
CHITRADURGA NEWS | 14 MAY 2024
ಚಿತ್ರದುರ್ಗ: ಚಿತ್ರದುರ್ಗದ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದಿಂದ ಮೇ.19 ಭಾನುವಾರ ರಾಜ್ಯಮಟ್ಟದ ಸರ್ವ ಧರ್ಮ ವಧು ವರರ ಸಮಾವೇಶ ಆಯೋಜಿಸಲಾಗಿದೆ.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಧು-ವರರ ಸಮಾವೇಶ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹಾಗೂ ಜಗದ್ಗುರು ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು., ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್, ಹಿರಿಯ ಪತ್ರಕರ್ತ ದೊಣೇಹಳ್ಳಿ ಗುರುಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ಕೇಂದ್ರದ ಸಂಚಾಲಕ ಜೆ.ಎಂ.ಜಂಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತಪ್ಪಿದ ಭಾರೀ ಅನಾಹುತ | 49 ಪ್ರಯಾಣಿಕರ ಜೀವ ಉಳಿಸಿದ ಐರಾವತ ಬಸ್ ಚಾಲಕ
ವಧು-ವರರ ಮಾಹಿತಿ ಕೇಂದ್ರ 1996-97ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ ಹಲವು ರಾಜ್ಯಮಟ್ಟದ ಸಮಾವೇಶಗಳನ್ನು ನಡೆಸಿದೆ. ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲರನ್ನೂ ಒಳಗೊಂಡ ವಿವಾಹ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
ವಧು ಹಾಗೂ ವರ ಪರಸ್ಪರ, ಭೇಟಿಯಾಗಿ, ಚರ್ಚೆ ನಡೆಸಿ ಮುಂದೆ ಅವರು ಪರಸ್ಪರ ಒಪ್ಪಿಕೊಂಡು ಕಲ್ಯಾಣ ಮಹೋತ್ಸವಗಳು ನಡೆಯಲು ಒಂದು ವೇದಿಕೆಯಾಗಿದೆ. ಈವರೆಗೆ ಸಾಕಷ್ಟು ಮದುವೆಗಳು ನಡೆದಿವೆ.
ಈಗಲೂ ಸಾರ್ವಜನಿಕರು ಪ್ರಯೋಜನೆ ಪಡೆದುಕೊಳ್ಳಲು ಜೆ.ಎಂ.ಜಂಬಯ್ಯ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9980658625 ಸಂಪರ್ಕಿಸಬಹುದಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
