
CHITRADURGA NEWS | 14 OCTOBER 2025
ಹೊಳಲ್ಕೆರೆ: ಭರಮಸಾಗರ ಹೋಬಳಿ ಕೊಳಾಳ್ ಗ್ರಾಮದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಚೆಕ್‍ಡ್ಯಾಂ ಮಳೆಯಿಂದ ತುಂಬಿ ಕೋಡಿ ಬಿದ್ದಿರುವ ಪರಿಣಾಮ ಶಾಸಕ ಎಂ.ಚಂದ್ರಪ್ಪ ಬಾಗಿನ ಅರ್ಪಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ | ಪ್ರತಿವಾದಿ ವಕೀಲರ ನೇಮಕಕ್ಕೆ ಅರ್ಜಿ

ನಂತರ ಮಾತನಾಡಿದ ಅವರು, ಮೂರು ಕಿ.ಮೀ. ಉದ್ದ, 28 ಅಡಿ ಆಳದಲ್ಲಿ ನೀರು ನಿಂತಿರುವುದರಿಂದ ಒಂದು ವರ್ಷ ಮಳೆ ಬಂದರೆ ಸಾಕು ಮೂರು ವರ್ಷಗಳ ಕಾಲ ರೈತರ ತೋಟಗಳಿಗೆ ಅನುಕೂಲವಾಗಲಿದೆ. ಕೆರೆಗಳ ಆಶ್ರಯವಿಲ್ಲದೆ ಕಡೆ ಡ್ಯಾಂಗಳನ್ನು ಕಟ್ಟಿಸಿರುವುದರಿಂದ ನೀರು ನಿಂತಿದೆ.
ಎರಡು ಕೆರೆಗಳಿಗೆ ಪೈಪ್‍ಲೈನ್ ಬಿಟ್ಟು ಹೋಗಿತ್ತು. ಅದಕ್ಕೂ ಹಣ ಕೊಟ್ಟಿದ್ದೇನೆ. ಕಷ್ಟಪಟ್ಟು ತೋಟಗಳನ್ನು ಮಾಡಿಕೊಳ್ಳಿ. ಉದಾಸೀನ ಬೇಡ. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್‍ಗಳನ್ನು ಕೊರೆಸಿಕೊಳ್ಳಿ. ಮೋಟಾರ್ ಪಂಪ್ ವೈರ್‍ಗಳನ್ನು ನೀಡಲಾಗುವುದು.
ಕೆರೆಗಳ ಆಶ್ರಯವಿಲ್ಲದ ಕಡೆ ಡ್ಯಾಂಗಳನ್ನು ಕಟ್ಟಿ ನೀರಿಗೆ ಅನುಕೂಲ ಮಾಡಿದ್ದೇನೆ. ಅರಬಘಟ್ಟ, ಲಿಂಗವ್ವನಾಗತಿಹಳ್ಳಿ, ಹಳೆ ರಂಗಾಪುರ, ಕೊಳಾಳ್, ಕೊಳಾಳ್ ಗೊಲ್ಲರಹಟ್ಟಿ ಗ್ರಾಮಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಯಾರು ಕೇಳದಿದ್ದರೂ ರೈತರಿಗೆ ಆಧಾರವಾಗಿರಲೆಂದು ಚೆಕ್‍ಡ್ಯಾಂ ಕಟ್ಟಿಸಿದ್ದೇನೆಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 14 | ಯಾವ ಅಡಿಕೆಗೆ ಎಷ್ಟು ರೇಟ್
ಈ ವೇಳೆ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ರಾಜಣ್ಣ, ಕಲ್ಲೇಶ್, ಹನುಮಂತಪ್ಪ, ಪ್ರಕಾಶ್, ನಾಗೇಂದ್ರಪ್ಪ, ಓಬಣ್ಣ ಸೇರಿದಂತೆ ಗ್ರಾಮದ ಮುಖಂಡರುಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
