
CHITRADURGA NEWS | 21 SEPTEMBER 2025
ಚಿತ್ರದುರ್ಗ: ಬಿಜೆಪಿ ನಗರ ಮಂಡಲದ ವತಿಯಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರವನ್ನು ಭಾನುವಾರ ಗೋಪಾಲಪುರ ಮುಖ್ಯ ರಸ್ತೆಯಲ್ಲಿನ ದರ್ಜಿಕಾಲೋನಿ 2ನೇ ಕ್ರಾಸ್ ಹತ್ತಿರದ ಶ್ರೀ ಸ್ಪೂರ್ತಿ ಸರ್ಕಲ್‍ಬಳಿ ಶಿವಶಕ್ತಿ ಆಸ್ಪತ್ರೆ ಹತ್ತಿರ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: 2.20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೋದಿಯವರು ದೇಶದ ಪ್ರಧಾನ ಮಂತ್ರಿಯಾದ ಮೇಲೆ ದೇಶಕ್ಕೆ ಒಂದು ಕಳೆ ಬಂದಿದೆ. ಬೇರೆ ದೇಶದವರು ಸಹಾ ನಮ್ಮ ದೇಶದ ಪ್ರಧಾನ ಮಂತ್ರಿಯ ಮಾತನ್ನು ಕೇಳುತ್ತಿದ್ದಾರೆ, ಏನಾದರೂ ಬೇರೆ ದೇಶಗಳ ಮಧ್ಯೆ ಕಲಾಹ ನಡೆದರೆ ನಮ್ಮ ದೇಶದ ಪ್ರಧಾನ ಮಧ್ಯಸ್ಥಿಕೆಯಲ್ಲಿ ಮಾತುಕಥೆ ನಡೆಯುವುದರ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಲಾಗುತ್ತದೆ ಎಂದರು.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಸೆ.17 ರಿಂದ ಅ.2ರವರೆಗೆ ಸೇವಾ ಪಾಕ್ಷಿಕ 2025ರ ಅಡಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮವನ್ನು ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ರಕ್ತದಾನ ಶಿಬಿರ ಆರೋಗ್ಯ ಶಿಬಿರ, ಸಸಿ ನಡೆವಿಕೆ, ಸ್ವಚ್ಚತೆ, ಮೋದಿಯವರ ಜೀವನ ಚರಿತೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ, ಪ್ರಬುದ್ಧವರ ಗೋಷ್ಠಿ, ಸಾಕ್ಷ್ಯಚಿತ್ರ ವೀಕ್ಷಣೆ, ಪುಸ್ತಕ ವಿತರಣೆ, ಮೋದಿ ವಿಕಾಸ ಮ್ಯಾರಥಾನ್ ಕ್ರೀಡೆ ಹಾಗೂ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ
ತಪಾಸಣಾ ಶಿಬಿರದಲ್ಲಿ ಬಿ.ಪಿ. ಮತ್ತು ಸಕ್ಕರೆ ಕಾಯಿಲೆ ತಪಾಸಣೆ ನಡೆಸಿದ್ದು, ಇದರ ಪ್ರಯೋಜನವನ್ನು ಗೋಪಾಲಪುರ ರಸ್ತೆಯ ಸುತ್ತಮುತ್ತಲಿನ ನಾಗರಿಕರು ಸದುಪಯೋಗ ಪಡಿಸಿಕೊಡರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ನಗರಾಧ್ಯಕ್ಷ ಹೆಚ್.ಎನ್.ಲೋಕೇಶ್, ಪ್ರಧಾನ ಕಾರ್ಯದರ್ಶಿ ಬಸವೇಶ್, ಎಂ.ಎಸ್.ಲೀಲಾವತಿ, ಎಸ್.ಶಶಿಧರ್, ಯುವ ಮೋರ್ಚಾ ಅಧ್ಯಕ್ಷ ಎಂ.ವಸಂತ ಆಚಾರ್, ಎಸ್.ಜೆ.ರವಿಕುಮಾರ್ ವಕ್ತಾರ ನಾಗರಾಜ್ ಬೇದ್ರೇ, ಜಿಲ್ಲಾ ಉಪಧ್ಯಕ್ಷರಾದ ಚಂದ್ರಿಕಾ ಲೋಕನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

