By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಕೃಷಿ ಹೊಂಡ
    ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
    8 hours ago
    ಮುರುಘಾ ಮಠ
    ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
    9 hours ago
    ನಗರದ ಕೆಳಕೋಟೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
    ಚಿತ್ರದುರ್ಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಯೋಜನೆ | ಶಾಸಕ‌ ಕೆ.ಸಿ.ವೀರೇಂದ್ರ (ಪಪ್ಪಿ)
    9 hours ago
    ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
    11 hours ago
    ಕೃಷಿ
    ಎರಡು ದಿನ ಕೃಷಿ ಪ್ರಾಯೋಗಿಕ ತರಬೇತಿ
    19 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    2 days ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    6 days ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 weeks ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    2 weeks ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    2 weeks ago
  • ತಾಲೂಕು
    ತಾಲೂಕುShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    4 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    1 week ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ |17 ಏಪ್ರಿಲ್‌ |ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌
    2 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ
    3 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
    6 days ago
    arecanut price list
    ಅಡಿಕೆ ಧಾರಣೆ | 10 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    1 week ago
    arecanut price list
    ಅಡಿಕೆ ಧಾರಣೆ | 9 ಏಪ್ರಿಲ್‌ | ಸಾಗರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಏರಿಕೆ
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 19 | ಆಕಸ್ಮಿಕ ಧನಲಾಭ, ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣ
    22 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 18 | ಆಸ್ತಿ ವಿಚಾರಗಳಲ್ಲಿ ಸಹೋದರರೊಂದಿಗೆ ವಿವಾದಗಳು, ಆರ್ಥಿಕ ಅನುಕೂಲತೆ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 17 | ಕೈಗೊಂಡ ಕೆಲಸಗಳಲ್ಲಿ ವಿಳಂಬ, ದೂರದ ಪ್ರಯಾಣದಲ್ಲಿ ಎಚ್ಚರ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 16 | ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು, ಹಠಾತ್ ಪ್ರಯಾಣದ ಸೂಚನೆ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 15 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಆದಾಯಕ್ಕಿಂತ ಖರ್ಚು ಹೆಚ್ಚು
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 18 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 17 | ಮೆಕ್ಕೆಜೋಳ, ರಾಗಿ ರೇಟ್…
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 16 | ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 15 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 13 | ಮೆಕ್ಕೆಜೋಳ ರೇಟ್…
    7 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    1 week ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 weeks ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    4 weeks ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    4 weeks ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    1 month ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    6 days ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    2 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    2 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    3 months ago
  • ಹೊಸದುರ್ಗ
    ಹೊಸದುರ್ಗShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    4 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    1 week ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • Life Style
    Life StyleShow More
    Metabolism
    ಚಯಾಪಚಯ ಕ್ರಿಯೆ ನಿಧಾನವಾಗುತ್ತಿದ್ದರೆ ನಿಮ್ಮ ಚರ್ಮದ ಮೇಲೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ
    21 hours ago
    eat fruits to stay healthy
    ಆರೋಗ್ಯವಾಗಿರಲು ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿದುಕೊಳ್ಳಿ
    21 hours ago
    sweets
    ನಿಮ್ಮಲ್ಲಿ ಸಿಹಿ ತಿಂಡಿಗಳ ಹಂಬಲ ಹೆಚ್ಚಾಗಲು ಕಾರಣವೇನು ಗೊತ್ತಾ?
    2 days ago
    open pores on your face
    ಮುಖದ ಚರ್ಮದ ತೆರೆದ ರಂಧ್ರಗಳನ್ನು ಮುಚ್ಚಲು ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ
    2 days ago
    Lip mask and lip balm
    ಲಿಪ್ ಮಾಸ್ಕ್ ಮತ್ತು ಲಿಪ್ ಬಾಮ್‍ಗಳಲ್ಲಿ ತುಟಿಗಳಿಗೆ ಯಾವುದು ಉತ್ತಮ?
    3 days ago
Reading: ದೇವಸ್ಥಾನದ ಹುಂಡಿ ಹಣ ಸರ್ಕಾರದ ಬೊಕ್ಕಸ ಸೇರುತ್ತೆ; ಚರ್ಚ್, ಮಸೀದಿಗಳಿಗೆ ಬರುವ ಹಣ ಎಲ್ಲಿಗೆ ಹೋಗುತ್ತೆ – ವಿಎಚ್‍ಪಿ ನಾಯಕ ಸ್ಥಾಣುಮಾಲಾಯನ್
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ದೇವಸ್ಥಾನದ ಹುಂಡಿ ಹಣ ಸರ್ಕಾರದ ಬೊಕ್ಕಸ ಸೇರುತ್ತೆ; ಚರ್ಚ್, ಮಸೀದಿಗಳಿಗೆ ಬರುವ ಹಣ ಎಲ್ಲಿಗೆ ಹೋಗುತ್ತೆ – ವಿಎಚ್‍ಪಿ ನಾಯಕ ಸ್ಥಾಣುಮಾಲಾಯನ್

chitradurganews.com
Last updated: 26 September 2023 09:25
chitradurganews.com
3 years ago
Share
ಶೌರ್ಯ ಜಾಗರಣಾ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು
ಚಿತ್ರದುರ್ಗದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ
SHARE

ಚಿತ್ರದುರ್ಗ ನ್ಯೂಸ್.ಕಾಂ: ದೇವಸ್ಥಾನಗಳ ಹುಂಡಿಗೆ ಬೀಳುವ ಹಣ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ. ಆದರೆ, ಮಸೀದಿ, ಚರ್ಚ್‍ಗಳಲ್ಲಿ ಬರುವ ಹಣ ಎಲ್ಲಿ ಹೋಗುತ್ತದೆ ಎಂದು ವಿಎಚ್‍ಪಿ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣುಮಾಲಾಯನ್ ಪ್ರಶ್ನಿಸಿದರು.

ನಗರದ ಬಿ.ಡಿ.ರಸ್ತೆಯಲ್ಲಿರುವ ಜೈನಧಾಮದಲ್ಲಿ ಸೋಮವಾರ ವಿಶ್ವಹಿಂದೂ ಪರಿಷತ್ತಿಗೆ ಷಷ್ಠಿಪೂರ್ತಿ ಅಂಗವಾಗಿ ಬಜರಂಗದಳದಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗರಣಾ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ | ಬಜರಂಗದಳ ಶೌರ್ಯ ಜಾಗರಣಾ ರಥಯಾತ್ರೆಗೆ ದುರ್ಗದಲ್ಲಿ ಚಾಲನೆ

ಚರ್ಚ್-ಮಸೀದಿಗಳಲ್ಲಿ ಬರುವ ಹಣವನ್ನು ನಮ್ಮ ಸರ್ಕಾರಗಳು ಪ್ರಶ್ನೆ ಮಾಡುವುದಿಲ್ಲ. ರೈಲ್ವೇಗೆ ಇರುವಷ್ಟು ಆಸ್ತಿ ವಕ್ಫ್ ಬೋರ್ಡ್ ಹೊಂದಿದೆ. ದೇಶದಲ್ಲಿ ದಿನೇ ದಿನೇ ಚರ್ಚ್, ಮಸೀದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸುಮಾರು ಹತ್ತು ಸಾವಿರ ದೇವಸ್ಥಾನಗಳನ್ನು ಕೆಡವಲಾಗಿದೆ. ಪ್ರಶ್ನೆ ಮಾಡಿದರೆ ಇದು ಜಾತ್ಯಾತೀತ ದೇಶ ಎನ್ನಲಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲೂ ಅಲ್ಲಿ ದೇವಸ್ಥಾನವಿತ್ತು. ಆದರೆ, 1947ರ ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರಗಳು ಆ ಜಾಗವನ್ನು ಸರ್ಕಾರಿ ಜಾಗ ಎಂದು ಭಾವಿಸುವುದು ಯಾವ ನ್ಯಾಯ ಎಂದರು.

ದೇಶದಲ್ಲಿ ಇಂತಹ ಅನೇಕ ಅನಾಹುತಕಾರಿ ಘಟನೆಗಳು ನಡೆಯುತ್ತಿವೆ. ಇವುಗಳನ್ನು ಪ್ರಶ್ನೆ ಮಾಡುತ್ತಾ, ಹಿಂದುಗಳನ್ನು ಜಾಗೃತಿ ಮಾಡುವ ಕೆಲಸವನ್ನು ಕಳೆದ 60 ವರ್ಷಗಳಿಂದ ವಿಶ್ವಹಿಂದೂ ಪರಿಷತ್ ಮಾಡುತ್ತಾ ಬಂದಿದೆ. ಆದರೂ, ನಮ್ಮ ಸಮಾಜ ಮಲಗಿದೆ. ಅದನ್ನು ಎಚ್ಚರಿಸುವ ಕೆಲಸವನ್ನು ಬಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ
ಚಿತ್ರದುರ್ಗದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ

ಶ್ರೀಕೃಷ್ಣನ ನೀತಿಗಳು ಜಗತ್ತಿನ ಎಲ್ಲ ಧರ್ಮಗಳನ್ನು ಉಳಿಸಬಲ್ಲವು. ಇಲ್ಲದಿದ್ದರೆ ಮುಂದೊಂದು ದಿನ ಎಲ್ಲರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇಂದು ವಿಶ್ವಹಿಂದೂ ಪರಿಷತ್ ಜಗತ್ತಿನ ಅತೀ ದೊಡ್ಡ ಹಿಂದೂ ಸಂಘಟನೆಯಾಗಿ ಬೆಳೆದು ನಿಂತಿದೆ. ಜಗತ್ತಿನ ಎಲ್ಲ ದೇಶಗಳಲ್ಲಿ ವಿಎಚ್‍ಪಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಹಿಂದೂ ಎದ್ದರೆ ವಿಶ್ವವೇ ಎದ್ದಂತೆ ಎನ್ನುವ ಮಾತಿದೆ. ಲೋಕೋ ಸಮಸ್ತಾ ಸುಖಿನೋ ಭವಂತು, ವಸುದೈವ ಕುಟುಂಬಕಂ ಎಂದು ಹಿಂದುಗಳು ಮಾತ್ರ ಹೇಳುತ್ತೇವೆ. ಭಾರತ ಅಮೃತ ಕಾಲದಲ್ಲಿದೆ. ಭಾರತ ಬೆಳೆದರೆ ಇಡೀ ಜಗತ್ತು ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾರತ, ಹಿಂದೂ ಸಮಾಜ ಋಷಿ ಪರಂಪರೆ ಹೊಂದಿದೆ. ಆದರೆ, ಹಿಂದೂಗಳು ಮಲಗಿದ್ದಾರೆ. ಅವರ ಜಾಗೃತಿಗಾಗಿ ಈ ಜಾಗರಣಾ ಯಾತ್ರೆ. ರಾಮಾಯಣದಲ್ಲಿ ಹನುಮಂತನಿಗೆ ಜಾಂಬವಂತ ಜಾಗೃತಿ ಮೂಡಿಸಿದಂತೆ, ಇಂದು ವಿಶ್ವಹಿಂದೂ ಪರಿಷತ್, ಬಜರಂಗದಳ ಜಾಗರಣ ಮಾಡುತ್ತಿದೆ ಎಂದರು.

ಆರೆಸ್ಸೆಸ್ಸ್ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಶೌರ್ಯಕ್ಕೆ ಹೆಸರಾದ ಚಿತ್ರದುರ್ಗದಲ್ಲಿ ಆರಂಭವಾಗುತ್ತಿರುವ ರಥಯಾತ್ರೆ ಧರ್ಮಕ್ಕೆ ಹೆಸರಾದ ಉಡುಪಿಯಲ್ಲಿ ಸಮಾರೋಪಗೊಳ್ಳುತ್ತಿದೆ. ಇದು ಉದ್ದೇಶಪೂರ್ವಕವಾಗಿ ಆಗುತ್ತಿರುವ ವಿಷವಲ್ಲ. ಧರ್ಮ-ಕರ್ಮ ಸಂಯೋಗ ಎಂದು ಬಣ್ಣಿಸಿದರು.

ಶಾಂತಿಯ ಅಡಿಪಾಯ ಶೌರ್ಯ. ಶಾಂತಿ ಮತ್ತು ಶೌರ್ಯ ಪರಸ್ಪರ ಅವಲಂಬಿತ. ಒಂದನ್ನು ಬಿಟ್ಟು ಒಂದಿಲ್ಲ. ಶೌರ್ಯ ಇದ್ದರೆ ಶಾಂತಿಯೂ ಇರುತ್ತದೆ. ಶಾಂತಿ ಇದ್ದರೆ ಶೌರ್ಯವೂ ಇರುತ್ತದೆ. ನಮ್ಮ ಸಮಾಜ ಮೊದಲಿನಿಂದಲೂ ಶೌರ್ಯದ ಆರಾಧನೆ ಮಾಡಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಶೌರ್ಯ ಜಾಗೃತಿ ಮಾಡುವ ಕೆಲಸಕ್ಕೆ ಬಜರಂಗದಳ ಕೈ ಹಾಕಿದೆ ಎಂದರು.

ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಮಾತನಾಡಿ, ರಾಷ್ಟ್ರ ವಿರೋಧಿಗಳು ಡ್ರಗ್ಸ್ ಜಿಹಾದ್ ಮಾಡುತ್ತಿದ್ದಾರೆ. ಪಾಕಿಸ್ಥಾನ, ಬಾಂಗ್ಲಾ ದೇಶಗಳಿಂದ ಡ್ರಗ್ಸ್ ಸರಬರಾಜಾಗುತ್ತಿದೆ. ದೇಶದ ಯುವ ಪೀಳಿಗೆಯನ್ನು ಹಾಳು ಮಾಡಲು ಈ ಜಾಲ ವಿಸ್ತರಿಸಿದೆ. ಯುವಕರು ದಿಕ್ಕು ತಪ್ಪಿದರೆ ದೇಶ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶೌರ್ಯ ಜಾಗರಣಾ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು
ಶೌರ್ಯ ಜಾಗರಣಾ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

ಅಯೋಗ್ಯರು, ಅವಿವೇಕಿಗಳು ಹಿಂದೂ ಧರ್ಮದ ಬಗ್ಗೆ ಅಧ್ಯಯನ ಇಲ್ಲದೆ ಹಿಂದು ಧರ್ಮ ನಾಶ ಮಾಡುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಕೆಲ ವಿಶ್ವವಿದ್ಯಾಲಯಗಳು ನಮ್ಮದೇ ಯುವಕರನ್ನು ರಾಷ್ಟ್ರದ್ರೋಹಿಗಳನ್ನಾಗಿ ಮಾಡುತ್ತಿವೆ. ಕನ್ನಯ್ಯ ಕುಮಾರ್ ಅವರಂತಹ ಯುವಕರನ್ನು ರಾಷ್ಟ್ರದ್ರೋಹಿಗಳನ್ನಾಗಿ ಮಾಡುವ ಕೆಲಸವನ್ನು ಕೆಲ ಪ್ರೊಫೆಸರ್‍ಗಳು ಮಾಡುತ್ತಿದ್ದಾರೆ ಎಂದರು.

ಪಕ್ಷದ ವಿಚಾರ ಬಂದಾಗ ಅದು ನಿಮ್ಮ ವೈಯಕ್ತಿಕ. ಸೂಕ್ತ ವ್ಯಕ್ತಿಗೆ ಮತ ಹಾಕಿ. ಆದರೆ, ಹಿಂದೂ ಎಂದು ಬಂದಾಗ ದೇಶದ ಹಿತ, ಹಿಂದುಗಳ ಹಿತವನ್ನು ಕಾಯುವ ಕೆಲಸ ಮಾಡಿ ಎಂದು ಸೂರ್ಯನಾರಾಯಣ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸೇವಾಲಾಲ್ ಸ್ವಾಮೀಜಿ, ವಿಎಚ್‍ಪಿ ರಾಜ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್, ಸಹ ಸಂಯೋಜಕ ಪ್ರಭಂಜನ್, ಶೌರ್ಯ ಜಾಗರಣಾ ಯಾತ್ರೆ ರಾಜ್ಯ ಸಮಿತಿ ಸದಸ್ಯ ಟಿ.ಬದರೀನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಇತರರಿದ್ದರು.

ಮತಾಂತರ ಇಂದು ದಲಿತ ಅಥವಾ ಹಿಂದುಳಿದವರಿಗೆ ಸೀಮಿತವಾಗಿಲ್ಲ. ಲಿಂಗಾಯತರು ಸೇರಿದಂತೆ ಎಲ್ಲ ವರ್ಗದವರು ಮತಾಂತರ ಆಗುತಿರುವುದು ಆತಂಕದ ಸಂಗತಿ. ಮತಾಂತರಕ್ಕೆ ಕಾರಣ ಅಸಮಾನತೆ, ಜಾತಿಯತೆ, ದೇವಸ್ಥಾನಗಳ ಪ್ರವೇಶ ನಿರಾಕರಣೆಯಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬದಲಾಗಬೇಕು. ಸದ್ಯದ ಬೆಳವಣಿಗೆ ಉತ್ತಮವಾಗಿದೆ. ಸಾಕಷ್ಟು ಬದಲಾಗುತ್ತಿದೆ. ಆದರೆ, ಬಜರಂಗದಳ ನಡೆಸುತ್ತಿರುವ ಶೌರ್ಯ ಜಾಗರಣಾ ರಥಯಾತ್ರೆ ಸಂದರ್ಭದಲ್ಲಿ ಇದು ಮತ್ತಷ್ಟು ವ್ಯಾಪಕವಾಗಿ ಆಗಬೇಕು. ಸಮಾಜದಲ್ಲಿ ಸಾಮರಸ್ಯದ ಸಂದೇಶವನ್ನು ಈ ಯಾತ್ರೆ ಬಿತ್ತಬೇಕು.
| ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ,

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Bajrang DalBJPChitradurgaDavangereHinduKannada Lates NewsRSSShaurya Jagarana Rath YatraUdupiVishwa Hindu Parishadಆರೆಸ್ಸೆಸ್ಸ್ಉಡುಪಿಕನ್ನಡ ಲೇಟೆಸ್ಸ್ ನ್ಯೂಸ್ಚಿತ್ರದುರ್ಗದಾವಣಗೆರೆಬಜರಂಗದಳಬಿಜೆಪಿವಿಶ್ವಹಿಂದೂ ಪರಿಷತ್ಶೌರ್ಯ ಜಾಗರಣಾ ರಥಯಾತ್ರೆಹಿಂದೂ
Share This Article
Facebook Email Print
Previous Article ಚಿತ್ರದುರ್ಗದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ | ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಗೆ ದುರ್ಗದಲ್ಲಿ ಚಾಲನೆ
Next Article ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗ ಜಿಲ್ಲೆ ಭೇಟಿಗೆ ದಿನಗಣನೆ
Leave a Comment

Leave a Reply Cancel reply

Your email address will not be published. Required fields are marked *

ಕೃಷಿ ಹೊಂಡ
ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
ಮುಖ್ಯ ಸುದ್ದಿ
ಮುರುಘಾ ಮಠ
ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
ಮುಖ್ಯ ಸುದ್ದಿ
ನಗರದ ಕೆಳಕೋಟೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
ಚಿತ್ರದುರ್ಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಯೋಜನೆ | ಶಾಸಕ‌ ಕೆ.ಸಿ.ವೀರೇಂದ್ರ (ಪಪ್ಪಿ)
ಮುಖ್ಯ ಸುದ್ದಿ
ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
 

Loading Comments...
 

    Welcome Back!

    Sign in to your account

    Username or Email Address
    Password

    Lost your password?

    Not a member? Sign Up