CHITRADURGA NEWS | 02 October 2026
ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠ ವತಿಯಿಂದ ಅ.14 ರಿಂದ 22ರವರೆಗೆ 9 ದಿನಗಳ ಕಾಲ ನಡೆಯುವ ಮಧ್ಯ ಕರ್ನಾಟಕದ ವೈಚಾರಿಕ ಉತ್ಸವ ಎಂದೇ ಬಿಂಬಿತವಾಗಿರುವ ಶರಣಸಂಸ್ಕೃತಿ ಉತ್ಸವಕ್ಕೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ | ಕಟ್ಟಡಗಳ ಮೇಲೇರದಂತೆ ಬೆಸ್ಕಾಂ ಎಚ್ಚರಿಕೆ
ಅಕ್ಟೋಬರ್ 13ರಂದು ಬೆಳಗ್ಗೆ ಮಕ್ಕಳು ಹಾಗೂ ವಯಸ್ಕರಿಗಾಗಿ ವಚನ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದರೊಂದಿಗೆ ಇದೇ ದಿನ ಎರಡು ಹಂತದಲ್ಲಿ 12ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 7022063381 ಹಾಗೂ 9945122414ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ಅಕ್ಟೋಬರ್ 14ರಂದು ಬೆಳಗ್ಗೆ ಶ್ರೀಮಠದ ಆವರಣದಲ್ಲಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದಂತೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9482066565ಗೆ ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ. ಇದೇ ದಿನ ಬೆಳಗ್ಗೆ ದೇಹಾರೋಗ್ಯ ಸಮಸ್ಥಿತಿಯ ಹಿನ್ನೆಲೆಯಲ್ಲಿ ಸಾವಯವ ಪದಾರ್ಥಗಳನ್ನು ಬಳಸುವ ಹಾಗೂ ಪ್ರೋತ್ಸಾಹಿಸುವ ಹಿನ್ನೆಲೆಯಿಂದ ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆಯನ್ನು ಆಯೋಜಿಸಿದ್ದು ಇದಕ್ಕೆ ಪೂರಕ ಮಾಹಿತಿಗಾಗಿ 9880312595 ಹಾಗೂ 7019480356 ಸಂಪರ್ಕಿಸಬಹುದಾಗಿದೆ. ಜಮುರಾ ಕ್ರೀಡಾಕೂಟವೂ ಆರಂಭವಾಗಲಿದೆ.
15ರ ಗುರುವಾರ ಬಸವಾದಿ ಶಿವಶರಣರ ಚಿತ್ರವನ್ನು ಸ್ಥಳದಲ್ಲೇ ಬಿಡಿಸುವ ಸ್ಪರ್ಧೆಯನ್ನು ಎರಡು ಹಂತದಲ್ಲಿ ಏರ್ಪಡಿಸಿದೆ. ಇದಕ್ಕೆ ಅಗತ್ಯ ಮಾಹಿತಿಗಾಗಿ 7899079955 ಹಾಗೂ 9481911360ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ಮಹಿಳೆಯರಿಗಾಗಿ ಜೂನಿಯರ್, ಸೀನಿಯರ್ ಎಂದು ಎರಡು ವಿಭಾಗದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿಸರ್ಜನೆಗೆ 4 ಸಾವಿರ ಪೊಲೀಸರ ಭಾರಿ ಬಂದೋಬಸ್ತ್
ಅದಕ್ಕೆ ಬೇಕಾದ ಮಾಹಿತಿಯನ್ನು 7259605605 ಹಾಗೂ 9731332183ಗೆ ಸಂಪರ್ಕಿಸಲು ಕೋರಿದೆ. ಸಂಜೆ ಜಮುರಾ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ ಹಾಗೂ ಹಿಂದೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಫಲಕ ಹಾಗೂ ನಗದು ವಿತರಣೆಯ ಸಮಾರೋಪ ನಡೆಯಲಿದೆ. ಅಂದು ಜೀ ಕನ್ನಡ ಸರಿಗಮಪ ಗ್ರಾಂಡ್ ಜ್ಯೂರಿಗಳಿಂದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಗೀತನಮನ ಕಾರ್ಯಕ್ರಮ ನಡೆಯಲಿದೆ.
ಅ.16 ರಂದು ಕೃಷಿಮೇಳದಲ್ಲಿ ಸಾಕುಪ್ರಾಣಿಗಳ ಹಾಗೂ ಜೋಡೆತ್ತುಗಳ ಪ್ರದರ್ಶನವಿದೆ. ಭಾಗವಹಿಸಲಿಚ್ಚಿಸುವವರು 98453 96588ಗೆ ಸಂಪರ್ಕಿಸಲು ಕೋರಿದೆ. 17ರಂದು ಬೆಳಗ್ಗೆ 10.30 ಗಂಟೆಗೆ ಶ್ರೀಮಠದ ಅನುಭವ ಮಂಟಪದಲ್ಲಿ ಏಕಕಾಲದಲ್ಲಿ ಹತ್ತು ಸಾವಿರ ಜನರಿಂದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಯ್ದ ವಚನಗಳ ಸಾಮೂಹಿಕ ಗಾಯನ ನಡೆಯಲಿದೆ. ಈ ಗಾಯನದಲ್ಲಿ ಭಾಗವಹಿಸಲು 78460 33315ಗೆ ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಅ.3ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಅರುಣ್ ಶ್ಯಾಮ್ ಉದ್ಘಾಟನೆ | 6 ಲಕ್ಷಕ್ಕೂ ಅಧಿಕ ಭಕ್ತರ ನಿರೀಕ್ಷೆ
ಅಕ್ಟೋಬರ್ 13 ರಿಂದ 22ರವರೆಗೆ ಹತ್ತುದಿನಗಳ ಕಾಲ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣ ಅವರಿಂದ ಬೆಳಗ್ಗೆ 5.10 ರಿಂದ 6.45ರವರೆಗೆ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರ ನಡೆಯಲಿದೆ. 94481 30788 ಹಾಗೂ 70194 80356ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ. ಇದರೊಂದಿಗೆ ಜಯದೇವ ಜಂಗೀಕುಸ್ತಿ ಪಂದ್ಯಾವಳಿಯನ್ನು ಅಕ್ಟೋಬರ್ 22ರಂದು ಶ್ರೀಮಠದಲ್ಲಿ ಏರ್ಪಡಿಸಲಾಗಿದೆ. ಅದರ ಮಾಹಿತಿಗಾಗಿ 98453 96588 ಗೆ ಸಂಪರ್ಕಿಸಲು ಕೋರಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

