
CHITRADURGA NEWS | 23 AUGUST 2025
ಹೊಳಲ್ಕೆರೆ: ಭರಮಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ನಡೆದ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಭಾಗವಹಿಸಿ, ಪ್ರಶಸ್ತಿ ವಿತರಣೆ ಮಾಡಿದರು.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಇ.ಡಿ.ವಶಕ್ಕೆ

ನಂತರ ಮಾತನಾಡಿದ ಶಾಸಕರು, ನಮ್ಮ ದೇಶದ ಮಕ್ಕಳು ಸದೃಢ ಮತ್ತು ಆರೋಗ್ಯದಿಂದಿರಬೇಕಾದರೆ ಸರ್ಕಾರ ಕ್ರೀಡೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕು ಎಂದರು.
10ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುವುದು ಬಹಳ ಸಂತೋಷವಾಗಿದೆ.
ಮೊಳಕಾಲ್ಮುರು ತಾಲ್ಲೂಕು ಅತಿ ಹೆಚ್ಚು ಗುಡ್ಡಗಾಡಿನಿಂದ ಕೂಡಿದೆ. ಸಿನಿಮಾ ನಟರು ಆಯಾ ರಾಜ್ಯ ಇಲ್ಲವೆ ದೇಶಕ್ಕೆ ಪರಿಚಯವಿರಬಹುದು. ಅದೇ ಒಬ್ಬ ಕ್ರೀಡಾಪಟುವಿಗೆ ವಿಶ್ವದಲ್ಲಿಯೇ ಗೌರವ ಸಿಗುತ್ತದೆ. ಬೇರೆ ಯಾರಿಗೂ ಇಂತಹ ಅವಕಾಶವಿಲ್ಲ.
ಐ.ಪಿ.ಎಲ್.ನಲ್ಲಿ ಆರ್.ಸಿ.ಬಿ. ತಂಡ ಟ್ರೋಪಿಯನ್ನು ಗೆದ್ದಿತು. ಆದರೆ ಕರ್ನಾಟಕದವರು ತಂಡದಲ್ಲಿರಲಿಲ್ಲ ಎನ್ನುವುದಕ್ಕಿಂತ ಗೆಲುವು ಮುಖ್ಯ. ಪಾಠಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಕ್ರೀಡೆಯ ಕಡೆಗೂ ಅಷ್ಟೆ ಗಮನ ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಗಣೇಶ ಹಬ್ಬ | ಶಾಂತಿ, ಸೌಹಾರ್ದತೆಯಿಂದ ಆಚರಿಸಿ | ಡಿಸಿ ವೆಂಕಟೇಶ್
ಹೊಳಲ್ಕೆರೆಯಲ್ಲಿ ಹನ್ನೆರಡು ಕೋಟಿ ರೂ.ಗಳನ್ನು ಖರ್ಚು ಮಾಡಿ ಪ್ರಥಮ ದರ್ಜೆ ಕಾಲೇಜು ಕಟ್ಟಿಸಿದ್ದೇನೆ. ಮೂವತ್ತು ಕೋಟಿ ರೂ.ಗಳಲ್ಲಿ ಸ್ಟೇಡಿಯಂ ನಿರ್ಮಾಣವಾಗಿದೆ. ನಾಲ್ಕೈದು ಕೋಟಿ ರೂ.ಗಳಲ್ಲಿ ಒಳಾಂಗಣ ಕ್ರೀಡಾಂಗಣ ಕಟ್ಟಿಸಿದ್ದೇನೆ. ಮಕ್ಕಳಿಗೆ ಈಜುಕೊಳ ಕೂಡ ನಿರ್ಮಿಸಲಾಗಿದೆ. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತದೆ ಎಂದರು.
ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಶಶಿಕಲಾ ಎಸ್. ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ತಿಪ್ಪೇಸ್ವಾಮಿ ಹೆಚ್.ಸಿ.ಶಂಕರಪ್ಪ, ಡಾ.ಪ್ರಸನ್ನಕುಮಾರ್ ಡಿ.ಆರ್. ಡಿ.ಎಸ್.ಪ್ರದೀಪ್, ಹೆಚ್.ಎಂ.ಮಂಜುನಾಥ, ಕಲ್ಲೇಶ್, ಕೊಟ್ರೇಶ್, ಡಾ.ಹರೀಶ್, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
