
CHITRADURGA NEWS | 14 NOVEMBER 2024
ಚಿತ್ರದುರ್ಗ: ತಾಲೂಕಿನ ಸಿದ್ದಾಪುರದ ಅಡಿಕೆ(adike) ವರ್ತಕ ಶೈಲೇಶ್ ಕುಮಾರ್ ಆತ್ಮಹತ್ಯೆ(Suicide) ವೇಳೆ ಬರೆದಿಟ್ಟಿದ್ದ ಡೆತ್‌ನೋಟ್ ಬಹಿರಂಗವಾಗಿದೆ.
ಕ್ಲಿಕ್ ಮಾಡಿ ಓದಿ: ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ
ಶೈಲೇಶ್ ಅವರಿಂದ ಅಡಿಕೆ ಖರೀದಿ ಮಾಡಿದ್ದ ಮತ್ತೋರ್ವ ವರ್ತಕ ಕೋಟ್ಯಾಂತರ ರೂಪಾಯಿ ವಾಪಾಸು ಮಾಡದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿ ಶೈಲೇಶ್ ಸಾವಿನ ಹಾದಿ ಹಿಡಿದಿದ್ದಾರೆ.

ಶೈಲೇಶ್ ಅವರ ಬಳಿ ದೊಡ್ಡ ಮಟ್ಟದ ಅಡಿಕೆ ವರ್ತಕ ಉದಯ ಶೆಟ್ಟಿ ಬಳಿ ವ್ಯವಹಾರ ಇಟ್ಟುಕೊಂಡಿದ್ದರು.
ಅಡಿಕೆ ವ್ಯಾಪಾರದಲ್ಲಿ ಉತ್ತಮ ಹೆಸರು ಗಳಿಸಿದ್ದ ಶೈಲೇಶ್, ಕುಟುಂಬದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು.
ಸಾಯುವ ಮುನ್ನಾ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಅಪ್ಪ, ಅಮ್ಮ, ಪತ್ನಿ ಹಾಗೂ ಮಕ್ಕಳ ಬಳಿ ಕ್ಷಮೆ ಕೋರಿರುವ ಸಾಲುಗಳು ಕುಟುಂಬದವರ ಕರುಳು ಹಿಂಡುತ್ತಿವೆ.
ಕ್ಲಿಕ್ ಮಾಡಿ ಓದಿ: ಗಿರಿಜನ ಉಪ ಯೋಜನೆಯಡಿ SME ಘಟಕಗಳ ಸ್ಥಾಪನೆ | ಅರ್ಜಿ ಆಹ್ವಾನ
42 ವರ್ಷದ ಶೈಲೇಶ್ ಅವರಿಗೆ ಮುದ್ದಾದ ಸಂಸಾರವಿತ್ತು, ಮಗನಿಗೆ ಭವಿಷ್ಯ ಕಟ್ಟಿಕೊಡಬೇಕಾಗಿತ್ತು. ಆದರೆ, ವ್ಯಾಪಾರದಲ್ಲಿನ ಮೋಸದಿಂದಾಗಿ, ತಮ್ಮನ್ನು ನಂಬಿದ ರೈತರಿಗೆ ಸಕಾಲಕ್ಕೆ ಹಣ ಕೊಡಲಾಗದೆ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.
6.60 ಕೋಟಿ ಅಡಿಕೆ ಹಣಕ್ಕೆ ಪ್ರಾಣ ಹೋಯ್ತು:
ಶೈಲೇಶ್ ಆತ್ಮಹತ್ಯೆಗೆ ಅಡಿಕೆ ವರ್ತಕ ಉದಯ ಶೆಟ್ಟಿ ಕಾರಣ ಎಂದು ಸಂಬಂಧಿಕರು ಹೇಳಿದ್ದಾರೆ. ಶೈಲೇಶ್ ಬಳಿ ಖರೀಧಿಸಿದ್ದ ಅಡಿಕೆಗೆ ಸಂಬಂಧಿಸಿದ 6 ಕೋಟಿ 60 ಲಕ್ಷ ರೂ.ಗಳನ್ನು ಉದಯ ಶೆಟ್ಟಿ ಕೊಟ್ಟಿರಲಿಲ್ಲ. ಹಣ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು ಎನ್ನುವ ಅಂಶವನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
