CHITRADURGA NEWS | 18 MARCH 2026
ಚಿತ್ರದುರ್ಗ: ಬರದ ಬೇಗೆಯಿಂದ ಬೇಯುತ್ತಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಬೋನಸ್ ಎಂಬಂತೆ ಭರ್ಜರಿ ಮಳೆ ಸುರಿದಿದೆ.
ಇದನ್ನೂ ಓದಿ: ಬಯಲುಸೀಮೆ ಚಿತ್ರದುರ್ಗ ನೆಲ ಗೋಡಂಬಿ ಬೆಳೆಗೆ ಸೂಕ್ತ
ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ವಿವಿಧೆಡೆ ಬುಧವಾರ ಸಂಜೆ ಆಲಿಕಲ್ಲು ಸಹಿತ ಸಾಕಷ್ಟು ಮಳೆ ಸುರಿಯಿತು.
ಬೇಸಿಗೆಯಾದ್ದರಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದರು. ಅನೇಕರು ಆತಂಕದಲ್ಲಿ ತೋಟ ಉಳಿಸುವ ಸಂಕಟದಲ್ಲಿದ್ದರು. ಆದರೆ. ಈಗ ಭಗವಂತ ಕಣ್ಣು ಬಿಟ್ಟಿದ್ದಾನೆ. ಜಿಲ್ಲೆಯಲ್ಲಿ ಬೇಸಿಗೆಯಲ್ಲೇ ಅಪರೂಪದ ಮಳೆಯಾಗಿದ್ದು ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಿದೆ.
ಒಂದು ಕಡೆ ಮಳೆ ಬಂದ ಸಂತಸವಾದರೆ, ಮತ್ತೊಂದು ಕಡೆ ಆಲಿಕಲ್ಲು ಸಹಿತ ಸುರಿದ ಮಳೆಯಿಂದ ಬೆಳೆಗಳು ಹಾನಿಯಾಗುವ ಆತಂಕ ರೈತರನ್ನು ಕಾಡಿದೆ. ಬಾಳೆ, ಪಪ್ಪಾಯ, ಅಡಿಕೆ ಸೇರಿದಂತೆ ಎಲ್ಲ ಬೆಳಗಳಿಗೂ ಆಲಿಕಲ್ಲಿನ ಹೊಡೆತದ ಹಾನಿಯಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಸಿದ್ದಾರೆ.
ಮಂಗಳವಾರ ಸುರಿದ ಮಳೆ ವಿವರ:
ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಮಳೆ ವಿವರದನ್ವಯ ಸರಾಸರಿ 3.2 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 7 ಮಿ.ಮೀ., ಚಿತ್ರದುರ್ಗ ತಾಲ್ಲೂಕು 1.6 ಮಿ.ಮೀ., ಹಿರಿಯೂರು ತಾಲ್ಲೂಕು 2.7 ಮಿ.ಮೀ., ಹೊಸದುರ್ಗ ತಾಲ್ಲೂಕು 1.7 ಮಿ.ಮೀ. ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 3.2 ಮಿ.ಮೀ. ಮಳೆಯಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 18 | ಮೆಕ್ಕೆಜೋಳ ರೇಟ್…
ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 6.7 ಮಿ.ಮೀ, ನಾಯಕನಹಟ್ಟಿ 6 ಮಿ.ಮೀ, ಪರಶುರಾಂಪುರ 8.3 ಮಿ.ಮೀ, ತಳಕು 8.2 ಮಿ.ಮೀ, ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 2.7 ಮಿ.ಮೀ, ಭರಮಸಾಗರ 0.6 ಮಿ.ಮೀ, ಹಿರೇಗುಂಟನೂರು 0.2 ಮಿ.ಮೀ, ತುರುವನೂರು 2 ಮಿ.ಮೀ, ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 1.9 ಮಿ.ಮೀ,. ಐಮಂಗಲ 1.9 ಮಿ.ಮೀ, ಧರ್ಮಪುರ 6.4 ಮಿ.ಮೀ, ಜವನಗೊಂಡನಹಳ್ಳಿ 0.5 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 0.4 ಮಿ.ಮೀ, ಮಾಡದಕೆರೆ 4.1 ಮಿ.ಮೀ,, ಮತ್ತೋಡು 1.9 ಮಿ.ಮೀ, ಶ್ರೀರಾಂಪುರ 0.2 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 4.7 ಮಿ.ಮೀ, ದೇವಸಮುದ್ರದಲ್ಲಿ 1.5 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

