CHITRADURGA NEWS | 15 MARCH 2026
ಚಿತ್ರದುರ್ಗ: ಶಾಲಾ ಆವರಣದಲ್ಲಿ ಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯನ್ನು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಭೇಟಿ ಮಾಡಿ ಪೋಷಕರು ಹಾಗೂ ಬಾಲಕಿಗೆ ಧೈರ್ಯ ತುಂಬಿದರು.
ತಾಲೂಕಿನ ತುರುವನೂರು ಹೋಬಳಿ ಹುಣಸೆಕಟ್ಟೆ ಸರ್ಕಾರಿ ಶಾಲೆ ಆವರಣದಲ್ಲಿ ಊಟ ಮಾಡುತ್ತಿದ್ದ 1ನೇ ತರಗತಿ ಬಾಲಕಿ ಸೃಷ್ಟಿಗೆ ನಾಗರಹಾವು ಕಚ್ಚಿತ್ತು. ಶಿಕ್ಷಕ ರವಿಶಂಕರ್ ವಿಷವನ್ನು ಬಾಯಿಂದ ಹೀರಿ ಹೊರಗೆ ಹಾಕುವ ಮೂಲಕ ಬಾಲಕಿಯ ಜೀವ ಉಳಿಸಿದ್ದರು.
ಇದನ್ನೂ ಓದಿ: ಬಾಲಕಿಗೆ ಕಚ್ಚಿದ ನಾಗರಹಾವು | ಬಾಯಿಂದಲೇ ವಿಷ ತೆಗೆದ ಶಿಕ್ಷಕ ರವಿಶಂಕರ್ ಸಮಯಪ್ರಜ್ಞೆ | ಇಬ್ಬರಿಗೂ ಚಿಕಿತ್ಸೆ
ಈ ವಿಷಯ ತಿಳಿದ ಶಾಸಕರು ನಗರದ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಬಾಲಕಿಯ ಆರೋಗ್ಯ ಕುರಿತು ಮಾಹಿತಿ ಪಡೆದರು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕ ರವಿಶಂಕರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಶಾಸಕರು, ವಿದ್ಯಾರ್ಥಿನಿ ಮತ್ತು ಶಿಕ್ಷಕ ಇಬ್ಬರ ಆರೋಗ್ಯವನ್ನು ವಿಚಾರಿಸಿದ್ದು ಆರೋಗ್ಯ ಸುಧಾರಣೆ ಆಗುತ್ತಿದೆ. ಯಾವ ತೊಂದರೆ ಇಲ್ಲ. ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ಮತ್ತು ವೈಯಕ್ತಿಕವಾಗಿ ನೀಡಲಾಗುತ್ತದೆ. ಮಗುವಿನ ಆರೋಗ್ಯ ಸುಧಾರಣೆ ಆಗುತ್ತಿದ್ದು ಸಂಬಂಧಿಸಿದ ವೈದ್ಯರಿಗೆ ಯಾವುದೇ ಕೊರತೆ ಆಗದಂತೆ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಈ ಬಗ್ಗೆ ಕುಟುಂಬದವರು ಆತಂಕಪಡುವ ಅವಶ್ಯಕತೆ ಇಲ್ಲ. ಕುಟುಂಬದ ಜೊತೆ ನಾವಿದ್ದೇವೆ ಎಂದು ಸಂತ್ವಾನ ಹೇಳಿದರು.
ಇದನ್ನೂ ಓದಿ: ಭೀಕರ ಅಪಘಾತ | ಮೂವರು ಪೊಲೀಸ್ ಅಧಿಕಾರಿಗಳು ಸಾವು | ಹೆಗ್ಗೆರೆ ಬಳಿ ಘಟನೆ
ವಿದ್ಯಾರ್ಥಿನಿಗೆ ಹಾವು ಕಡಿದಿರುವ ಘಟನೆ ತುಂಬಾ ಸೂಕ್ಷ್ಮ ವಿಚಾರವಾಗಿದ್ದು ಇಂತಹ ಸಮಯದಲ್ಲಿ ಶಾಲೆಯ ಶಿಕ್ಷಕರು ತಮ್ಮ ಜೀವದ ಹಂಗು ತೊರೆದು ಬಾಲಕಿಯ ಜೀವ ರಕ್ಷಣೆ ಮಾಡಿದ್ದಾರೆ. ಶಿಕ್ಷಕ ರವಿಶಂಕರ್ ಅವರಿಗೆ ಕೋಟಿ ನಮನಗಳು ಎಂದ ಶಾಸಕರು. ತಮ್ಮ ಜೀವ ಲೆಕ್ಕಿಸದೇ ಹಾವಿನ ವಿಷ ತೆಗೆದು ಸಮಯ ಪ್ರಜ್ಞೆ ಮೆರೆದಿದ್ದು ಅವರ ಕಾರ್ಯ ಎಲ್ಲಾರಿಗೂ ಮಾದರಿಯಾಗಲಿದೆ ಎಂದರು.
ಶಾಲೆಗಳಲ್ಲಿ ಶಿಕ್ಷಕರು ತಮ್ಮ ಶಾಲೆಯ ಅಕ್ಕ ಪಕ್ಕದಲ್ಲಿ ಸ್ವಚ್ಚತಗೆ ಒತ್ತು ನೀಡಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದೇನೆ.
ಈ ಸಂದರ್ಭದಲ್ಲಿ ಡಿಡಿಪಿಐ ಮಂಜುನಾಥ್, ಜಿ.ಪಂ. ಮಾಜಿ ಸದಸ್ಯ ಜಿ.ಟಿ.ಬಾಬುರೆಡ್ಡಿ, ಅಹೋಬಲ ಟಿವಿಎಸ್ ಮಾಲಿಕ ಪಿ.ವಿ.ಅರುಣ್ ಕುಮಾರ್, ಶಿಕ್ಷಣ ಇಲಾಖೆ ಮಂಜುಬಾಬು ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
