
CHITRADURGA NEWS | 19 JANUARY 2025
ಚಿತ್ರದುರ್ಗ: ರೈತರ ಜಮೀನುಗಳಲ್ಲಿ ಮೋಟಾರ್ ಪಂಪ್ ಹಾಗು ಕೇಬಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯೂರು ತಾಲೂಕು ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲಹಳ್ಳಿ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಮೋಟಾರ್ ಪಂಪ್, ಕೇಬಲ್ ಸೇರಿ 43 ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಚಿತ್ರದುರ್ಗ ನಡುವೆ ರೈಲು ಮಾರ್ಗ | ಬಿ.ವೈ.ರಾಘವೇಂದ್ರ ಪ್ರಸ್ತಾವನೆ
ಜನವರಿ 6 ರಂದು ಕೂಡ್ಲಹಳ್ಳಿ ಗ್ರಾಮದ ರೈತ ಚಿದಂಬರ ಅವರ ಜಮೀನಿನಲ್ಲಿ ಮೋಟರ್ ಪಂಪ್ಯ ಕಳ್ಳತನವಾಗಿರುವ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ಕೇಗೆತ್ತಿಕೊಂಡ ಪೊಲೀಸರು, ಜನವರಿ 17 ರಂದು ಕೂಡ್ಲಹಳ್ಳಿ ಗ್ರಾಮದ ಎಚ್.ಆರ್.ಮಧುಸೂದನ್ ಎಂಬುವ ವ್ಯಕ್ತಿಯನ್ನು ಬಂಧಿಸಿ, ಬಂಧಿತನಿಂದ 215 ಅಡಿ ಕೇಬಲ್ ಹಾಗು ಮೋಟಾರ್ ಪಂಪ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 114 ಕೋಟಿ ಅನುದಾನದಲ್ಲಿ 180 ಬೆಡ್ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣ
ಪ್ರಕರಣದ ಮತ್ತೋರ್ವ ಆರೋಪಿ ಶಶಿಕುಮಾರ್ ತಪ್ಪಿಸಿಕೊಂಡಿದ್ದಾನೆ. ಸದರಿ ಪತ್ತೆ ಕಾರ್ಯ ಮಾಡಿದ ಅಬ್ಬಿನಹೊಳೆ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
