
CHITRADURGA NEWS | 04 OCTOBER 2024
ಚಿತ್ರದುರ್ಗ: ಜಮೀನಿನ ದಾಖಲೆಗಳನ್ನು (Land Document) ಅಡವಿಟ್ಟು ಬ್ಯಾಂಕಿನಲ್ಲಿ ಸಾಲ ಪಡೆದ ವ್ಯಕ್ತಿಗೆ ಸಾಲ ಮರುಪಾವತಿ ನಂತರ ಜಮೀನಿನ ದಾಖಲೆ ಹಿಂದಿರುಗಿಸದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 2.10 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿರುವ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ.
ಪ್ರಕರಣದ ವಿವರ:

ಪಾರ್ವತಮ್ಮ ಕೋಂ ಕರಿಯಪ್ಪ ಎಂಬುವವರು ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ತಮ್ಮ ಜಮೀನಿನ ಮೂಲ ದಾಖಲೆಗಳನ್ನು ಅಡಮಾನವಿಟ್ಟು 7 ಲಕ್ಷ ಸಾಲ ಪಡೆದಿದ್ದರು.
ಇದನ್ನೂ ಓದಿ: ವಿವಿ ಸಾಗರಕ್ಕೆ ಒಳಹರಿವು ಹೆಚ್ಚಳ | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ ?
ಆದರೆ, ಸಕಾಲಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ತದನಂತರ ಪಾರ್ವತಮ್ಮ ಅವರು ಒಟಿಎಸ್ ಮೂಲಕ 10,50,000 ರೂ.ಗಳನ್ನು ಪಾವತಿ ಮಾಡಿದ್ದಾರೆ.

ಪ್ರಕರಣ ಇತ್ಯರ್ಥವಾದ ನಂತರ ತಮ್ಮ ಜಮೀನಿನ ಮೂಲ ದಾಖಲೆಗಳನ್ನು ಪಡೆಯಲು ಮನವಿ ಸಲ್ಲಿಸಿದ್ದಾರೆ. ಈ ವೇಳೆ ಬ್ಯಾಂಕಿನವರು ದಾಖಲೆಗಳು ನ್ಯಾಯಾಲಯದ ದಾಖಲೆ ಕೊಠಡಿಯಲ್ಲಿವೆ. ತರಿಸಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ನಿಗಧಿತ ಅವಧಿ ಮೀರಿದ ನಂತರ ದಾಖಲೆ ನಾಶಪಡಿಸುವುದರಿಂದ ದಾಖಲೆ ಸಿಕ್ಕಿಲ್ಲ. ಮೂಲ ದಾಖಲೆಗಳನ್ನು ಹಿಂದಿರುಗಿಸುವ ಪ್ರಶ್ನೆಯೇ ಇಲ್ಲ ಎಂದು ಪಾರ್ವತಮ್ಮ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಕಾರು ಅಪಘಾತ | ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೃತ
ಇದರಿಂದ ನೊಂದ ಗ್ರಾಹಕರು, ಜಿಲ್ಲಾ ಗ್ರಾಹಕರ ಆಯೋಗಕ್ಕೆ ಸೇವಾ ನ್ಯೂನ್ಯತೆ ಹಾಗೂ ಸೇವೆಯಲ್ಲಿನ ನ್ಯೂನ್ಯತೆ ಆಧರಿಸಿ ದೂರು ದಾಖಲಿಸಿದ್ದಾರೆ.
ದೂರು ಪರಿಶೀಲಿಸಿದ ನಂತರ, ಆಯೋಗ ಸಾಲ ತೀರುವಳಿ ಮಾಡಿದ ಗ್ರಾಹಕರಿಗೆ ಎನ್‍ಓಸಿ ಮತ್ತು ಕ್ಲಿಯರೆನ್ಸ್ ಪ್ರಮಾಣಪತ್ರ ನೀಡಲಾಗಿದೆ. ಆದರೆ, ಜಮೀನಿನ ಮೂಲ ದಾಖಲೆ ಹಿಂತಿರುಗಿಸದೇ ಸೇವಾ ನ್ಯೂನ್ಯತೆ ಮಾಡಲಾಗಿದೆ.
ಆಸ್ತಿಯ ಮೂಲ ದಾಖಲೆಗಳು ಬಹಳ ಅಮೂಲ್ಯ. ಮೌಲ್ಯಯುತವಾದುದು. ಇದರಿಂದ ಅನೇಕ ಪ್ರತಿಕೂಲಗಳನ್ನು ಎದುರಿಸಬೇಕಾಗುತ್ತದೆ.
ಬ್ಯಾಂಕ್ ನ್ಯಾಯಾಲಯದಿಂದ ತಕ್ಷಣ ದಾಖಲೆಗಳನ್ನು ಪಡೆಯದೇ ನಿರ್ಲಕ್ಷ್ಯ ವಹಿಸಿದೆ.
ಇದನ್ನೂ ಓದಿ: ಬೆಸ್ಕಾಂ ಮಹತ್ವದ ಸೂಚನೆ | ಅಕ್ಟೋಬರ್ 4 ರಿಂದ 6 ರವರೆಗೆ ಬಿಲ್ ಪಾವತಿಸುವ ಮುನ್ನಾ ಈ ಸುದ್ದಿ ಓದಿ
ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿರ್ಲಕ್ಷ್ಯ ಸ್ಪಷ್ಟವಾಗಿದೆ ಎಂದು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಕು.ಎಚ್.ಎನ್.ಮೀನಾ ಅವರು, ನಿರ್ಲಕ್ಷತೆಗೆ ಪರಿಹಾರವಾಗಿ 2 ಲಕ್ಷ ರೂ. ದಂಡ ಹಾಗೂ ವಾರ್ಷಿಕ ಶೇ.8ರ ಬಡ್ಡಿಯೊಂದಿಗೆ ದೂರು ಖರ್ಚು, ಮಾನಸಿಕ ಯಾತನೆಗೆ 10 ಸಾವಿರ ರೂ.ಗಳನ್ನು 30 ದಿನಗಳಲ್ಲಿ ಪಾವತಿಸಲು ಆದೇಶಿಸಿದ್ದಾರೆ.
ಆಯೋಗದ ಅಧ್ಯಕ್ಷರಾದ ಎಚ್.ಎನ್.ಮೀನಾ ಹಾಗೂ ಮಹಿಳಾ ಸದಸ್ಯರಾದ ಬಿ.ಎಚ್.ಯಶೋಧಾ ಈ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: 2027ಕ್ಕೆ ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಪೂರ್ಣ | ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
