
CHITRADURGA NEWS | 26 AUGUST 2026
ಚಿತ್ರದುರ್ಗ: ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಬಾಂಧವರಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಇದನ್ನೂ ಓದಿ: ಸೆ.2ರಂದು ಬಾಪೂಜಿ ಪ್ರಬಂಧ ಸ್ಪರ್ಧೆ | ವಿದ್ಯಾರ್ಥಿಗಳಿಗೆ ಸಿಇಒ ಡಾ.ಆಕಾಶ್ ಕರೆ
ಬಡಾ ಮಕಾನ್‌ನಿಂದ ಆರಂಭವಾದ ಮೆರವಣಿಗೆಯಲ್ಲಿ ಹೂವು, ಬಲೂನು ಹಾಗೂ ಬಣ್ಣಬಣ್ಣದ ವಸ್ತ್ರಗಳಿಂದ ಅಲಂಕರಿಸಿದ್ದ ಎತ್ತಿನಗಾಡಿಯಲ್ಲಿ ಚಾಂದಿನಿಯನ್ನು ಹೊತ್ತು ಸಾಗಲಾಯಿತು. ದ್ವಿಚಕ್ರ ವಾಹನಗಳು, ಆಟೋ, ಅಪೆ ಗಾಡಿ ಹಾಗೂ ಕಾರುಗಳಲ್ಲಿ ಹಸಿರು ಧ್ವಜಗಳನ್ನು ಹಿಡಿದುಕೊಂಡು ಪ್ರವಾದಿ ಮಹಮದ್ ಪೈಗಂಬರ್ ಹಾಗೂ ಅಲ್ಲಾಹ್ ಅವರನ್ನು ಪ್ರಾರ್ಥಿಸುತ್ತಾ ಭಕ್ತರು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯು ಹೊರಪೇಟೆ, ಗೋಪಾಲಪುರ ರಸ್ತೆ, ಉಮರ್ ಸರ್ಕಲ್, ಅಂಜುಮಾನ್ ಸರ್ಕಲ್, ಎಸ್‌ಬಿಐ ವೃತ್ತದ ಮೂಲಕ ಗಾಂಧಿ ವೃತ್ತ ತಲುಪಿ, ಅಲ್ಲಿಂದ ಆನೆಬಾಗಿಲು, ಕೋಳಿ ಬುರುಜನಟ್ಟಿ ಮೂಲಕ ಅಗಸನಕಲ್‌ನ ಮಕ್ಕಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಗಾಂಧಿ ವೃತ್ತಕ್ಕೆ ಮರಳಿದ ಮೆರವಣಿಗೆ ಅಂತ್ಯಗೊಂಡಿತು.
ಎಸ್‌ಬಿಎಂ ಸರ್ಕಲ್‌ಗೆ ಮೆರವಣಿಗೆ ಆಗಮಿಸುತ್ತಿದ್ದಂತೆ ಪೊಲೀಸರು ವಾಹನಗಳ ಸಂಚಾರವನ್ನು ನಿಯಂತ್ರಿಸಿ ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಮೆರವಣಿಗೆ ಮಾರ್ಗದಲ್ಲಿ ಬಂದ ಅಂಬ್ಯುಲೆನ್ಸ್‌ಗಳಿಗೆ ಯಾವುದೇ ತೊಂದರೆಯಾಗದಂತೆ ಭಾಗವಹಿಸಿದ್ದವರು ಸಹಕರಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಶೀತ, ಕೆಮ್ಮು, ಜ್ವರ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ
ಮೆರವಣಿಗೆಯಲ್ಲಿ ಜಾಮಿಯ ಮಸೀದಿ ಮುತವಲ್ಲಿ ಸಾಧಿಕ್, ಕಾರ್ಯದರ್ಶಿ ಮುಹಿಬ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ, ಎಂ.ಸಿ.ಓ. ಬಾಬು, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹೆಚ್. ಶಬ್ಬೀರ್‌ಭಾಷಾ, ಸೈಯದ್ ಅಲ್ಲಾಭಕ್ಷಿ, ಬಾಬು, ಸೈಯದ್ ಇಸ್ಮಾಯಿಲ್, ಎ. ಜಾಕಿರ್‌ಹುಸೇನ್ ಸೇರಿದಂತೆ ಮುಸ್ಲಿಂ ಧರ್ಮಗುರುಗಳು, ಫಕೀರಿಗಳು ಹಾಗೂ ಮದರಸಾ ಮಕ್ಕಳು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಶ್ವೇತವಸ್ತ್ರ ಧರಿಸಿದ್ದರು. ಕೆಲವರು ಕಪ್ಪು ಟೋಪಿ ಹಾಗೂ ಬಿಳಿ ಶಾಲು ಧರಿಸಿ ಗಮನ ಸೆಳೆದರು. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಹಾಗೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

