CHITRADURGA NEWS | 20 SEPTEMBER 2026
ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಕರ್ನಾಟಕದ 2ನೇ ಅತಿದೊಡ್ಡ 53 ಅಡಿ ಗಣಪತಿ ದೇವಸ್ಥಾನ ಹೊಂದಿರುವ ಸಂಕಷ್ಟಹರ ಸಿದ್ಧಿ ವಿನಾಯಕಸ್ವಾಮಿ ದೇವಸ್ಥಾನದ ಆವರಣದಲ್ಲಿ 26ನೇ ವರ್ಷದ ಶ್ರೀಗೌರಿ ವಿಸರ್ಜನೆ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ವಿ.ವಿ.ಸಾಗರದಿಂದ ವೇದಾವತಿಗೆ 0.25 ಟಿಎಂಸಿ ನೀರು | ಮುನ್ನೆಚ್ಚರಿಕೆ ಸೂಚನೆ
ಬೆನಕನ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗೌರಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಬಳಿಕ ಚಂದ್ರವಳ್ಳಿಯ ನಿಗದಿತ ಬಾವಿಯಲ್ಲಿ ಶ್ರೀಗೌರಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ನಂತರ ದೇವಿಯ ಕೊರಳಿನ ಮುತ್ತಿನಹಾರ, ಅಲಂಕೃತ ಹೂವಿನಹಾರ, ತುಂಬು ಕಳಸದ ತೆಂಗಿನಕಾಯಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಹರಾಜು ಹಾಕಲಾಯಿತು.
ಬೆನಕನ ಬಳಗದ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ಗುರುಮೂರ್ತಿ, ಅರ್ಚಕ ಸಿದ್ಧಲಿಂಗಯ್ಯ ಹಿರೇಮಠ, ಸಿ.ಜಿ. ಶ್ರೀನಿವಾಸ, ನಾಗರಾಜ್, ಚಂದ್ರಾನಾಯಕ್, ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ, ಡಾ. ಕೆ. ಮೋಹನ್ ಕುಮಾರ್, ಬಂಕ್ ಮ್ಯಾನೇಜರ್ ರಾಜಣ್ಣ, ಸಚಿನ್, ರಾಜೇಶ್ವರಿ, ಗೀತಮ್ಮ, ರತ್ನಮ್ಮ, ಆಶಾ ಗುರುಮೂರ್ತಿ ಸೇರಿದಂತೆ ಬಳಗದ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಉಚಿತ ಆಹಾರ ಒದಗಿಸಲು ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಕಾರ್ಯಕ್ರಮದ ಅಂತ್ಯದಲ್ಲಿ ಸಕಾಲಕ್ಕೆ ಮಳೆ ಸುರಿದು ಉತ್ತಮ ಬೆಳೆ ಬರಲಿ ಎಂದು ಭಕ್ತರು ಶ್ರೀಗೌರಿಯಲ್ಲಿ ಪ್ರಾರ್ಥಿಸಿದರು. ಬಳಿಕ ನೆರೆದಿದ್ದ ಭಕ್ತರು ಪ್ರಸಾದ ಸ್ವೀಕರಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

