CHITRADURGA NEWS | 26 JANUARY 2026
ಚಿತ್ರದುರ್ಗ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಧ್ವಜಾರೋಹಣ ನೇರವೇರಿಸಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ | ಮಾರ್ಚ್ ಅಂತ್ಯದೊಳಗೆ ಗೋನೂರು ವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ | ಡಿ.ಸುಧಾಕರ್
ನಂತರ ಮಾತನಾಡಿದ ಅವರು, ನಮ್ಮ ದೇಶದ ಜನತೆಗೆ ಜನವರಿ 26 ಹಾಗೂ ಆಗಸ್ಟ್ 15 ಎರಡು ರಾಷ್ಟ್ರೀಯ ಹಬ್ಬಗಳು, ಇದನ್ನು ನಾವುಗಳು ಅರ್ಥ ಪೂರ್ಣವಾಗಿ ಆಚರಣೆಯನ್ನು ಮಾಡುವುದರ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ನಾಯಕರುಗಳಿಗೆ ಗೌರವವನ್ನು ಸಲ್ಲಿಸಬೇಕು ಎಂದರು.
ಹಲವಾರು ಜನತೆಯ ತ್ಯಾಗ ಬಲಿದಾನದಿಂದ ನಮಗೆ ಬ್ರಿಟಿಷರ ದಾಸ್ಯದಿಂದ ಮುಕ್ತರನ್ನಾಗಿ ಮಾಡಿದರು. ಸಂವಿಧಾನ ಎಲ್ಲರಿಗೂ ಸಹಾ ಅನ್ವಯವಾಗುತ್ತದೆ. ಇದಕ್ಕೆ ಯಾವುದೇ ಜಾತಿ, ಧರ್ಮ, ಲಿಂಗ, ಸಮುದಾಯ ಎಂಬ ಬೇದವಿಲ್ಲ. ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ, ಎಲ್ಲರು ಸಂವಿಧಾನ ಮುಂದೆ ಸಮಾನರು, ಎಲ್ಲಾ ಧರ್ಮದವರು ಸಂವಿದಾನವನ್ನು ಬಳಸುವ ಹಕ್ಕು ಇದೆ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಭಾರತೀಯರಾಗಿ ಹುಟ್ಟಿದ್ದು ನಮ್ಮ ಪುಣ್ಯವಾಗಿದೆ, ಗುಲಾಮಗಿರಿಯಲ್ಲಿದ್ದ ನಮ್ಮ ದೇಶವನ್ನು ಮಹಾತ್ಮ ಗಾಂಧಿಯವರು ಅಹಿಂಸೆಯ ಮೂಲಕ ಬ್ರಿಟಿಷರನ್ನು ದೇಶದಿಂದ ಹೊಡೆದೊಡಿಸಿ ನಮಗೆ ಸ್ವಾತಂತ್ರ್ಯವನ್ನು ಕೊಡಿಸಿದರು. ದೇಶವನ್ನು ಬ್ರಿಟಿಷರಿಂದ ಬಿಡಿಸಲು ಆಗ ದೇಶದಲ್ಲಿ ಯಾವ ಜಾತಿ, ಧರ್ಮ, ಜನಾಂಗವನ್ನು ನೋಡದೇ ಎಲ್ಲರು ಸಹಾ ಕೈಜೋಡಿಸುವುದರ ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದರು ಎಂದರು.
ಇದನ್ನೂ ಓದಿ: ಎಸ್.ಜೆ.ಎಂ. ವಿದ್ಯಾಪೀಠದಲ್ಲಿ 77ನೇ ಗಣರಾಜ್ಯೋತ್ಸವ | ಆಕರ್ಷಕ ಪಥಸಂಚಲನಕ್ಕೆ ಪುರಸ್ಕಾರ
ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ ಮಹಾನೀಯರ ಸೇವೆಯನ್ನು ಇಂದು ನಾವುಗಳು ಸ್ಮರಣೆ ಮಾಡಬೇಕಿದೆ, ಅವರ ತ್ಯಾಗ ಬಲಿದಾನದ ಫಲವಾಗಿ ಇಂದು ನಾವುಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅವರ ಆದರ್ಶಗಳು ನಮ್ಮ ಬದುಕಿಗೆ ದಾರಿ ದೀಪಗಳಾಗಬೇಕು. ನಮ್ಮ ಜೀವನಕ್ಕೆ ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಕಾಶ್, ನಗರಾಭೀವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ. ಸರ್ದಾರ್, ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ, ಮುನಿರಾ ಮುಕಾಂದರ್, ಎನ್.ಡಿ.ಕುಮಾರ್. ಪೈಲಟ್, ಅಲ್ಲಾಭಕ್ಷಿ, ಸುದರ್ಶನ್, ಭೂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
