
CHITRADURGA NEWS | 01 FEBRUARY 2026
ಚಿತ್ರದುರ್ಗ: ಹನ್ನೆರಡನೆ ಶತಮಾನದ ಸಾಮಾಜಿಕ ಕ್ರಾಂತಿಯ ಇತಿಹಾಸದಲ್ಲಿ ಮಡಿವಾಳ ಮಾಚಿದೇವರ ಹೆಸರು ಅಚ್ಚಳಿಯದಂತಿದೆ. ಅವರು ಕೇವಲ ಶರಣರಾಗಿರದೆ, ಶರಣ ಸಂಕುಲ ಮತ್ತು ವಚನ ಸಾಹಿತ್ಯದ ರಕ್ಷಾಕವಚವಾಗಿ ಕಾರ್ಯನಿರ್ವಹಿಸಿದ್ದರು ಎಂದು ಇತಿಹಾಸ ಸಂಶೋಧಕರು ಹಾಗೂ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ ಹೇಳಿದರು.
ಇದನ್ನೂ ಓದಿ: ಐತಿಹಾಸಿಕ ಚಿತ್ರದುರ್ಗ ನೋಡಲು ವಿಶೇಷ ಪ್ಯಾಕೇಜ್ |ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನವಿಗೆ ಫಲ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಚಿದೇವರು ಕೇವಲ ನಂಬಿಕೆಯ ಆಧಾರದ ಮೇಲೆ ಬದುಕಿದವರಲ್ಲ. ಅವರು ವೇದ, ಶಾಸ್ತ್ರ, ಪುರಾಣ ಮತ್ತು ಆಗಮಗಳನ್ನು ವೈಜ್ಞಾನಿಕ ದೃಷ್ಠಿಕೋನದಿಂದ ವಿಶ್ಲೇಷಿಸಿದವರು.
ಇವು ಸಮಾಜಕ್ಕೆ ಎಷ್ಟು ಪೂರಕವಾಗಿವೆ ಎಂಬುದನ್ನು ತಾರ್ಕಿಕವಾಗಿ ವಿವರಿಸುವ ಮೂಲಕ ಅಂದಿನ ಸಮಾಜದಲ್ಲಿ ಹೊಸ ಅರಿವು ಮೂಡಿಸಿದ್ದರು ಎಂದು ತಿಳಿಸಿದ ಅವರು, ಮಡಿವಾಳ ಎಂದರೆ ಕೇವಲ ಬಟ್ಟೆ ತೊಳೆಯುವವರಲ್ಲ, ಬದಲಾಗಿ ಜನರ ಮನಸ್ಸಿನ ಅಜ್ಞಾನವೆಂಬ ಮೈಲಿಗೆಯನ್ನು ತೊಳೆಯುವ ಶಕ್ತಿ ಎಂದು ಸ್ವತಃ ಬಸವಣ್ಣನವರೇ ಮಾಚಿದೇವರನ್ನು ಕೊಂಡಾಡಿದ್ದಾರೆ. ಅವರ ಕಾಯಕ ನಿಷ್ಠೆ ಮತ್ತು ನಿರ್ಭೀತ ವ್ಯಕ್ತಿತ್ವವು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಇದನ್ನೂ ಓದಿ: ಉದ್ಯೋಗ ಮೇಳಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಿ | ಶಾಸಕ ಟಿ.ರಘುಮೂರ್ತಿ
ಶರಣ ಚಳುವಳಿಯ ಇತಿಹಾಸದಲ್ಲಿ ವೀರ ಮತ್ತು ದೇವ ಎಂಬ ಬಿರುದುಗಳಿಂದ ಅಲಂಕೃತರಾದ ಏಕೈಕ ಶರಣ ಮಡಿವಾಳ ಮಾಚಿದೇವರು. ತಮ್ಮ ಅಪ್ರತಿಮ ಕಾಯಕ ನಿಷ್ಠೆ ಮತ್ತು ವೈಚಾರಿಕ ಧೈರ್ಯ ಇಂದಿಗೂ ಆದರ್ಶಪ್ರಾಯ. ಕೇವಲ ಬಟ್ಟೆ ಒಗೆಯುವ ಕಾಯಕಕ್ಕೆ ಸೀಮಿತವಾಗದ ಮಾಚಿದೇವರು, ಸಮಾಜದ ಹೊಲಸನ್ನು ತೊಳೆಯುವ ಕ್ರಾಂತಿಕಾರಿಯಾಗಿ ಹೊರಹೊಮ್ಮಿದವರು ಎಂದು ತಿಳಿಸಿದರು.
ಮಾಚಿದೇವರ ಬದುಕಿನಲ್ಲಿ ಬಸವಣ್ಣನವರಿಗೆ ಅತ್ಯುನ್ನತ ಸ್ಥಾನವಿತ್ತು. “ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ” ಎಂಬ ಅವರ ವಚನವು ಬಸವಣ್ಣನವರ ಮೇಲಿದ್ದ ಅವರ ಅಪಾರ ಗೌರವ ಮತ್ತು ಭಕ್ತಿಯ ಸಂಕೇತವಾಗಿದೆ ಎಂದು ತಿಳಿಸಿದ ಅವರು, ಮಾಚಿದೇವರು ತಮ್ಮ ಸಾಹಸ, ಭಕ್ತಿ ಮತ್ತು ವೈಚಾರಿಕತೆಯ ಮೂಲಕ ವಚನ ಚಳುವಳಿಯ ಇತಿಹಾಸದಲ್ಲಿ ಮಹಾನ್ ಚೇತನವಾಗಿ ಅಜರಾಮರವಾಗಿದ್ದಾರೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಸಮಾಜದ ಅಶುದ್ಧತೆಯನ್ನು ತೊಳೆದು ಪರಿಶುದ್ಧತೆ ನೀಡುವ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಸುಂದರವಾಗಿ ಕಾಣಲು ಮಡಿವಾಳ ಸಮುದಾಯದ ಸೇವೆ ಸ್ತುತ್ಯರ್ಹವಾದುದು. ಇಂದಿಗೂ ದೇವಸ್ಥಾನಗಳ ಉತ್ಸವಗಳಲ್ಲಿ ದೇವರ ದಾರಿಗೆ ಬಟ್ಟೆ ಹಾಸುವ ನಡೆಮುಡಿ ಸೇವೆಯನ್ನು ಸಮುದಾಯವು ಅತ್ಯಂತ ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರೇಷ್ಮೆ ಬೆಳೆಗಾರರಿಗೆ ಕೃಷಿ ಪ್ರಶಸ್ತಿ | ಅರ್ಜಿ ಅಹ್ವಾನ
ಸಮುದಾಯವು ಈಗ ಕೇವಲ ಸಾಂಪ್ರದಾಯಿಕ ವೃತ್ತಿಗೆ ಸೀಮಿತವಾಗದೇ ಆಧುನಿಕತೆಯತ್ತ ಮುಖ ಮಾಡಿದ್ದು, ರಾಜ್ಯ ಸರ್ಕಾರದ ಮಡಿವಾಳ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಶೀಲರಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಜಿಲ್ಲಾ ಮಡಿವಾಳರ ಸಂಘ ಅಧ್ಯಕ್ಷ ಬಿ.ರಾಮಪ್ಪ, ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಗೌರವಾಧ್ಯಕ್ಷ ಡಾ.ಬಸವರಾಜು, ಮಡಿವಾಳ ಮಾಚಿದೇವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ರುದ್ರೇಶ್, ರಾಜ್ಯ ಮಡಿವಾಳರ ಸಂಘದ ಗೌರವಾಧ್ಯಕ್ಷೆ ಬಿ.ರಂಗಮ್ಮ, ಮುಖಂಡರಾದ ಪರಶುರಾಮ್, ರಂಗಸ್ವಾಮಿ, ಪ್ರಕಾಶ್, ಮಂಜುನಾಥ್, ಮಲ್ಲಿಕಾರ್ಜುನ, ಲಕ್ಷ್ಮಣ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

