CHITRADURGA NEWS | 12 SEPTEMBER 2026
ಚಿತ್ರದುರ್ಗ: ಚಿತ್ರದುರ್ಗ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸೀಬಾರ-ಗುತ್ತಿನಾಡಿನ ವಿಶ್ವಮಾನವ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರುವ ಮೂಲಕ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಹಿರಿಯೂರಿನಲ್ಲಿ ಸಮುದಾಯ ಭವನ, ವಸತಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ | ಸಚಿವ ಕೆ.ಹೆಚ್.ಮುನಿಯಪ್ಪ
ಸೆ.8 ಮತ್ತು 9ರಂದು ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಬಾಲಕರ ವೈಯಕ್ತಿಕ ವಿಭಾಗದಲ್ಲಿ ತರುಣ್ (200 ಮೀ.), ರೋಹಿತ್ (400 ಮೀ.), ಪ್ರವೀಣ್ ಕುಮಾರ್ (800 ಮೀ.), ಸಾಗರ್ (ಹರ್ಡಲ್ಸ್), ಶ್ರೇಯಸ್.ಜಿ (3000 ಮೀ. ನಡಿಗೆ), ನಂದೀಶ್ ನಾಯ್ಕ (5 ಕಿ.ಮೀ. ನಡಿಗೆ), ಪುನೀತ್.ಬಿ.ಟಿ (ಹರ್ಡಲ್ಸ್ ಹಾಗೂ ಎತ್ತರ ಜಿಗಿತ) ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲಕರ 4×100 ಹಾಗೂ 4×400 ಮೀಟರ್ ರಿಲೇ ತಂಡಗಳೂ ಪ್ರಥಮ ಸ್ಥಾನ ಪಡೆದಿವೆ.
ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿದೇವಿ ಅಖಿಲೇಶ್ವರಿ (3000 ಮೀ.), ಅಂಜಲಿ.ಜಿ.ಎ (ತ್ರಿವಿಧ ಜಿಗಿತ), ಚೇತನ (ಎತ್ತರ ಜಿಗಿತ), ಅನುಶ್ರೀ (ಸರಪಳಿ ಗುಂಡು ಎಸೆತ), ಲಾವಣ್ಯ (ಚಕ್ರ ಎಸೆತ), ಬೃಂದ (400 ಮೀ.) ಹಾಗೂ 4×100 ಮತ್ತು 4×400 ಮೀಟರ್ ರಿಲೇ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ: ಸೆ.24ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗಕ್ಕೆ | ಗೋನೂರು ಕೆರೆಗೆ ಬಾಗೀನ
ಇದಲ್ಲದೆ, ಉದಯ್.ಆರ್, ಹೇಮಂತ್, ಪಾರ್ಥ, ಹರ್ಷಿತ್ ಗೌಡ, ಪ್ರತೀಕ್.ಆರ್.ವಿ, ಮಹಾಂತೇಶ, ರೋಹಿತ್, ಧನುಷ್.ಜೆ, ತ್ರಿಶಾ, ದೀಪಿಕಾ, ಲಕ್ಷ್ಮಿ.ಆರ್, ಅನುಶ್ರೀ ಹಾಗೂ ಲಕ್ಷ್ಮಿದೇವಿ ವಿವಿಧ ವೈಯಕ್ತಿಕ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಗುಂಪು ಕ್ರೀಡೆಗಳಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದು, ಬಾಲಕರ ಬಾಲ್ ಬ್ಯಾಡ್ಮಿಂಟನ್, ವಾಲಿಬಾಲ್, ಖೋ-ಖೋ ಹಾಗೂ ಬಾಲಕಿಯರ ಕಬ್ಬಡಿ, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ಥ್ರೋಬಾಲ್ ಹಾಗೂ ಬಾಲಕಿಯರ ಥ್ರೋಬಾಲ್, ಖೋ-ಖೋ ಮತ್ತು ವಾಲಿಬಾಲ್ ತಂಡಗಳು ದ್ವಿತೀಯ ಸ್ಥಾನ ಗಳಿಸಿವೆ.
ಚೆಸ್ ವಿಭಾಗದಲ್ಲಿ ಜೋಶನ್.ಟಿ ಹಾಗೂ ಆದರ್ಶ ಪ್ರಥಮ ಸ್ಥಾನ ಪಡೆದರೆ, ಕರಾಟೆಯಲ್ಲಿ ಪ್ರವೀಣ್ ಕುಮಾರ್ ಹಾಗೂ ಚೇತನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: 13 ಸಾವಿರ ದಾಟಿದ ಹತ್ತಿ | ಇಂದಿನ ರೇಟ್ ಎಷ್ಟಿದೆ…
ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಜಿ. ಶಿವರುದ್ರಯ್ಯ, ಜಿ.ಆರ್. ಚನ್ನಬಸಪ್ಪ, ಶಿಕ್ಷಣ ಸಂಯೋಜಕರಾದ ಲೀಲಾವತಿ.ಬಿ.ಎಸ್. ಮತ್ತು ದೀಪಾ.ಎಂ, ಶಿಕ್ಷಕರಾದ ಮನು.ಎಲ್, ಪಾಪಣ್ಣ.ಎಂ.ಪಿ, ಶಶೀಧರ್.ಈ, ಮುರುಳಿ ಮನೋಹರ, ಸರಿತಾ ಡಿ, ಉಮಾದೇವಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕ ವೃಂದ ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧೆಗಳಿಗೆ ಶುಭ ಹಾರೈಸಿದರು.
ವಿಶ್ವಮಾನವ ವಸತಿ ಶಾಲೆಯ ವಿದ್ಯಾರ್ಥಿಗಳ ಈ ಸಾಧನೆ ಶಾಲೆಯ ಕ್ರೀಡಾ ಪ್ರತಿಭೆ ಮತ್ತು ತರಬೇತಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

