CHITRADURGA NEWS | 31 August 2026
ಚಿತ್ರದುರ್ಗ: ಚಿತ್ರದುರ್ಗಕ್ಕೆ ಗೊಬ್ಬರದ ರೇಕ್ ಪಾಯಿಂಟ್ ಮಂಜೂರು ಮಾಡುವಂತೆ ಯುವ ಕರ್ನಾಟಕ ವೇದಿಕೆಯಿಂದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಮಂತ್ರಿ ವಿ.ಸೋಮಣ್ಣ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಚಿತ್ರದುರ್ಗ ಬಂದ್ಗೆ ತೀರ್ಮಾನ | ಬರ ಘೋಷಣೆ ತಾರತಮ್ಯ, ಗುಟ್ಕಾ ನಿಷೇಧಕ್ಕೆ ಖಂಡನೆ
ಫರ್ಟಿಲೈಸರ್ ರೇಕ್ ಪಾಯಿಂಟ್ ಚಿತ್ರದುರ್ಗಕ್ಕೆ ಅತ್ಯವಶ್ಯಕವಾಗಿದ್ದು, ಸದ್ಯ ದಾವಣಗೆರೆ, ಹಾಸನದಲ್ಲಿ ಗೊಬ್ಬರದ ರೇಕ್ ಪಾಯಿಂಟ್ ಇದೆ. ಹಾಗಾಗಿ ಚಿತ್ರದುರ್ಗದಲ್ಲಿಯೂ ಗೊಬ್ಬರದ ರೇಕ್ ಪಾಯಿಂಟ್ ಆರಂಭವಾದರೆ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈಲು ಸಂಪರ್ಕ ಹಾಗೂ ರೇಕ್ ಇಳಿಸುವ ವ್ಯವಸ್ಥೆ, ಗೊಬ್ಬರ ಸಂಗ್ರಹಿಸಲು ಸೂಕ್ತವಾದ ಗೋದಾಮುಗಳ ನಿರ್ಮಾಣ, ಲೋಡಿಂಗ್ ಮತ್ತು ಅನ್ಲೋಡಿಂಗ್ಗೆ ಅಗತ್ಯ ಯಂತ್ರೋಪಕರಣಗಳ ಅಳವಡಿಕೆ, ಲಾರಿ ಹಾಗೂ ಇತರೆ ಸರಕು ವಾಹನಗಳ ಸಂಚಾರಕ್ಕೆ ಸೂಕ್ತ ರಸ್ತೆ ಸಂಪರ್ಕ.
ಕುಡಿಯುವ ನೀರು, ವಿದ್ಯುತ್, ಬೆಳಕಿನ ವ್ಯವಸ್ಥೆ, ಮಳೆ ಮತ್ತು ಹವಾಮಾನದಿಂದ ಗೊಬ್ಬರ ಹಾಳಾಗದಂತೆ ಸುರಕ್ಷಿತ ಸಂಗ್ರಹಣೆ, ರೈತರ ಹಾಗೂ ಗೊಬ್ಬರ ವಿತರಕರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರವನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ ಸಚಿವ ವಿ.ಸೋಮಣ್ಣ ಅವರಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ: ಮಳೆ ನೀರು ಸಂರಕ್ಷಣೆಗೆ ಚೆಕ್ಡ್ಯಾಂ ನಿರ್ಮಾಣಕ್ಕೆ ಆದ್ಯತೆ | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ವೇದಿಕೆಯ ಕಾರ್ಯದರ್ಶಿ ಓಬಣ್ಣ, ತಾಲ್ಲೂಕು ಅಧ್ಯಕ್ಷ ಸಚಿನ್, ಸಿದ್ದೇಶ್, ಅಣ್ಣಪ್ಪ, ಮಣಿಕಂಠ, ಮಂಜುನಾಥ್, ರೇಣುಕೇಶ್, ಪ್ರಕಾಶ್, ಲಕ್ಷ್ಮಿಪತಿ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

