ಮುಖ್ಯ ಸುದ್ದಿ
Protest: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆ
CHITRADURGA NEWS | 13 DECEMBER 2024
ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಬೆಳಗಾವಿಯ ಸುವರ್ಣ ಸೌಧದ ಎದುರು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಪಂಬೆಳಗಾವಿಚಮಸಾಲಿ ಸಮಾಜ ಹಾಗೂ ವೀರಶೈವ ಲಿಂಗಾಯಿತ ಒಳ ಪಂಗಡಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ(Protest) ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕ್ಲಿಕ್ ಮಾಡಿ ಓದಿ: ಡಿ.ಕೆ.ಶಿವಕುಮಾರ್ ಪದ ಬಳಕೆಯಿಂದ ನೋವಾಗಿದೆ | ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಲಿಂಗಾಯಿತ ವಿರೋಧಿ ರಾಜ್ಯದ ಮುಖ್ಯಮಂತ್ರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2 ಎ.ಮೀಸಲಾತಿ ನೀಡುವಂತೆ ಹೋರಾಟ ಮಾಡುತ್ತಿರುವವರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೆ ಸೇವೆಯಿಂದ ಅಮಾನತ್ತುಗೊಳಿಸಬೇಕು.
ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರ ನಮ್ಮ ಚಳುವಳಿಯನ್ನು ಹತ್ತಿಕ್ಕಲು ಅವಕಾಶ ಕೊಡುವುದಿಲ್ಲ. ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪೊಲೀಸರ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಸಿದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮತ್ತೆ ಹರಿದ ನೀರು | 15 ದಿನಗಳಲ್ಲೇ ನಿರ್ಮಾಣವಾಯ್ತು ಹೊಸ ಸೇತುವೆ
ಎಸ್.ಟಿ.ನವೀನ್‍ಕುಮಾರ್, ಪಿ.ಎಂ.ಸಿದ್ದಪ್ಪ, ರುದ್ರೇಶ್ ಐಗಳ್, ಎಂ.ಶಶಿಧರ್‍ಬಾಬು, ಜಿ.ಸಿ.ತಿಪ್ಪಣ್ಣ, ಮಹಂತೇಶ್, ಎಸ್.ಪರಮೇಶ್, ಹೆಚ್.ಎಂ.ಮಂಜುನಾಥ್ ದಾಳಿಂಬೆ ಕಾರ್ತಿಕ್, ತಿಪ್ಪೇಸ್ವಾಮಿ, ಜಾಲಿಕಟ್ಟೆ ರುದ್ರಣ್ಣ, ಶಿವಾನಂದ್, ಪ್ರವೀಣ್, ನಿರ್ಮಲ ಬಸವರಾಜ್, ರೀನ ವೀರಭದ್ರಪ್ಪ, ಶಿವಪ್ರಕಾಶ್, ಮನು ತಮಟಕಲ್ಲು, ಶಿವರಾಜ್, ಉಮಾ ರಮೇಶ್, ಶೈಲಾ ಕಲ್ಲೇಶ್, ಶ್ರೀದೇವಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.