
CHITRADURGA NEWS | 16 JUNE 2024
ಚಿತ್ರದುರ್ಗ: ಭೀಕರವಾಗಿ ಕೊಲೆಯಾದ ಕೆ.ಎಸ್.ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಇಂದಿನ ಸಮಾಜದಲ್ಲಿರುವ ಕಾನೂನಿನ ಅನ್ವಯ ರೇಣುಕಸ್ವಾಮಿಗೆ ನ್ಯಾಯ ದೊರೆಯಲಿ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಚಿತ್ರದುರ್ಗದಲ್ಲಿರುವ ರೇಣುಕಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಕುಟುಂಬಕ್ಕೆ ಸಾಂತ್ವಾನ ಹೇಳಿ, ಆಶೀರ್ವಾದ ನೀಡಿದರು.
ಇದನ್ನೂ ಓದಿ: ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿ | ರಂಭಾಪುರಿ ಶ್ರೀ ಒತ್ತಾಯ
ಶಿವನಗೌಡ್ರು ಕುಟುಂಬ ರೇಣುಕಸ್ವಾಮಿಯನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ. ರೇಣುಕಸ್ವಾಮಿ ಸಣ್ಣ ಜಂಗಮ ಸಮಾಜದ ಕುಟುಂಬದಲ್ಲಿ ಬೆಳೆದ ಹುಡುಗ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ. ನಟ ದರ್ಶನ್ ಅವರ ಜೊತೆಗಿದ್ದ ವ್ಯಕ್ತಿಗಳು ಯಾವುದೋ ದೋಷವನ್ನು ಗಣನೆಗೆ ತೆಗೆದುಕೊಂಡು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದು ದೊಡ್ಡ ಅಪರಾಧ. ಇದು ಧರ್ಮಕ್ಕೆ ವಿರೋಧವಾದ ಕೃತ್ಯ ಎಂದರು.
ಇದನ್ನೂ ಓದಿ: ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ
ಜಂಗಮರ ಬಡ ಕುಟುಂಬಕ್ಕೆ ದೊಡ್ಡ ಅನ್ಯಾಯ ಆಗಿದೆ. ಅವರ ಮೇಲೆ ಭಗವಂತನ ಕೃಪಾಶೀರ್ವಾದ ಇರಲಿ. ಭಗವಂತ ಶಾಂತಿ ನೆಮ್ಮದಿ, ಸಮಾಧಾನ ನೀಡಲಿ. ತಪ್ಪಿತಸ್ಥರಿಗೆ ಇಂದಿನ ಸಮಾಜದಲ್ಲಿರುವ ಕಾನೂನು ನ್ಯಾಯ ಒದಗಿಸಲಿ ಎಂದು ಆಶಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

