
CHITRADURGA NEWS 8 JANUARY 2024
ಚಿತ್ರದುರ್ಗ: ಕೇಂದ್ರ ಸಚಿವರು, ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ಮತ್ತೆ ರಾಜಕೀಯ ಕುರಿತು ನಿರಾಸಕ್ತಿ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಂಸದರ ಆದರ್ಶ ಗ್ರಾಮಗಳ ಕುರಿತು ಸರಿಯಾದ ಮಾಹಿತಿಯೊಂದಿಗೆ ಸಭೆಗೆ ಆಗಮಿಸದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭ್ರಷ್ಟ ರಾಜಕಾರಣದ ಬಗ್ಗೆ ವೈರಾಗ್ಯ | ಸಚಿವ ಎ.ನಾರಾಯಣಸ್ವಾಮಿ ಅಚ್ಚರಿಯ ಹೇಳಿಕೆ
ಇಂಥದ್ದನ್ನೆಲ್ಲಾ ನೋಡಿಯೇ ನನಗೆ ರಾಜಕೀಯ ನಿರಾಸಕ್ತಿ ಬಂದಿದೆ. ಸಭೆಗೆ ಸರಿಯಾದ ಮಾಹಿತಿ ತರಲು ಆಗದಿದ್ದರೆ ನಿಮ್ಮ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ನಿಮ್ಮ ಈ ರೀತಿಯ ವರ್ತನೆ ಜಿಲ್ಲಾ ಆಡಳಿತಕ್ಕೆ ಮಾತ್ರ ಅಲ್ಲ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ, ಮಂತ್ರಿಗಳು, ಸಂಸದರು ಎಲ್ಲರಿಗೂ ಜನ ಬೆರಳಿಟ್ಟು ಮಾತಾಡುವಂತೆ ಆಗುತ್ತದೆ ಎಂದು ಗರಂ ಆದರು.
2047ಕ್ಕೆ ಸ್ವಾವಲಂಬಿ ಭಾರತ, ಅಭಿವೃದ್ಧಿ ಹೊಂದಿದ ಭಾರತ ಎಂದು ಹೇಳುತ್ತಿದ್ದೇವೆ. ಬರೀ ಪೇಪರ್ ನಲ್ಲಿ ಮಾತ್ರ ಇರಬಾರದು. ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಆದರ್ಶ ಗ್ರಾಮಗಳಿಗೆ ನರೇಗಾ ಕೆಲಸಗಳನ್ನು ಹೊಂದಿಕೆ ಮಾಡಿಲ್ಲ. ಇದು ಯಾರ ತಪ್ಪು ಎಂದು ಪ್ರಶ್ನಿಸಿದ ಸಂಸದರು, ಅನುದಾನ ವ್ಯರ್ಥವಾದರೆ ಜವಾಬ್ದಾರಿ ಯಾರು. ಇದರಲ್ಲಿ ನಾವು ಅಪರಾಧಿಗಳಾಗುತ್ತೇವೆ ಎಂದು ಹೇಳಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
