
CHITRADURGA NEWS | 28 SEPTEMBER 2025
ಚಿತ್ರದುರ್ಗ: ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್‍ಟಿಯ ಪ್ರಮಾಣದಲ್ಲಿ ಕಡಿತ ಮಾಡಿದೆ ಇದರಿಂದ ಹಲವಾರು ಜನರಿಗೆ ಉಪಯೋಗವಾಗಿದೆ, ಇದರ ಉಪಯೋಗ ಜನತೆಗೆ ದೊರಕಿದ್ದೇಯೇ ಇಲ್ಲವೆ ಎಂಬುದನ್ನು ತಿಳಿಯುವ ಸಲುವಾಗಿ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಕಾರ್ಯಕಾರಿ ಸಮಿತಿ ವಿವಿಧ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಸಂಚಾರ ಮಾಡುವುದರ ಮೂಲಕ ಮಾಹಿತಿ ಸಂಗ್ರಹ ಮಾಡಿ, ಜನತೆಗೆ GST ಇಳಿಕೆಯ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.
ಇದನ್ನೂ ಓದಿ: ಮುರುಘಾ ಮಠದಲ್ಲಿ 5 ಸಾವಿರಕ್ಕೂ ಅಧಿಕ ಬಸವ ಭಕ್ತರಿಂದ ವಚನ ಝೇಂಕಾರ
ನಗರದ ಸಂತೇ ಹೊಂಡದ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ, ಪಕ್ಕದಲ್ಲಿನ ವಿವಿಧ ರೀತಿಯ ಅಂಗಡಿ, ಸಾಮಾನ್ಯ ಜನತೆಯನ್ನು ಭೇಟಿ ಮಾಡುವುದರ ಮೂಲಕ ಕೇಂದ್ರ ಸರ್ಕಾರದ ಜಿಎಸ್.ಟಿ.ತೆರಿಗೆ ಕಡಿಮೆ ಮಾಡಿರುವ ಬಗ್ಗೆ ಅವರನ್ನು ಮಾತನಾಡಿಸಲಾಯಿತು.
ಜಿ.ಎಸ್.ಟಿ. ಕಡಿಮೆ ಮಾಡುವುದಕ್ಕೆ ಮುನ್ನಾ ತಾವು ಮಾರಾಟ ಮಾಡುತ್ತಿದ್ದ ದರ ಹಾಗೂ ಈಗ ಮಾರಾಟ ಮಾಡುತ್ತಿದ್ದ ದರದ ಬಗ್ಗೆ ಸಂಸದರು ಪರಾಮರ್ಶೆ ಮಾಡಿ ಮಾರಾಟಗಾರರಿಗೆ ತಿಳಿ ಹೇಳಲಾಯಿತು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಕೇಂದ್ರ ಸರ್ಕಾರ ಜಿ.ಎಸ್.ಟಿ. ಇಳಿಕೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮಾನ್ಯ ಜನತೆಗೆ, ರೈತರಿಗೆ ಹಾಗೂ ಬಡವರಿಗೆ ಆಹಾರ ಪದಾರ್ಥ, ದಿನ ನಿತ್ಯ ಬಳಕೆಯಾಗುವ ವಸ್ತುಗಳ ಬೆಲೆಗಳು ಕಡಿಮೆಯಾಗಬೇಕೆಂದು ಆ.15ರ ಭಾಷಣದಲ್ಲಿ ತಿಳಿಸಿದ್ದರು.
ದೀಪಾವಳಿಗೆ ಇದರ ದರ ಕಡಿಮೆಯಾಗಲಿದೆ ಎಂದಿದ್ದರೂ ಆದರೆ ನವರಾತ್ರಿಗೆ ಕೇಂದ್ರ ಸರ್ಕಾರ ಇದರ ದರವನ್ನು ಕಡಿಮೆ ಮಾಡುವುದರ ಮೂಲಕ ಸಾಮಾನ್ಯ ಜನತೆಗೆ ಹೊರೆಯಾಗುತ್ತಿದ್ದನ್ನು ತಪ್ಪಿಸಿದ್ದಾರೆ.
ಇದನ್ನೂ ಓದಿ: KSRTC ಬಸ್ – ಲಾರಿ ನಡುವೆ ಭೀಕರ ಅಪಘಾತ | ಸಂಸದರಿಂದ ಗಾಯಾಳುಗಳ ಭೇಟಿ
ಶೇ.28 ರಷ್ಟಿದ್ದನ್ನು 18ಕ್ಕೆ, 12 ಇದಿದ್ದನ್ನು 5 ರಷ್ಟು ಮಾಡಿದೆ, ಇದರಿಂದ ಜನತೆಗೆ 8 ರಿಂದ 10 ಸಾವಿರ ರೂ.ಗಳ ಉಳಿತಾಯವಾಗಲಿದೆ. ಇದರಿಂದ ಬಡವರು ನೆಮ್ಮದಿಯಾಗಿ ಜೀವನ ಸಾಗಿಸಲು ಕಾರಣವಾಗಿದೆ. ಈಗ ಮೂರನೆ ಹಂತದಲ್ಲಿಯೂ ಸಹಾ ಜಿ.ಎಸ್.ಟಿ. ಕಡಿಮೆ ಮಾಡಲು ಕೇಂದ್ರ ಸರ್ಕಾರ ಆಲೋಚನೆ ನಡೆಸುತ್ತಿದೆ.
ಕೆಲವೇ ದಿನಗಳಲ್ಲಿ ಜಿ.ಎಸ್.ಟಿ. ಮೂರನೇ ಹಂತವೂ ಸಹಾ ಬರಲಿದೆ ಇದರಿಂದ ಆಹಾರ ಪದಾರ್ಥಗಳು ಜನರು ಉಪಯೋಗ ಮಾಡುವ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಇದರಿಂದ ಸಾಮಾನ್ಯ ಜನತೆ ಹಾಗೂ ವ್ಯಾಪಾರಸ್ಥರಿಗೂ ಸಹಾ ಉಪಯೋಗವಾಗಲಿದೆ, ಖರೀದಿ ಮಾಡುವವರ ಶಕ್ತಿ ಹೆಚ್ಚಾಗಲಿದೆ ಎಂದರು.
ಈ ಮುಂಚೆ ಜಿ.ಎಸ್.ಟಿ. ಯಿಂದ ಜನತೆಗೆ ಹೊರೆಯಾಗಿತ್ತು ಅದರ ಭಾರವನ್ನು ಕೇಂದ್ರ ಸರ್ಕಾರ ಈಗ ಕಡಿಮೆ ಮಾಡಿದೆ, ಜಿ.ಎಸ್.ಟಿ. ಪ್ರಮಾಣ ಇಳಿಕೆಯಿಂದ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ, ಜನತೆ ಬಳಕೆ ಮಾಡುವ ಸಾಮಾನ್ಯ ವಸ್ತುವಿನಿಂದ ಹಿಡಿದು ಆವರು ಬಳಸುವ ಕಾರು, ಬೈಕ್, ಟ್ರಾಕ್ಟ್ರರ್ ವಿವಿಧ ರೋಗಗಳಿಗೆ ಔಷಧಿ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಇಳಿಕೆಯಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಇದನ್ನೂ ಓದಿ: SJM ತಾಂತ್ರಿಕ ಮಹಾವಿದ್ಯಾಲಯದಲ್ಲಿ 205 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಈ ವೇಳೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧಾಪುರದ ಸುರೇಶ್, ಸಂಪತ್ ಕುಮಾರ್, ಖಂಜಾಚಿ ಮಾಧುರಿ ಗೀರಿಶ್, ಮುಖಂಡರಾದ ಡಾ.ಸಿದ್ದಾರ್ಥ ಗುಡಾರ್ಪಿ, ಮಾಜಿ ಅಧ್ಯಕ್ಷ ಎ.ಮುರಳಿ, ನಗರಸಭಾ ಸದಸ್ಯ ಸುರೇಶ್, ಶ್ರೀನಿವಾಸ್ ಮಾಜಿ ಸದಸ್ಯ ಗರಡಿ ಪ್ರಕಾಶ್, ರವಿಶಂಕರ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್ ಉಪ್ಪೇರಿಗೆನಹಳ್ಳಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ಕವನ, ಪ್ರಭು, ರಾಮಕೃಷ್ಣ ಯಾದವ್, ಪಲ್ಲವಿ ಪ್ರಸನ್ನ, ಪ್ರದೀಫ್, ಮುರಳಿ ಸೇರಿದಂತೆ ಇತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

