
ಚಿತ್ರದುರ್ಗನ್ಯೂಸ್.ಕಾಂ
ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ‘ನಶೆ ಮುಕ್ತ ಚಿತ್ರದುರ್ಗ’ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದೆ.
ವ್ಯಸನ ಮುಕ್ತ -ಸ್ವಚ್ಛ ಪರಿಸರ ಯುಕ್ತ ಸಮಾಜ ನಿರ್ಮಾಣಕ್ಕಾಗಿ ಕಾರ್ಯಾಚರಣೆ ಪ್ರಾರಂಭಿಸಿದೆ. ಡ್ರಗ್ಸ್, ಮದ್ಯಪಾನ, ಧೂಮಪಾನ ಮತ್ತು ಪರಿಸರ ಮಾಲಿನ್ಯಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಪರಿಸರದ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅರೆ ಮಲೆನಾಡಿನಲ್ಲಿ ‘ಕಂಬಳಿ ಆನೆ’; ಚೀರನಹಳ್ಳಿಯಲ್ಲಿ ನಮಿಸಿದ ಗ್ರಾಮಸ್ಥರು
ಜಗತ್ತಿನಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಣೆ, ಧೂಮ ಪಾನ, ಮದ್ಯಪಾನದ ವಹಿವಾಟು ದೊಡ್ಡ ವ್ಯಾಪಾರವಾಗಿದೆ. ತಂಬಾಕು ಉತ್ಪನ್ನಗಳಿಂದ ಮೃತಪಟ್ಟವರ ಐವರಲ್ಲಿ ಭಾರತದವರೊಬ್ಬರಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ ತಂಬಾಕು ಉತ್ಪನ್ನಗಳಿಂದ ಸರಿಸುಮಾರು 6 ಸಾವಿರ ಜನರು ರೋಗಗಳಿಂದ ಉಸಿರು ನಿಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಜತೆಗೆ ಕ್ಯಾನ್ಸರ್, ಹದಯಾಘಾತ, ಅಲ್ಸರ್ ಸೇರಿದಂತೆ ಇತರೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಬಳಲಿ ನಿತ್ಯ ಸಾಯುತ್ತಿರುವುದು ಸಾಮಾನ್ಯವಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ‘ನಶೆ ಮುಕ್ತ ಚಿತ್ರದುರ್ಗ’ ಸ್ವಚ್ಛ ಪರಿಸರಯುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ.
ಇದನ್ನೂ ಓದಿ: ಚಿತ್ರದುರ್ಗ– ತುಮಕೂರು ನಡುವೆ ಏರ್‌ಪೋರ್ಟ್; ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣಕ್ಕೆ ಸರ್ಕಾರದ ಚಿಂತನೆ
ವಿಶೇಷ ಕಾರ್ಯಾಚರಣೆ ಹಿನ್ನೆಲಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ arco Coordination Center(NCORD) ಸಭೆ ನಡೆಯಿತು.
ಮಾದಕ ವಸ್ತುಗಳ ಕಳ್ಳಸಾಗಣಿಕೆ, ಬೆಳೆಯುವುದು, ಮಾರಾಟ ಮಾಡುವುದು, ಬಳಕೆ ಮಾಡುವುದನ್ನು ತಡೆಗಟ್ಟುವ ಬಗ್ಗೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಗಳ ಕುರಿತು ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಮತ್ತು ಮಾದಕ ವಸ್ತು ವಿಮುಕ್ತಿ ಕೇಂದ್ರಗಳು ಹಾಗೂ ಪುನರ್ ವಸತಿ ಕುರಿತ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಜಿಲ್ಲೆಯ ಯಾವುದೇ ಭಾಗದಲ್ಲಿ ಮಾದಕ ವಸ್ತುಗಳ ಸೇವನೆ, ಉತ್ಪಾದನೆ, ಮಾರಾಟ, ಸಂಗ್ರಹಣೆ, ಸಾಗಾಣಿಕೆ ಇತ್ಯಾದಿ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಸಹಕರಿಸಬೇಕಿದೆ. ಈ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ.
ಇದನ್ನೂ ಓದಿ: ಈ ಸುದ್ದಿ ಓದಿ ನೀವೇಬೆಚ್ಚಿ ಬೀಳ್ತಿರಿ.. ಕೋಟೆನಾಡಲ್ಲಿ ಏರುತ್ತಿದೆ ನಾಯಿ ಕಡಿತದ ಗ್ರಾಫ್
ಪೊಲೀಸ್ ನಿರೀಕ್ಷಕರು, ದೂರವಾಣಿ ಸಂಖ್ಯೆ 9480803173, ಸಿಇಎನ್ ಅಪರಾಧ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ. 9480803100 ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ಈ ಮೂಲಕ ಜಿಲ್ಲೆಯ ಯುವಕರ ಆರೋಗ್ಯ, ಭವಿಷ್ಯ ಹಾಗೂ ಸಾಮಾಜಿಕ ಸ್ವಾಸ್ತ್ಯ ಹಾಳಾಗುವುದನ್ನು ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
