮೀಕಿ ಭವನ, ಶಾಲಾ-ಕಾಲೇಜುಗಳನ್ನು ಕಟ್ಟಿಸಿದ್ದೇನೆ. ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಉಚಿತವಾಗಿ ಬಸ್‍ಗಳನ್ನು ಬಿಟ್ಟಿದ್ದೇನೆ. ನೂರಾರು ಸಂಘ ಸಂಸ್ಥೆಗಳಿಗೆ ಹಣ ನೀಡಲಾಗಿದೆ.
ವಾಲ್ಮೀಕಿ ಜಯಂತಿ ಮಾಡುವುದಾದರೆ ಇಡೀ ತಾಲ್ಲೂಕಿನ ಜನರ ಕಣ್ತೆರೆಸುವ ರೀತಿಯಲ್ಲಿ ಮಾಡಬೇಕು. ಇಲ್ಲವಾದಲ್ಲಿ ಸರಳವಾಗಿ ಇಲ್ಲಿಯೇ ಆಚರಿಸೋಣ ಎಂದರು.
ಮಕ್ಕಳು ವಿದ್ಯಾವಂತರಾದರೆ ಅದುವೆ ನಿಜವಾದ ಆಸ್ತಿ. ವಾಲ್ಮೀಕಿ ಜಯಂತಿಯಲ್ಲಿ ನೂರಾರು ಮಕ್ಕಳನ್ನು ಗುರುತಿಸಿ ಸನ್ಮಾನಿಸಿದರೆ ಅದಕ್ಕೊಂದು ಅರ್ಥವಿರುತ್ತದೆ. ತರಾತುರಿಯಲ್ಲಿ ಆಚರಣೆ ಮಾಡುವುದು ಬೇಡ. ಪೂರ್ವ ತಯಾರಿ ನಡೆಸಿ ಅದಕ್ಕೆ ನನ್ನ ಸಹಕಾರವಿರುತ್ತದೆ.
ಸಮಾಜದ ಮುಖಂಡರುಗಳನ್ನು ಕರೆಸೋಣ. ಮಹರ್ಶಿ ವಾಲ್ಮೀಕಿ ರಾಮಾಯಣ ರಚಿಸಿದ್ದಾರೆ. ಅಂತಹ ಬಹುದೊಡ್ಡ ಸಮಾಜ ನಿಮ್ಮದು. ಕೇವಲ ಬೆರಳೆಣಿಕೆಯಷ್ಟು ಜನ ಸೇರಿಕೊಂಡು ವಾಲ್ಮೀಕಿ ಜಯಂತಿ ಆಚರಿಸುವುದರಲ್ಲಿ ಅರ್ಥವಿರುವುದಿಲ್ಲವೆಂದು ಸಮಾಜದವರಿಗೆ ಮನವರಿಕೆ ಮಾಡಿದರು.
ಇದನ್ನೂ ಓದಿ: ನಾಗರಿಕ ಸೇವಾ ಹುದ್ದೆಗಳ ನೇಮಕಾತಿ | 3 ವರ್ಷ ವಯೋಮಿತಿ ಸಡಿಲಿಕೆ | ರಾಜ್ಯ ಸರ್ಕಾರ ಆದೇಶ
ತಹಶೀಲ್ದಾರ್ ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ನಗರಸಭೆ ಉಪಾಧ್ಯಕ್ಷೆ ನಾಗರತ್ನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ರೋಹಿತ್, ರಂಗಸ್ವಾಮಿ, ನಾಯಕ ಸಮಾಜದ ಅಧ್ಯಕ್ಷ ಸೂರೆಗೌಡ್ರು, ಕಾರ್ಯದರ್ಶಿ ಹೊರಕೆರಣ್ಣ, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ಮಂಜಣ್ಣ ಹಾಗೂ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
