CHITRADURGA NEWS | 31 AUGUST 2026
ಚಿತ್ರದುರ್ಗ: ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಜಿಲ್ಲೆಯ ಮೂರು ತಾಲೂಕುಗಳನ್ನು ಕೈ ಬಿಟ್ಟಿರುವುದು ಹಾಗೂ ಗುಟ್ಕಾ ನಿಷೇಧ ವಿರೋಧಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಚಿತ್ರದುರ್ಗ ನಗರ ಬಂದ್ ಕರೆ ನೀಡಲಾಗಿದೆ.
ಇದನ್ನೂ ಓದಿ: ಮಳೆ ನೀರು ಸಂರಕ್ಷಣೆಗೆ ಚೆಕ್ಡ್ಯಾಂ ನಿರ್ಮಾಣಕ್ಕೆ ಆದ್ಯತೆ | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ರೈತ ಸಂಘಟನೆಗಳು, ಪ್ರಗತಿಪರ, ಕನ್ನಡ ಹೋರಾಟ, ಭೂಮಿ ಮತ್ತು ವಸತಿ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಸೇರಿ ಚರ್ಚಿಸಿ ನಿರ್ಧರಿಸಲಾಗಿದೆ.
ಸೆ.೮ ಮಂಗಳವಾರ ಬೆಳಗ್ಗೆ ೬ ರಿಂದ ಸಂಜೆ ೬ ಗಂಟೆವರೆಗೆ ಚಿತ್ರದುರ್ಗ ನಗರದಲ್ಲಿ ಬಂದ್ ಆಚರಣೆಗೆ ತೀರ್ಮಾನಿಸಿದ್ದು, ಚಿತ್ರದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಒತ್ತಾಯ ಮಾಡಲು ತೀರ್ಮಾನಿಸಲಾಗಿದೆ.
ರಾಜ್ಯ ಸರ್ಕಾರ ಆರೋಗ್ಯದ ಕಾರಣ ಹೇಳಿ ಗುಟ್ಕಾ ನಿಷೇಧ ಮಾಡಿದೆ. ಧೂಮಪಾನ, ಮದ್ಯಪಾನ ಕೂಡಾ ಆರೋಗ್ಯಕ್ಕೆ ಹಾನಿಕರಕ. ಅವುಗಳನ್ನು ನಿಷೇಧ ಮಾಡಿಲ್ಲ. ಈ ನಿಲುವು ಖಂಡಿಸಿ ಬಂದ್ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಮಿಕ ಸಂಘಟನೆಗಳು, ಹೋಟೆಲ್ ಮಾಲೀಕರ ಸಂಘ, ರೈತ ಸಂಘದ ಒಕ್ಕೂಟಗಳು, ರಕ್ಷಣಾ ವೇದಿಕೆ, ವಕೀಲ ಸಂಘ, ಅಂಗಡಿ ಮಾಲೀಕರು, ಆಟೋ ಸಂಘದವರು, ದಲ್ಲಾಳಿ ಅಂಗಡಿ ಮಾಲೀಕರು, ಖಾಸಗಿ ಬಸ್ ಮಾಲೀಕರು ಬಂದ್ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
ಸಭೆಯಲ್ಲಿ ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಕಬ್ಬಿಗೆರೆ ನಾಗರಾಜ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಕುಮಾರ್ ಸಮತಳ, ಸತ್ಯಪ್ಪ ಮಲ್ಲಾಪುರ, ಸೂರಪ್ಪ, ಶೇಖರಪ್ಪ, ಚಂದ್ರಪ್ಪ, ನಿಂಗರಾಜ್, ಜ್ಯೋತಿ ಪ್ರಕಾಶ್, ಶಿವಣ್ಣ, ಸಿದ್ದಣ್ಣ, ಕಾಂತರಾಜ್, ವೀರಣ್ಣ, ರಾಮರೆಡ್ಡಿ, ರವಿಕುಮಾರ್, ಬಾಗೇನಾಳ ತಿಪ್ಪೇಸ್ವಾಮಿ, ಮಾರುತಿ, ರಂಗೇಗೌಡ, ಕಾಂತರಾಜ್, ಮುದ್ದಾಪುರ ನಾಗಣ್ಣ, ಶಾಂತಮ್ಮ, ಶಿವಕುಮಾರ್, ಕರಿಬಸಣ್ಣ, ಮಲ್ಲಿಕಾರ್ಜುನ್, ಕಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

