CHITRADURGA NEWS | 21 MAY 2024
ಚಿತ್ರದುರ್ಗ: ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಜಲಾಶಯ ವಾಣಿವಿಲಾಸ ಸಾಗರಕ್ಕೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಸುರಿದಿದ್ದು, ಪೂರ್ವ ಮುಂಗಾರಿನಲ್ಲೇ ವಿವಿ ಸಾಗರಕ್ಕೆ ನೀರು ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ವಿವಿಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ
ವಿವಿ ಸಾಗರಕ್ಕೆ ನೀರು ಮೇ.20 ರಿಂದ ಹರಿಯಲು ಆರಂಭಿಸಿದೆ. ಮೇ.20 ರಂದು 3800 ಕ್ಯೂಸೆಕ್ ನೀರು ಹರಿದಿತ್ತು. ಇಂದು ಎರಡನೇ ದಿನದ ಮಾಪನ ಚಿತ್ರದುರ್ಗ ನ್ಯೂಸ್‍ಗೆ ಲಭ್ಯವಾಗಿದ್ದು, ಮೇ.21 ರಂದು ಬೆಳಗ್ಗೆ 8 ಗಂಟೆಗೆ ವಿವಿ ಸಾಗರಕ್ಕೆ ಒಳಹರಿವಿನ ಪ್ರಮಾಣ 5100 ಕ್ಯೂಸೆಕ್ ಆಗಿದೆ.
ಹೊರ ಹರಿವು ನಿಂತಿದ್ದು, ಜಲಾಶಯಕ್ಕೆ ಹೊಸದುರ್ಗ, ಚಿಕ್ಕಮಗಳೂರು ಭಾಗದಿಂದ ವೇದಾವತಿ ಮೂಲಕ ನೀರು ಹರಿದು ಬರುತ್ತಿದೆ.
ಇದನ್ನೂ ಓದಿ: ಜಿಲ್ಲೆಯಾದ್ಯಂತ ಉತ್ತಮ ಮಳೆ | ಮನೆಗಳಿಗೆ ಹಾನಿ
30 ಟಿಎಂಸಿ ಸಾಮಥ್ರ್ಯದ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸದ್ಯ 17.44 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸದ್ಯ 112.70 ಅಡಿ ನೀರು ಸಂಗ್ರಹವಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
