
CHITRADURGA NEWS | 17 NOVEMBER 2025
ಚಿತ್ರದುರ್ಗ: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ, ಚಿತ್ರದುರ್ಗ 66/11 ಕೆ.ವಿ ಚಿತ್ರದುರ್ಗ, ಭರಮಸಾಗರ, ಸಿರಿಗೆರೆ, ವಿಜಾಪುರ, ಹಿರೆಗುಂಟನೂರು, ಪಂಡರಹಳ್ಳಿ, ಹೆಚ್.ಡಿ.ಪುರ, ಚಿತ್ರಹಳ್ಳಿ, ಮಾದನಾಯಕನಹಳ್ಳಿ, ತುರುವನೂರು, ಬಾಲೇನಹಳ್ಳಿ, ಹೊಳಲ್ಕೆರೆ, ಜೆ.ಎನ್.ಕೋಟೆ, ಅರಸನಘಟ್ಟ ವಿ.ವಿ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ವಿ.ವಿ ಕೇಂದ್ರಗಳಿಗೆ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಈ ವಿ.ವಿ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಎನ್.ಜೆ.ವೈ ಮತ್ತು ಕೃಷಿ 11 ಕೆ.ವಿ ಮಾರ್ಗಗಳಲ್ಲಿ ಇದೇ ನವೆಂಬರ್ 18ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಚಿತ್ರದುರ್ಗ, ಭರಮಸಾಗರ, ಸಿರಿಗೆರೆ, ವಿಜಾಪುರ, ಹಿರೆಗುಂಟನೂರು, ಪಂಡರಹಳ್ಳಿ, ಹೆಚ್.ಡಿ.ಪುರ, ಚಿತ್ರಹಳ್ಳಿ, ಮಾಡನಾಯಕನಹಳ್ಳಿ, ತುರುವನೂರು, ಬಾಲೇನಹಳ್ಳಿ, ಹೊಳಲ್ಕೆರೆ, ಜೆ.ಎನ್.ಕೋಟೆ ,ಅರಸನಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳುಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದಂನ್ನಿ ಓದಿ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
ಹಿರಿಯೂರು : ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ ನ.18ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
66/11 ಕೆವಿ ಹಿರಿಯೂರು, ಭರಂಗಿರಿ ಮತ್ತು ಐಮಂಗಲ ವಿ.ವಿ ಕೇಂದ್ರಗಳಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ನವೆಂಬರ್ 17 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಹಿರಿಯೂರು ಪಟ್ಟಣದ ಅವಧಾನಿ ನಗರ, ತಾಲ್ಲೂಕು ಕಚೇರಿ, ತಾಲ್ಲೂಕು ಕಚೇರಿ ಸುತ್ತಮುತ್ತ, ಆಜಾದ್ ನಗರ, ಚಿಕ್ಕಪೇಟೆ, ತೇರುಮಲ್ಲೇಶ್ವರ ದೇವಸ್ಥಾನ ಸುತ್ತಮುತ್ತ, ಗಾಂಧಿವೃತ್ತ, ಹುಳಿಯೂರು ರಸ್ತೆಯ ಹರಿಶ್ಚಂದ್ರ ಘಾಟ್ ಸುತ್ತಮುತ್ತ, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸೀಗೇಹಟ್ಟಿ ಕೂನಿಕೆರೆ, ಕೂನಿಕೆರೆ ಕಾವಲ್ ಯರಕೇನಾಗೇನಹಳ್ಳಿ ಎವಿ ಕೊಟ್ಟಿಗೆ ಭರಂಗಿರಿ ತಳವಾರಹಟ್ಟಿ, ವಿವಿ ಪುರ ಮೇಕೇನಹಳ್ಳಿ, ಬೀರೇನಹಳ್ಳಿ, ಗೌನಹಳ್ಳಿ ಗುಡಿಹಳ್ಳಿ, ಭೂತಯ್ಯನಹಟ್ಟಿ, ಗೂಗುದ್ದು ಕುಂಟಪ್ಪನಹಟ್ಟಿ, ಐಮಂಗಲ, ಮರಡಿಹಳ್ಳಿ, ಭರಂಪುರ ಕಲ್ಲಹಟ್ಟಿ, ಸಿ.ಎನ್.ಮಾಳಿಗೆ, ಬುರುಜನರೊಪ್ಪ, ಮೇಟಿಕುರ್ಕೆ, ಎಸ್.ಜಿ.ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್‍ಸಾಬ್ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
