ಮುಖ್ಯ ಸುದ್ದಿ
BSNL ಗ್ರಾಹಕರಿಗೆ ಶುಭ ಸುದ್ದಿ | ಉಚಿತ 4ಜಿ ಸಿಮ್ ಬದಲಾವಣೆ

Published on
CHITRADURGA NEWS | 23 MARCH 2024
ಚಿತ್ರದುರ್ಗ: ಬಿಎಸ್‍ಎನ್‍ಎಲ್ ಬಳಕೆದಾರರು ಅತೀ ವೇಗದ 4ಜಿ ನೆಟ್‍ವರ್ಕ್ ಸೇವೆ ಪಡೆಯಲು ತಮ್ಮ ಹಳೆಯ ಬಿಎಸ್‍ಎನ್‍ಎಲ್ ಸಿಮ್ ಕಾರ್ಡ್‍ಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದಕ್ಕಾಗಿ ಆಧಾರ್ ಕಾರ್ಡ್, ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್‍ನೊಂದಿಗೆ ಹತ್ತಿರದ ಬಿಎಸ್‍ಎನ್‍ಎಲ್ ಗ್ರಾಹಕರ ಸೇವಾ ಕೇಂದ್ರಗಳಿಗೆ ತೆರಳಿ, ಉಚಿತವಾಗಿ ಹಳೆಯ ಸಿಮ್ ಬದಲು ಹೊಸ 4ಜಿ ಸಿಮ್ ಪಡೆಯಬಹುದಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ
ಗ್ರಾಹಕರ ಅನುಕೂಲಕ್ಕಾಗಿ ರಜಾ ದಿನಗಳಾದ ಮಾರ್ಚ್ 24 ಹಾಗೂ 31ರ ಭಾನುವಾರ, ಮಾರ್ಚ್ 29 ಗುಡ್ ಪ್ರೈಡೆ ದಿನದಂದು ಗ್ರಾಹಕ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
Continue Reading
Related Topics:4G, 4ಜಿ, BSNL, Chitradurga, Free, SIM, Upgrade, ಅಪ್ಗ್ರೇಡ್, ಉಚಿತ, ಚಿತ್ರದುರ್ಗ, ಬಿಎಸ್‍ಎನ್‍ಎಲ್, ಸಿಮ್

Click to comment