CHITRADURGA NEWS | 01 JULY 2026
ಚಿತ್ರದುರ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಯುಕ್ತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬಿಎಲ್‍ಓಗಳಿಗೆ ಅತ್ಯಂತ ವಿಶೇಷ ಮತದಾರರನ್ನು ಗುರುತಿಸುವ ಸಲುವಾಗಿ ಮತದಾರರ ಛಾಯಾಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಸದ್ಗುರು ಜೊತೆ ಕಾರು ಚಲಾಯಿಸಿದ ಮಾದಾರ ಚನ್ನಯ್ಯ ಶ್ರೀ
ಜಿಲ್ಲೆಯ ವಿಶೇಷ ಮತದಾರರನ್ನು ಗುರುತಿಸುವ ಸಲುವಾಗಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಯುವ ಮತದಾರರು (ಮೊದಲ ಬಾರಿಗೆ ಮತದಾನದ ಅರ್ಹತೆ ಪಡೆದವರು), ಮಹಿಳಾ ಮತದಾರರು, ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ದೂರದ, ದುರ್ಗಮ ಪ್ರದೇಶಗಳ ಮತದಾರರ ಭೇಟಿಯ ಚಿತ್ರಗಳನ್ನು ಬಿ.ಎಲ್.ಓಗಳು ಸೆರೆಹಿಡಿಯಬಹುದು.
ಪ್ರತಿ ಬಿ.ಎಲ್.ಓ ಮತದಾರರ ಒಂದು ಫೋಟೋವನ್ನು ಮಾತ್ರ ‘ಫೈಲ್ ಫಾರ್ಮಾಟ್’ನಲ್ಲಿ ಕಳುಹಿಸಬೇಕು. ಫೋಟೋ ಜೊತೆಗೆ ಮತದಾರರ ಸಂಕ್ಷಿಪ್ತ ವಿವರಣೆ (ಗರಿಷ್ಠ ಎರಡು ಸಾಲುಗಳು), ಬಿ.ಎಲ್.ಓ ಹೆಸರು, ಮೊಬೈಲ್ ಸಂಖ್ಯೆ, ಭಾಗದ ಸಂಖ್ಯೆ ಮತ್ತು ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ಸ್ಪಷ್ಟ ನಮೂದಿಸಬೇಕು.
ಫೋಟೋ ತೆಗೆಯುವಾಗ ಮತದಾರರ ಒಪ್ಪಿಗೆ ಕಡ್ಡಾಯವಾಗಿದ್ದು, ಯಾವುದೇ ವೈಯಕ್ತಿಕ ದಾಖಲೆಗಳು ಅಥವಾ ಐಡಿ ಕಾರ್ಡ್‍ಗಳು ಚಿತ್ರದಲ್ಲಿ ಕಾಣಿಸಬಾರದು.
ಬಿ.ಎಲ್.ಓಗಳು ತಮ್ಮ ಎಂಟ್ರಿಯನ್ನು ವಾಟ್ಸಾಪ್ ಸಂಖ್ಯೆ 8660586762 ಮೊಬೈಲ್ ಸಂಖ್ಯೆಗೆ ಇದೇ ಜುಲೈ 10ರೊಳಗಾಗಿ ಕಳುಹಿಸುವುದು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 01 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
ಈ ಸ್ಪರ್ಧೆಯಲ್ಲಿ ವಿಶೇಷ ಮತದಾರರನ್ನು ಗುರುತಿಸಿದ ಬಿಎಲ್‍ಒಗಳಿಗೆ ಜಿಲ್ಲಾ ಸ್ವೀಪ ಸಮಿತಿಯಿಂದ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
