ಚಿತ್ರದುರ್ಗ ನ್ಯೂಸ್.ಕಾಂ:

ವಿಶ್ವಕಪ್ಗೆ ಮುತ್ತಿಕ್ಕತ್ತಲಿದೆ ಭಾರತ
ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗುಳಿದಿರುವ ಭಾರತ ಇಂದು ಆಸ್ಟ್ರೇಲಿಯಾ ವಿರುದ್ಧ ವಿಜೇಯ ಸಾಧಿಸಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಲಿದೆ. ಈ ಮೂಲಕ ಭಾರತದ ಕೀರ್ತಿ ವಿಶ್ವಕ್ಕೆ ಪಸರಿಸಲಿದೆ.
| ಭವಿಶ್ ಎಂ.ಬಿ. ಬಚ್ಚಬೋರನಹಟ್ಟಿ
****

ಗೆಲುವಿನ ಭವ್ಯ ಭರವಸೆ
ಭಾರತ ಈ ಸಲದ ವಿಶ್ವಕಪ್ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕೊನೆಯ ಪಂದ್ಯದಲ್ಲಿಯೂ ಗೆದ್ದು ಮತ್ತೊಂದು ಟ್ರೋಫಿ ತಂದುಕೊಡುತ್ತದೆ ಎನ್ನುವ ಭವ್ಯ ಭರವಸೆಯಿದೆ.
| ಬಸವರಾಜ ಸಜ್ಜನಕೆರೆ
****

ಟೀಂ ಇಂಡಿಯಾಗೆ ಶುಭಾಶಯ
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ದಾಖಲೆ ಸೃಷ್ಟಿಸುತ್ತದೆ. ಇದು ಒಗ್ಗಟ್ಟಿನ ಸಂಕೇತವಾಗಿದೆ. ಟೀಂ ಇಂಡಿಯಾಗೆ ಶುಭಾಶಯ.
| ಎಸ್.ನಾಗರಾಜ್ ಜಾಲಿಕಟ್ಟೆ
****

ಅದ್ಭುತ ಪ್ರದರ್ಶನ
2023ರ ವಿಶ್ವಕಪ್ ಪ್ರಾರಂಭದಿಂದ ಈವರೆಗೂ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಶುಭವಾಗಲಿ. ಪ್ರತಿಯೊಬ್ಬ ಆಟಗಾರರು ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ವಿಶ್ವಕಪ್ ತಂದುಕೊಡಲಿ.
| ಮದುಸೂಧನ್ ಜೀವ ಚಿತ್ರದುರ್ಗ
****

ಕನ್ನಡದ ಕಂದ ರಾಹುಲ್
ಈ ಬಾರಿಯ ವಿಶ್ವಕಪ್ ಅನ್ನು ನಮ್ಮ ಕನ್ನಡದ ಕಂದ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಲಿ.
| ಕೀರ್ತಿ ಪ್ರಸಾದ್ ಚಳ್ಳಕೆರೆ
****

ವಿಶ್ವಕಪ್ ಎತ್ತಿ ಹಿಡಿಯಲಿ
ಸತತ 10 ಪಂದ್ಯಗಳಲ್ಲಿ ಗೆದ್ದಿರುವ ನಮ್ಮ ಭಾರತ ಕೊನೆಯ ಪಂದ್ಯ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಲಿ ಎಂಬುದು ಎಲ್ಲ ಭಾರತೀಯರ ಆಸೆ. ಗೆದ್ದು ಬಾ ಭಾರತ ಗೆದ್ದು ಬಾ..ನಿಮ್ಮ ಜತೆ ನಾವಿದ್ದೇವೆ.
| ಹರೀಶ್ ಚಿತ್ರದುರ್ಗ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
