CHITRADURGA NEWS | 12 JULY 2026
ಚಿತ್ರದುರ್ಗ: ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಜಿಲ್ಲಾ ಶಾಖೆಯಿಂದ 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾನ್ವಿತ ಮಾದಿಗ ವಿದ್ಯಾರ್ಥಿಗಳಿಗೆ ಶಿವಶರಣ ಮಾದಾರ ಚನ್ನಯ್ಯ ಸಭಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಟಿಇಟಿ ಪರೀಕ್ಷೆ ರದ್ದುಪಡಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಂಸದ ಗೋವಿಂದ ಕಾರಜೋಳಗೆ ಮನವಿ
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಬೇರೆ ಬೇರೆ ಜಾತಿಯವರನ್ನು ತಂದು ಪರಿಶಿಷ್ಟ ಜಾತಿಗೆ ಸೇರಿಸಿದ ಮೇಲೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕಿತ್ತು. ಅದನ್ನು ಬಿಟ್ಟು ಕೇಂದ್ರದ ಕಡೆ ಕೈ ತೋರಿಸುವುದು ಸರಿಯಲ್ಲ. ಕಾಂಗ್ರೆಸ್‍ನಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಕಿಡಿ ಕಾರಿದರು.
1950 ರಲ್ಲಿ ಮೊಟ್ಟ ಮೊದಲು ಮೀಸಲಾತಿ ಜಾರಿಯಾದಾಗ ಎಸ್ಸಿ.ಯಲ್ಲಿ ಆರು, ಎಸ್ಟಿ.ಯಲ್ಲಿ ಆರು ಜಾತಿಗಳಿದ್ದವು. ಈಗ ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳಿವೆ. ಜಾತಿ ಸೇರಿಸಿ ಸಂಖ್ಯೆಯನ್ನು ಹೆಚ್ಚಿಸುವುದು ಮುಖ್ಯವಲ್ಲ. ಮೀಸಲಾತಿಯನ್ನು ಹೆಚ್ಚಳ ಮಾಡಬೇಕಿತ್ತು. ಓ.ಬಿ.ಸಿ.ಗೆ ಮೀಸಲಾತಿ ಕೊಟ್ಟಿದೆ. ನಮಗೇಕಿಲ್ಲ. ಬೇರೆ ಬೇರೆ ಜಾತಿಯವರನ್ನು ತಂದು ಎಸ್ಸಿಗೆ ಸೇರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು?
ನಮ್ಮ ಮಕ್ಕಳು ಮುಂದುವರೆದ ಜನಾಂಗದ ಮಕ್ಕಳ ಜೊತೆ ಪೈಪೋಟಿ ಮಾಡಲು ಆಗುತ್ತಿಲ್ಲ. ಬ್ರಾಹ್ಮಣರಿಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಲಿಂಗಾಯಿತರಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆಸ ನಮಗೆ ಕೇವಲ 75 ವರ್ಷಗಳ ಇತಿಹಾಸವಿದೆ ಎನ್ನುವುದಾದರೆ ಎಷ್ಟು ಅಜಗಜಾಂತರವಿದೆ ಎನ್ನುವುದು ಗೊತ್ತಾಗುತ್ತದೆ.
ಇದನ್ನೂ ಓದಿ: ನಮ್ಮ ಜನ್ಮ ದಿನಾಚರಣೆ ಬೇಡ | ಮಠದ ವಾರ್ಷಿಕೋತ್ಸವ ಆಚರಿಸೋಣ | ಮಾದಾರ ಚನ್ನಯ್ಯ ಶ್ರೀ
ಮಾದಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಶ್ರೇಷ್ಟವಾದ ಕೆಲಸ. ಇದರಿಂದ ಬೆನ್ನು ತಟ್ಟಿ ಇನ್ನು ಹೆಚ್ಚಿನ ಸಾಧನೆಗೆ ಉತ್ತೇಜಿಸಿದಂತಾಗುತ್ತದೆ. ಇಂತಹ ಪ್ರತಿಭಾ ಪುರಸ್ಕಾರ ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ ನಡೆಯಬೇಕೆಂದು ಮಾದಿಗ ನೌಕರರಿಗೆ ತಿಳಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ ಎಲ್ಲಾ ಜಾತಿ ಜನಾಂದವರೊಡನೆ ನಮ್ಮ ಮಕ್ಕಳು ಪೈಪೋಟಿಗೆ ಸಿದ್ದರಾಗಬೇಕು. ಒಂದೊಂದು ಅಂಕಗಳಿಗೂ ಪ್ರಾಧಾನ್ಯತೆಯಿದೆ. ಮುಂದೆ ವೈದ್ಯರು, ಇಂಜಿನಿಯರ್‍ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಾಗಬೇಕೆಂಬ ಕನಸು ಕಂಡಿದ್ದೀರ. ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳಿವೆ. ಬಳಸಿಕೊಂಡು ಜೀವನದಲ್ಲಿ ಮುಂದೆ ಬರುವಂತೆ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಅಂಕ ಮುಖ್ಯವಲ್ಲ. ಸಂಸ್ಕಾರ ಮುಖ್ಯ ಎಂದು ಎಲ್ಲರೂ ಹೇಳಿದ್ದೇ ಹೇಳುತ್ತಿರುತ್ತಾರೆ. ಸರ್ಕಾರಿ ನೌಕರಿಗೆ ಹೋಗಬೇಕಾದರೆ ಒಂದೊಂದು ಅಂಕಕ್ಕೂ ಬೆಲೆಯಿದೆ. ಹಾಗಾಗಿ ಮಕ್ಕಳಿಗೆ ಅಂಕವೇ ಪ್ರಧಾನವಾಗಬೇಕು. ಬ್ರಾಹ್ಮಣರು, ಲಿಂಗಾಯಿತರ ಜೊತೆ ಪೈಪೋಟಿ ಮಾಡುವುದು ಕಷ್ಟ. ಅದಕ್ಕಾಗಿಯಾದರೂ ಮಾದಿಗ ನೌಕರರು ಒಂದಾಗಬೇಕು. ರಾಜ್ಯದಲ್ಲಿ ಮಲ ಹೊರುವ 45 ಸಾವಿರ ಪೌರ ಕಾರ್ಮಿಕರಿದ್ದಾರೆ. ಅವರುಗಳೆ ನಿಜವಾದ ಮಾದಿಗರು. ಹಾಗಾಗಿ ಒಳ ಮೀಸಲಾತಿಬೇಕು.
ಇದನ್ನೂ ಓದಿ: ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲೆಯಲ್ಲಿ ಬರ ಅಧ್ಯಯನ
ಶಿಕ್ಷಣ ನೌಕರಿಯಲ್ಲಿ ಮೀಸಲಾತಿ ಸಿಕ್ಕರೆ ಸಾಲದು. ಆರ್ಥಿಕವಾಗಿ ಮೀಸಲಾತಿ ದೊರೆಯಬೇಕು. ಆಗ 39 ಇಲಾಖೆಯಲ್ಲಿರುವ ಮಾದಿಗ ನೌಕರರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿರುವ 38 ಎಂಎಲ್‍ಎ.ಗಳಲ್ಲಿ 33 ಶಾಸಕರುಗಳು ಒಳ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಈಗಾದರೆ ಮಾದಿಗರ ಗತಿಯೇನು ಎಂದು ಪ್ರಶ್ನಿಸಿದರು?
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕಟ್ಟ ಕಡೆಯ ಸಮಾಜದ ಮಕ್ಕಳಿಗೆ ಮಾದಿಗ ನೌಕರರು ಪ್ರತಿ ವರ್ಷವೂ ಪ್ರತಿ ಪುರಸ್ಕರಿಸುವ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಹೆಚ್ಚಿನ ಅಂಕಗಳನ್ನು ಪಡೆಯುವುದರ ಜೊತೆಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಮಕ್ಕಳಿಗೆ ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ: ನವೋದಯ : 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮಾದಿಗ ನೌಕರರ ಸಂಘದ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಖಜಾಂಚಿ ಬಿ.ರುದ್ರಮುನಿ, ಉಪಾಧ್ಯಕ್ಷರುಗಳಾದ ಜೆ.ಸಿದ್ದಲಿಂಗಮ್ಮ, ಆರ್.ಜಿ.ನಾಗರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರೇಮನಾಥ್ ಹಾಗೂ ಪದಾಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

