ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ಧಾರಾಕಾರ ಮಳೆ | ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆ

CHITRADURGA NEWS | 17 MAY 2024
ಚಿತ್ರದುರ್ಗ: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಚಿತ್ರದುರ್ಗಕ್ಕೆ ಮಳೆಯು ತಂಪೆರೆದಿದೆ. ಇಷ್ಟು ದಿನ ಐದು, ಹತ್ತು ನಿಮಿಷ ಸಣ್ಣ ಪ್ರಮಾಣದ ಮಳೆ ಬಂದು ಹೋಗುತ್ತಿತ್ತ. ಆದರೆ, ಶುಕ್ರವಾರ ಸಂಜೆ ಧಾರಾಕಾರವಾಗಿ ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಹೊತ್ತು ಹದವಾದ ಮಳೆಯಾಗಿದೆ.
ಮಳೆಯಿಂದ ಸಂಚಾರಕ್ಕೆ ಕೆಲಕಾಲ ತೋಂದರೆಯಾದರೂ, ನಗರದ ನಾಗರೀಕರು, ಸುತ್ತಮುತ್ತಲಿನ ಹಳ್ಳಿಗಳ ರೈತರು, ವರ್ತಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ | ಮೇ.18 ರಿಂದ 22 ರವರೆಗೆ ಧಾರಾಕಾರ ಮಳೆ
ಚಿತ್ರದುರ್ಗ ನಗರದಲ್ಲಿ ಸಂಜೆ 6.15ರ ವೇಳೆಗೆ ಶುರುವಾದ ಮಳೆ 7 ಗಂಟೆಯಾದರೂ ಹನಿಯುತ್ತಲೇ ಇತ್ತು.
ತುಸು ಬಿರುಸಾಗಿ ಸುರಿದ ಮಳೆಯ ಪರಿಣಾಮ ರಸ್ತೆ, ಚರಂಡಿ, ತಗ್ಗು ಪ್ರದೇಶಗಳಲ್ಲಿ ನೀರು ಹರಿಯಿತು.
ರಸ್ತೆಗಳಲ್ಲಿ ನೀರು ಹರಿಯುವಂತೆ ಮಳೆ ಬಂದಿದ್ದನ್ನು ಬಹಳ ದಿನಗಳ ನಂತರ ನೋಡುತ್ತಿದ್ದೇವೆ ಎಂದು ಜನ ಸಂತಸ ಹಂಚಿಕೊಂಡರು.
ಇದನ್ನೂ ಓದಿ: ನಿಮ್ಮ ಮನೆಗೆ ಕೊರಿಯರ್ ಬಂದರೆ ಎಚ್ಚರ | ಸ್ವೀಕರಿಸುವ ಮುನ್ನ ಯೋಚಿಸಿ
ಬಹಳ ದಿನಗಳ ನಂತರ ಮಳೆಯ ಶಬ್ದವನ್ನು ಆನಂದಿಸಿ, ಮಳೆಯನ್ನು ಆನಂದಿಸಲು ಮನೆಯಿಂದ ಹೊರಗೆ ಬಂದು ನೋಡುವ ದೃಶ್ಯ ಸಾಮಾನ್ಯವಾಗಿತ್ತು.
ಇದಕ್ಕೂ ಮುನ್ನಾ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ತಾಲೂಕಿನ ವಿವಿಧೆಡೆಗಳಲ್ಲಿ ಮಧ್ಯಾಹ್ನ ತುಸು ಮಳೆಯಾಗಿತ್ತು.
ಇದನ್ನೂ ಓದಿ: BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ
ತಂಪಾದ ಮಳೆಯಿಂದ ಭೂಮಿ ಹದವಾಗಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಲು ಈಗ ಸಕಾಲವಾಗಿದೆ.
ಚಿತ್ರದುರ್ಗ ಹಾಗೂ ಸುತ್ತಮುತ್ತಾ ಸುರಿದಿರುವ ಸುರಿದ ಮಳೆಯಿಂದಾಗಿ ನಗರದ ನಾಗರೀಕರು ಹಾಗೂ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಕುರಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಮಳೆಯಿಂದ ತುಸು ನೆಮ್ಮದಿ ದೊರೆತಂತಾಗಿದೆ.
ಗುರುವಾರ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ:
ಗುರುವಾರ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಲ್ಲ್ಲಿ 26.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ.
ಇದನ್ನೂ ಓದಿ: ಭರವಸೆ ಮೂಡಿಸಿದ ಮಳೆರಾಯ | ಚಿಕ್ಕಜಾಜೂರು ಭಾಗದಲ್ಲಿ ಹದ ಮಳೆ
ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದಲ್ಲಿ 15.2 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 1.6ಮಿ.ಮೀ, ಇಕ್ಕನೂರಿನಲ್ಲಿ 15.4ಮಿ.ಮೀ, ಬಬ್ಬೂರಿನಲ್ಲಿ 3 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ 6.4ಮಿ.ಮೀ, ಬಿ.ದುರ್ಗದಲ್ಲಿ 7.2 ಮಿ.ಮೀ, ಹೆಚ್.ಡಿ.ಪುರದಲ್ಲಿ 16.6 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಬಾಗೂರು 6.2 ಮಿ.ಮೀ, ಮಾಡದಕೆರೆ 3.2 ಮಿ.ಮೀ, ಶ್ರೀರಾಂಪುರದಲ್ಲಿ 4 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-2ರಲ್ಲಿ 1.6 ಮಿ.ಮೀ, ಭರಮಸಾಗರ 7.2 ಮಿ.ಮೀ, ಸಿರಿಗೆರೆ 2.2 ಮಿ.ಮೀ, ಐನಹಳ್ಳಿಯಲ್ಲಿ 14.8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಕಾಲೇಜುನಲ್ಲಿ 1st ಪಿಯುಸಿಗೆ ಉಚಿತ ಪ್ರವೇಶ | ಅರ್ಜಿ ಆಹ್ವಾನ
