CHITRADURGA NEWS | 16 May 2026
ಚಿತ್ರದುರ್ಗ: ಬರದ ಬೇಗೆಗೆ ಅಕ್ಷರಶಃ ಬೆಂದು ಹೋಗಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮಳೆರಾಯ ಪಾದಾರ್ಪಣೆ ಮಾಡಿದ್ದಾನೆ.
ಇದನ್ನೂ ಓದಿ: ಭರಮಸಾಗರದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ
ಕುಡಿಯುವ ನೀರಿಗೂ ಪರದಾಡುವ ಸ್ಥಿತಿಗೆ ತಲುಪಿದ್ದ ರೈತರು ಮಳೆಯ ಸಣ್ಣ ಸೂಚನೆಯಿಂದ ಸಂತಸಗೊಂಡಿದ್ದಾರೆ.
ಎಲ್ಲೆಲ್ಲಿ ಮಳೆಯಾಯ್ತು ?
ಗುರುವಾರ ಸಂಜೆ ಜಿಲ್ಲೆಯ ವಿವಿಧೆಡೆ ಮಳೆ ಆರ್ಭಟಿಸಿದೆ. ಭಾರೀ ಗಾಳಿ ಸಹಿತ ಬಂದ ಮಳೆಯಿಂದ ರೈತರು ಆತಂಕಕ್ಕೀಡಾಗಿದ್ದರು. ಚಳ್ಳಕೆರೆ, ಹೊಳಲ್ಕೆರೆ, ನಾಯಕನಹಟ್ಟಿ ಭಾಗದಲ್ಲಿ ಮಳೆಯಾಗಿದೆ.
ಭಾರೀ ಗಾತ್ರದ ಆಲಿಕಲ್ಲು:
ಚಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ರಾಮಸಾಗರದ ಕೃಷ್ಣ ಎಂಬುವವರ ದಾಳಿಂಬೆ ತೋಟದಲ್ಲಿ ಭಾರೀ ಗಾತ್ರದ ಆಲಿಕಲ್ಲು ಬಿದ್ದಿದೆ. ನೆಲದಲ್ಲೂ ರಾಶಿ ರಾಶಿ ಆಲಿಲಲ್ಲು ಸುರಿದಿದ್ದು, ಸುಮಾರು ಹತ್ತು ಕೆಜಿಗಿಂತ ಹೆಚ್ಚು ತೂಕದ ಆಲಿಕಲ್ಲು ಬಿದ್ದಿದ್ದು ಆತಂಕ ಮೂಡಿಸಿದೆ.
ಅಡಿಕೆ ಬೆಳೆಗಾರರಿಗೆ ತುಸು ಸಮಾಧಾನ:
ಕಳೆದ ಮೂರು ತಿಂಗಳಿಂದ ಬಿಸಿಲಿನ ಬೇಗೆಗೆ ಬೆಂದು ಹೋಗಿರುವ ಅಡಿಕೆ ಮತ್ತಿತರೆ ತೋಟಗಳಿಗೆ ತಂಪಾದ ಮಳೆ ಬೇಕು. ಕಳೆದೊಂದು ತಿಂಗಳಿಂದ ದಿನವೂ ಆಗಸ ನೋಡುತ್ತಿದ್ದ ರೈತರಿಗೆ ಜಿಲ್ಲೆಗೆ ಮಳೆ ಕಾಲಿಟ್ಟಿರುವುದು ತುಸು ಸಮಾಧಾನ ಮೂಡಿಸಿದೆ.
ಇದನ್ನೂ ಓದಿ: ಎರಡು ತಿಂಗಳ ಅಕ್ಕಿ ವಿತರಣೆ
ನಮ್ಮ ಊರಿಗೆ ಮಳೆ ಬಾರದಿದ್ದರೂ, ಇಂದು ಚಳ್ಳಕೆರೆಗೆ ಬಂದ ಮಳೆ ನಾಳೆ ಹೊಸದುರ್ಗ, ಹಿರಿಯೂರಿಗೂ ಬರಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ಕಳೆದ ಮೂರು ತಿಂಗಳಿಂದ ಟ್ಯಾಂಕರ್ ನೀರು ಹಾಯಿಸುತ್ತಿರುವ ಗೌನಹಳ್ಳಿ ಭಾಗದ ರೈತರಿಗೆ ಮಳೆಯ ತುರ್ತು ಅವಶ್ಯಕತೆಯಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
