ಕ್ರೈಂ ಸುದ್ದಿ
ಕಾರು-ಬೈಕ್ ನಡುವೆ ಅಪಘಾತ ಇಬ್ಬರು ಮೃತ

Published on
ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು-ವಿವಿ ಸಾಗರ ರಸ್ತೆಯಲ್ಲಿರುವ ಹುಚ್ಚವ್ವನಹಳ್ಳಿ ಗೇಟ್ ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಹುಚ್ಚವ್ವನಹಳ್ಳಿ ಸೇತುವೆ ಬಳಿ ಅಪಘಾತ ನಡೆದಿದ್ದು, ಜಾಫರ್ ಸಾಧಿಕ್(18) ಹಾಗೂ ರಫಿಕ್(23) ಎಂಬುವವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ರಾಯಲ್ ಎನ್ ಫೀಲ್ಡ್ ಆಟೋ ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರ ಸಾವು

ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ಕೆಲ ಕ್ಷಣಗಳಿರುವಾಗಲೇ ಈ ಘಟನೆ ನಡೆದಿದ್ದು, 2023ನೇ ವರ್ಷದ ಜಿಲ್ಲೆಯಲ್ಲಿ ಹಲವು ದುರಂತ ಅಂತ್ಯಗಳಿಗೆ ಕಾರಣವಾಗಿದೆ.
Continue Reading
Related Topics:accident, car-bike, Chitradurga, two deaths, ಅಪಘಾತ, ಇಬ್ಬರ ಸಾವು, ಕಾರು-ಬೈಕ್, ಚಿತ್ರದುರ್ಗ

Click to comment