
CHITRADURGA NEWS | 13 AUGUST 2024
ಚಳ್ಳಕೆರೆ: ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಎರಡನೇ ಸೋಮವಾರ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯ ಮಳ್ಳಿಗವಂಶಸ್ಥರು ಪರಶುರಾಮಪುರ ಹೋಬಳಿ ದೊಡ್ಡಚೆಲ್ಲೂರು ಗ್ರಾಮದ ಕಮರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಇರುವ ಹುತ್ತ ಹಾಗೂ ನಾಗರಕಲ್ಲಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: Bangladesh; ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ
ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಮುಖಂಡ ರಂಗಸ್ವಾಮಿ, ಕಳೆದ ಹಲವಾರು ವರ್ಷಗಳಿಂದ ನಗರದ ಮಳ್ಳಿಗವಂಶಸ್ಥರು ಈ ಪ್ರದೇಶಕ್ಕೆ ಆಗಮಿಸಿ ನಾಗಪ್ಪನ ಪೂಜೆಯನ್ನು ಸಲ್ಲಿಸುವರು. ವಿಶೇಷವಾಗಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ದೇವರಿಗೆ ನೈವೈದ್ಯದ ರೂಪದಲ್ಲಿ ಹುಣಸೆಹುಳಿಯ ಸಂಬಾರು, ಅನ್ನವನ್ನು ದೇವರಿಗೆ ಅರ್ಪಿಸಿ ನಂತರ ಅವರು ಅದನ್ನೇ ಪ್ರಸಾದ ರೂಪದಲ್ಲಿ ಸ್ವೀಕರಿಸುವರು.
ಈ ಪದ್ದತಿಗೆ ಯಾವುದೇ ಲೋಪವಾಗದಂತೆ ನಮ್ಮ ಸಮುದಾಯ ಎಚ್ಚರಿಕೆ ವಹಿಸುತ್ತದೆ. ವಿಶೇಷವಾಗಿ ಸುಮಾರು 37 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಾರೆ. ಸುಮಾರು ನೂರಕ್ಕೂ ಹೆಚ್ಚು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ವರ್ಷದಲ್ಲಿ ಮದುವೆಯಾದ ನವವಿವಾಹಿತರು ಸಹ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಗಿದೆ.
ಕ್ಲಿಕ್ ಮಾಡಿ ಓದಿ: Independence Day; ಸ್ವಾತಂತ್ರ್ಯೊತ್ಸವ | ಹರ್ ಘರ್ ತಿರಂಗಾ ಅಭಿಯಾನ
ಪೂಜೆಯ ನಂತರ ಆಗಮಿಸಿದ ಎಲ್ಲಾ ಸದ್ಭಕ್ತರಿಗೆ ಪ್ರಸಾದ ಸೇವೆಯನ್ನು ನೀಡಲಾಗುತ್ತದೆ. ತದನಂತರ ಪುನಃ ಕಾಲ್ನಡಿಗೆಯಲ್ಲೇ ಚಳ್ಳಕೆರೆ ಕಾಟಪ್ಪನಹಟ್ಟಿಗೆ ಆಗಮಿಸುತ್ತಾರೆ. ಗೌಡ್ರಚಿಕ್ಕಣ್ಣ, ಪೂಜಾರಿ ರ‍್ರಣ್ಣ, ತಿಪ್ಪೇಸ್ವಾಮಿ, ರಾಜಣ್ಣ, ನಟರಾಜ್, ಈರಣ್ಣ, ದಾಸಪ್ಪರರಂಗಣ್ಣ, ಅಜ್ಜಯ್ಯ, ಮಂಜಮ್ಮ, ರೇಖಾ, ಸುಮಾ, ಭಾರತಿವೀರೇಶ್, ಶ್ರೀನಿವಾಸ್ ಮುಂತಾದವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

